Virat Kohli: 'ಈ ಬಾರಿ ಕಪ್‌ ಕೈ ತಪ್ಪಿದೆ ಮುಂದಿನ ಬಾರಿ ಕಪ್‌ ನಮ್ದೆ'

ಸತತ 17ನೇ ಐಪಿಎಲ್‌ ಆವೃತ್ತಿಯಲ್ಲೂ ನಿರಾಸೆ ಆಗಿದೆ. ಸತತ ಗೆಲುವನ್ನು ದಾಖಲಿಸಿ ಎಲಿಮಿನೇಟರ್‌ ಪಂದ್ಯಕ್ಕೆ ಅರ್ಹತೆ ಪಡೆದಾಗ ನಮ್ಮ ತಂಡ ಎಷ್ಟು ಖುಷಿ ಪಟ್ಟಿತ್ತೋ ಅದಕ್ಕೂ ಹೆಚ್ಚಿನ ಖುಷಿಯನ್ನು, ಅಭಿಮಾನಿಗಳಾದ ನೀವು ಪಟ್ಟಿದ್ದೀರಿ ಎಂಬುದು ನನಗೆ ತಿಳಿದಿದೆ. ಛೇ ಏನು ಮಾಡುವುದು ಆ ದಿನ ರಾಜಸ್ಥಾನ ರಾಯಲ್ಸ್ ತಂಡದ್ದಾಗಿತ್ತು.

ನಿಮ್ಮ ಖುಷಿ, ಆರ್‌ಸಿಬಿ ತಂಡ ಎಲಿಮಿನೇಟರ್‌ಗೆ ಕ್ವಾಲಿಫೈ ಆದ ಖುಷಿಯನ್ನು ನಾನು ಸ್ವತಃ ನೋಡಿದ್ದೇನೆ. ಅದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿದಾಗ, ಮೈದಾನದಲ್ಲಿ ನೀವು ನೀಡಿರುವ ಪ್ರೋತ್ಸಾಹ ಎಂದೂ ಮರೆಯಲು ಸಾಧ್ಯವೇ ಇಲ್ಲ. ಅಷ್ಟೇ ಏಕೆ ನಿಮ್ಮ ಜೋಶ್‌ ಎಷ್ಟಿತ್ತೆಂದರೆ ರಾತ್ರಿ ನಾವು ಹೊಟೇಲ್‌ಗೆ ಹೊರಟಾಗಲೂ ನಾವು ತೆರಳುತ್ತಿದ್ದ ಬಸ್‌ಗೆ ಮುತ್ತಲು ಪ್ರಯತ್ನಿಸಿದ್ದಿರಿ. ಆದರೆ ಅದು ಆಗದು.

RCB Virat Kohli This Time the Cup Slips Away Next Time Victory is Assured

ಆರ್‌ಸಿಬಿ ತಂಡದ ಮೇಲಿನ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ನಿಜಕ್ಕೂ ಚಿರರುಣಿ. ಹೀಗಾಗಿಯೇ ನಾನು ಪದೇ ಪದೇ ಹೇಳುವುದು, ಬೆಂಗಳೂರು ನನ್ನ ಎರಡನೇ ತವರು ಎಂದು. ಇಲ್ಲಿನ ಜನ ನನ್ನ ಮೇಲೆ ಇಟ್ಟಿರುವ ಪ್ರೀತಿಯನ್ನು ಪದಗಳಲ್ಲಿ ಹೇಳಲು ಆಗದು. ಹೀಗಾಗಿಯೇ ಆರ್‌ಸಿಬಿ ಮ್ಯಾನೇಜ್ಮೆಂಟ್‌ ಸಹ 12ನೇ ಆಟಗಾರ ಎಂದು ಅಭಿಮಾನಿಗಳಿಗೆ ಕರೆದಿದೆ.

ಅಭಿಮಾನಕ್ಕೆ ಚಿರರುಣಿ

ನಿಮ್ಮ ಅಮೂಲ್ಯವಾದ ಸಮಯವನ್ನು ನಮಗಾಗಿ ಹಲವು ಬಾರಿ ನೀಡಿದ್ದೀರಿ. ನಾವು ನಿಮ್ಮ ನಿರೀಕ್ಷೆಗೆ ಮೀರಿ ಆಡಲು ಪ್ರಯತ್ನಿಸಿದ್ದೆವು. ಪ್ರತಿ ಬಾರಿಯೂ ನಾನು ಸಫಲನಾಗಿದ್ದೇನೆ ಎಂದು ಹೇಳಲು ತಯಾರಿಲ್ಲ. ಆದರೆ ನಿಮಗೆ ನಿರಾಸೆಯನ್ನು ಮಾಡಿಲ್ಲ ಎಂಬ ಖುಷಿ ನನಗೆ ಇದೆ. ನೀವು ಆರ್‌ಸಿಬಿ ತಂಡದ ಮೇಲೆ ಇಟ್ಟ ನಂಬಿಕೆಯನ್ನು ತಂಡದ ಆಟಗಾರರು ಹೆಮ್ಮೆಯಿಂದ ಹೆಗಲ ಮೇಲೆ ಹೊತ್ತು ಕೊಂಡು ಮೈದಾನಕ್ಕೆಇಳಿಯುತ್ತೇವೆ. ನಿಮ್ಮ ಪ್ರೀತಿ ಹಾಗೂ ವಿಶ್ವಾದ ಭಾರ ಎಷ್ಟಿದೇ ಎಂಬುದು ನಮಗೆ ಅರಿವಿದೆ.

