RCB: ಜಾಕೋಬ್ ಬೆಥೆಲ್ ಸೇರಿ ಮೂವರು ಆಟಗಾರರು ಆರ್‌ಸಿಬಿಯಿಂದ ಔಟ್..
RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ಎಲ್ಲರ ಚಿತ್ತ 19ರ ಆವೃತ್ತಿಯತ್ತ ನೆಟ್ಟಿದೆ. ಈ ನಡುವೆಯೇ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂವರು ಸ್ಟಾರ್ ಆಟಗಾರರನ್ನು ಕೈಬಿಡಲು ನಿರ್ಧರಿಸಿದೆ ಎನ್ನುವ ಶಾಕಿಂಗ್ ಸಂಗತಿಯೊಂದು ಹಿರಬಿದ್ದಿದೆ. ಹಾಗಾದ್ರೆ ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆಡಿದ 17 ಆವೃತ್ತಿಯಲ್ಲಿ ಆರ್‌ಸಿಬಿ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, ಕೊನೆಗೂ ಈ ಕನಸನ್ನು 18ನೇ ಆವೃತ್ತಿಯಲ್ಲಿ ಈಡೇರಿಸಿಕೊಂಡಿತು. ಈ ಮೂಲಕ ಟ್ರೋಫಿ ಇಲ್ಲ ಎನ್ನುವ ಕೊರಗಿಗೆ ತೆರೆ ಎಳೆಯಿತು. ಇದರ ಬೆನ್ನಲ್ಲೇ ಇದೀಗ 2026ರ ಐಪಿಎಲ್‌ಗೂ ಮುನ್ನ ಮೂವರು ಸ್ಟಾರ್ ಆಟಗಾರರನ್ನು ಆರ್‌ಸಿಬಿ ಕೈಬಿಡುವ ಸಾಧ್ಯತೆಯಿದೆ. ಅವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿ ಯಾರನ್ನು ಉಳಿಸಿಕೊಳ್ಳಬೇಕು ಎನ್ನುವ ಗೊಂದದಲ್ಲಿತ್ತು. ಆದರೆ, ಕೊನೆಗೂ 2025ರಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮ ಲಯ ಕಂಡುಕೊಳ್ಳುವ ಮೂಲಕ ಅದೇ ತಂಡ ಫಿಕ್ಸ್ ಆದಂತಾಗಿದೆ. ಇದರಿಂದ ತಂಡ ಬದಲಾಯಿಸುವ ಯೋಚನೆಗೂ ಪ್ರಾಂಚೈಸಿ ನಿರ್ಧಾರ ಮಾಡಿಲ್ಲ. ಆದರೆ, ಇರುವ ಕೆಲ ಆಟಗಾರರನ್ನೇ ಬಿಡುಗಡೆಗೊಳಿಸುವ ಯೋಚನೆಯಲ್ಲಿದೆ.
ಆರ್‌ಸಿಬಿ ಕಳೆದ 2025ರ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಈ ಮೂಲಕ ಬರೋಬ್ಬರಿ 18 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿ ಗೆಲ್ಲುವ ಮೂಲಕ ಅಭಿಮಾನಿಗಳ ಕನಸನ್ನು ನನಸು ಮಾಡಿದೆ. ಉತ್ತಮ ತಂಡ ಹೊಂದಿರುವ ಆರ್‌ಸಿಬಿ 2026ರ ಐಪಿಎಲ್ ಟೂರ್ನಿಯಲ್ಲೂ ಟ್ರೋಫಿ ಗೆಲ್ಲುವ ಭರವಸೆ ಹುಟ್ಟುಹಾಕಿದೆ. ಅದರಂತೆಯೇ ಮಿನಿ ಹರಾಜಿಗೆ ಎಲ್ಲಾ ಟೀಂಗಳಂತೆ ಭರ್ಜರಿ ಸಿದ್ಧತೆ ನಡೆಸಿದೆ.
ಕಳೆದ ಆವೃತ್ತಿಯಲ್ಲಿ ಆಡಿದ ಬಹುತೇಕ ಆಟಗಾರರನ್ನು ಮುಂದಿನ ಆವೃತ್ತಿಗೂ ಉಳಿಸಿಕೊಳ್ಳಲಾಗುತ್ತದೆ. ಯಾಕಂದ್ರೆ ಅಷ್ಟರ ಮಟ್ಟಿಗೆ ತಂಡ ಪ್ರದರ್ಶನ ತೋರಿ ಕಪ್ ಗೆಲುವಿಗೆ ಕಾರಣವಾಗಿದೆ. ಆದರೆ, ಈ ನಡುವೆಯೇ ಗಾಯ ಹಾಗೂ ಫಾರ್ಮ್ ಅನ್ನು ಆಧರಿಸಿ ಮಿನಿ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ಕೈ ಬಿಡುವ ಸಾಧ್ಯತೆಯಿದೆ.
ಜಾಕೋಬ್ ಬೆಥೆಲ್: 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಜಾಕೋಬ್ ಬೆಥೆಲ್ ಅವರನ್ನು ಆರ್‌ಸಿಬಿ 2.6 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿತ್ತು. ಹರಾಜಿಗೂ ಬರುವ ಮುನ್ನ ಬೆಥೆಲ್, ಇಂಗ್ಲೆಂಡ್ ವೈಟ್ ಬಾಲ್ ತಂಡಕ್ಕೆ ಆಯ್ಕೆ ಆಗಿದ್ದರು. ತಮ್ಮ ಆಲ್‌ರೌಂಡರ್ ಸಾಮರ್ಥ್ಯ ಹಿನ್ನೆಲೆ ಅವರು ದುಬಾರಿ ಬೆಲೆಯನ್ನು ಪಡೆದಿದ್ದರು. ಆದರೆ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಹಿನ್ನೆಲೆ ಅವರು ಪ್ಲೇಆಫ್ಸ್ ಪಂದ್ಯಗಳಿಂದ ಹೊರನಡೆದಿದ್ದರು.
ಅವರು ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ತವರು ಅಂಗಣದಲ್ಲಿ ಬೆಥೆಲ್ ಭರ್ಜರಿ ಅರ್ಧ ಶತಕವನ್ನು ಬಾರಿಸಿದ್ದರು. ಕಳೆದ ಆವೃತ್ತಿಯಲ್ಲಿ ಅವರ ಎಡಗೈ ಸ್ಪಿನ್ ಬೌಲಿಂಗ್ ಅನ್ನು ಬಳಕೆ ಮಾಡಿಕೊಳ್ಳಲು ಸಾಧ್ಯ ಆಗಿರಲಿಲ್ಲ. ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ನೊಂದಿಗೆ ಫ್ರಾಂಚೈಸಿ ಟ್ರೇಟ್ ಡೀಲ್ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಲುಂಗಿ ಎನ್ಗಿಡಿ: ಕಳೆದ ಬಾರಿ ನಡೆದಿದ್ದ ಮೆಗಾ ಆಕ್ಷನ್‌ನಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್ಗಿಡಿ ಅವರನ್ನು ಆರ್‌ಸಿಬಿ ಫ್ರಾಂಚೈಸಿ 1,00,00,000 ರೂಪಾಯಿಗಳನ್ನು ನೀಡಿ ