RCB vs CSK: ಸಿಎಸ್‌ಕೆ ಸ್ಪಿನ್ ದಾಳಿ ಎದುರಿಸಲು ವಿರಾಟ್ ಕೊಹ್ಲಿ ರಣತಂತ್ರ
ಮಾರ್ಚ್ 28ರಂದು ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ಸೆಣೆಸಲು ಆರ್‌ಸಿಬಿ ಸಜ್ಜಾಗಿದೆ. ಮೊದಲ ಆವೃತ್ತಿಯ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೂ ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿಲ್ಲ. ಈ ಬಾರಿ ಆರ್ ಸಿಬಿ ತಂಡ ಬಲಿಷ್ಠವಾಗಿದ್ದು ಸೋಲಿನ ಸರಪಳಿ ಕಳಚುವ ಉತ್ಸಾಹದಲ್ಲಿದೆ.
ಮಂಗಳವಾರದಿಂದ ಆರ್ ಸಿಬಿ ತಂಡ ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದ್ದ ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಸಿಎಸ್‌ಕೆ ತಂಡದ ಪ್ರಮುಕ ಅಸ್ತ್ರ ಸ್ಪಿನ್ ಬೌಲರ್ ಗಳಾಗಿದ್ದಾರೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ನೂರ್ ಅಹ್ಮದ್ ಪ್ರಮುಖ ಸ್ಪಿನ್ ಅಸ್ತ್ರಗಳಾಗಿದ್ದಾರೆ. ಸಿಎಸ್‌ಕೆ ಸ್ಪಿನ್ ಅಸ್ತ್ರವನ್ನು ಎದುರಿಸಲು ಆರ್ ಸಿಬಿ ವಿಶೇಷವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ವಿರಾಟ್ ಕೊಹ್ಲಿ ಸಿದ್ಧತೆ
ಚೆಪಾಕ್‌ನಲ್ಲಿ ವಿರಾಟ್ ಕೊಹ್ಲಿ ರನ್ ಗಳಿಸುವುದು ಬಹಳ ಮುಖ್ಯ, ಸ್ಪಿನ್ ವಿರುದ್ಧ ಅವರು ಆಡುವುದು ಮುಖ್ಯವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ವಿರಾಟ್ ಕೊಹ್ಲಿ ಸಿಎಸ್‌ಕೆ ಸ್ಪಿನ್ ಅಸ್ತ್ರವನ್ನು ಎದುರಿಸಲು ವಿಶೇಷವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ಕಳೆದ 8 ಬಾರಿ ಔಟಾಗಿದ್ದ ಸಂದರ್ಭದಲ್ಲಿ 7 ಬಾರಿ ಸ್ಪಿನ್ನರ್ ವಿರುದ್ಧ ಔಟಾಗಿದ್ದಾರೆ. ಆದರೆ ಇತ್ತೀಚೆಗೆ ವಿರಾಟ್ ಕೊಹ್ಲಿ ಸ್ಪಿನ್ ವಿರುದ್ಧ ಉತ್ತಮವಾಗಿ ಆಡುತ್ತಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ಜೋಡಿ ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ವಿರುದ್ಧ ಉತ್ತಮವಾಗಿ ಆಡಿದ್ದರು.

ನೂರ್ ಅಹ್ಮದ್ ನೇತೃತ್ವದ ಸಿಎಸ್‌ಕೆ ಸ್ಪಿನ್ನರ್‌ಗಳು ಮೊದಲ ಪಂದ್ಯದಲ್ಲಿಯೇ ತವರಿನ ನೆಲದಲ್ಲಿ ತಮ್ಮ ಸಾಮರ್ಥ್ಯ ಏನೆಂದು ತೋರಿಸಿದ್ದಾರೆ. ನೂರ್ ಅಹ್ಮದ್ 18 ರನ್ ನೀಡಿ 4 ವಿಕೆಟ್ ಪಡೆದರು. 10 ವರ್ಷಗಳ ನಂತರ ತಂಡಕ್ಕೆ ಮರಳಿದ ಅಶ್ವಿನ್ ಒಂದು ವಿಕೆಟ್ ಪಡೆದುಕೊಂಡರು. ಜಡೇಜಾ ವಿಕೆಟ್ ಪಡೆಯದೇ ಇದ್ದರೂ 3 ಓವರ್‌ಗಳಲ್ಲಿ ಕೇವಲ 21 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಈ ಮೂವರ ಸ್ಪಿನ್ ದಾಳಿಯನ್ನು ಎದುರಿಸಲು ಕೊಹ್ಲಿ ಆತ್ಮವಿಶ್ವಾಸದಿಂದಲೇ ಸಜ್ಜಾಗುತ್ತಿದ್ದಾರೆ.
ಮಾರ್ಚ್ 28ರಂದು ಶುಕ್ರವಾರ ಸಂಜೆ 7.30ಕ್ಕ ಈ ಪಂದ್ಯ ಆರಂಭವಾಗಲಿದೆ. ವಿರಾಟ್ ಕೊಹ್ಲಿ ಸ್ಪಿನ್ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಿದ್ದು, ರಜತ್ ಪಟಿದಾರ್ ಸ್ಪಿನ್ನರ್ ವಿರುದ್ಧ ಅದ್ಭುತ ದಾಖಲೆ ಹೊಂದಿದ್ದಾರೆ. ಫಿಲ್ ಸಾಲ್ಟ್ ಸ್ಫೋಟಕ ಆರಂಭ ನೀಡಿ, ಕೊಹ್ಲಿ, ಪಟಿದಾರ್ ಅಬ್ಬರಿಸಿದರೆ ಆರ್ ಸಿಬಿ ಈ ಬಾರಿ ಸಿಎಸ್‌ಕೆ ವಿರುದ್ಧ ಗೆಲ್ಲುವ ಸಾಧ್ಯತೆ ಇದೆ.












Click it and Unblock the Notifications