RCB Virat Kohli This Time the Cup Slips Away Next Time Victory is Assured

ನಿಜ ಹೇಳಬೇಕಂದರೆ ನಾನು ಮೈದಾನದಲ್ಲಿ ಆಡುವಾಗ, ಇನ್ನೊಬ್ಬ ಬ್ಯಾಟರ್‌ ಜೊತೆ ಮಾತನಾಡಲು ಆಗದಷ್ಟು ನೀವು ಕೂಗುತ್ತೀರಿ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳದೇ ಕೆಲವೊಮ್ಮೆ ಸೈನ್‌ ಲ್ಯಾಂಗ್ವೇಜ್‌ನಲ್ಲೇ ಕೆಲಸ ಬಗೆ ಹರಿಸಿಕೊಂಡಿದ್ದು ಇದೆ. ಆರ್‌ಸಿಬಿ ತಂಡ ಮೂರು ಬಾರಿ ಫೈನಲ್‌ಗೆ ಪ್ರವೇಶ ಪಡೆದಿತ್ತು. ಆಗ ನಮ್ಮ ತಂಡ ಕಪ್‌ಗೆ ಮುತ್ತಿಟ್ಟೇ ಬಿಡುತ್ತದೆ ಎಂದು ನೀವು, ನಾವು ಭಾವಿಸಿದ್ದೇವು. ಆದರೆ ವಿಧಿಯ ಆಟವೇ ಬೇರೆ ಇತ್ತು.

ನನ್ನ ಬೆಳವಣಿಗೆಗೆ ಪೂರಕ

ನಾನು ಬೆಂಗಳೂರಿನ ಡ್ರೆಸ್ಸಿಂಗ್ ರೂಮ್‌ಗೆ ಪ್ರವೇಶ ಪಡೆದಾಗ ನನಗೆ ಸರಿಯಾಗಿ ಮೀಸೆಯೂ ಚಿಗುರಿರಲಿಲ್ಲ. ಆಗಷ್ಟೇ ಅಂಡರ್‌19 ವಿಶ್ವಕಪ್‌ ಗೆದ್ದು ಕೊಂಡು ಬಂದ ತಂಡದಲ್ಲಿದ್ದ ನನ್ನನ್ನು ಆರ್‌ಸಿಬಿ ತಂಡ ತಂಡದಲ್ಲಿ ಸ್ಥಾನ ನೀಡಿತು. ನನ್ನ ಬೆಳವಣಿಗೆಯಲ್ಲಿ ವ್ಯಯಕ್ತಿಕವಾಗಿ ನನ್ನ ಶ್ರಮ ಎಷ್ಟು ಮುಖ್ಯವಾಗಿದೆಯೋ, ಅಷ್ಟೇ ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್‌ ಹಾಗೂ ಅಭಿಮಾನಿಗಳ ಪಾತ್ರವೂ ಇದೆ.

ಸ್ಟೇಡಿಯಂನಲ್ಲಿ ನಾನು ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿದಾಗ ನೀವೇ ಬಾರಿಸಿದಷ್ಟು ಖುಷಿ ಪಟ್ಟಿದ್ದೀರಿ. ಶತಕವನ್ನು ಬಾರಿಸಿದಾಗಲೂ ಇದೇ ಉತ್ಸಾಹ ನಿಮ್ಮಲ್ಲಿತ್ತು. ಇನ್ನು ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ನನಗೆ ನಿಮ್ಮ ಧ್ವನಿಯೇ ಪ್ರೇರಣೆ.

RCB Virat Kohli This Time the Cup Slips Away Next Time Victory is Assured

ಈ ಬಾರಿ ಕಪ್‌ ನಮ್ದೇ

ನಮ್ಮ ತಂಡದ ಮೇಲೆ ನಿಮಗೆ ಅಭಿಮಾನ ಎಷ್ಟಿದೇ ಎಂದರೆ 'ಈ ಬಾರಿ ಕಪ್‌ ನಮ್ದೇ' ಎನ್ನುವ ಟ್ಯಾಗ್ ಲೈನ್‌ನ್ನು ಮಾಡಿ ಎದುರಾಳಿಗಳು ಇದನ್ನು ಗುನುಗುವಂತೆ ಮಾಡಿದ್ದೀರಿ. ಛೇ ಬರೀ ಅಭಿಮಾನಿಗಳಿಂದ ಸ್ವೀಕರಿಸಿದ್ದೇ ಆಯಿತು. ಅದಕ್ಕೆ ಪ್ರತಿಯಾಗಿ ನಾನು ನಿಮಗೆ ಏನು ನೀಡಲಿಲ್ಲ ಎಂಬ ನೋವು ನನಗೆ ಸದಾಕಾಲ ಇದೆ.

ಅದಕ್ಕಾಗಿ ಈಗಲೇ ಹೇಳುತ್ತಿದ್ದೇನೆ. ಇನ್ನು ಅವಕಾಶ ಬೇಕಾದಷ್ಟು ಇದೆ. ಒಳ್ಳೆಯ ತಂಡವನ್ನು ಕಟ್ಟುವ ಅವಕಾಶವೂ ಇದೆ. 18ನೇ ಬಾರಿಯ ಐಪಿಎಲ್‌ನಲ್ಲಿ ಉತ್ತಮ ತಂಡವನ್ನು ಕಟ್ಟಿ ನಿಮ್ಮ ಕನಸನ್ನು ನನಸಾಗಿಸುವ ಆಸೆ ನನ್ನದು. ಇದಕ್ಕಾಗಿ ನಾನು ನೂರಕ್ಕೆ ನೂರರಷ್ಟು ಪ್ರಯತ್ನ ಪಡುವೆ.

ನಿಮ್ಮ ಬೆಂಬಲ ಹೀಗೆ ಸದಾ ಇರಲಿ
ವಿರಾಟ್ ಕೊಹ್ಲಿ, ಆರ್‌ಸಿಬಿ ಆಟಗಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+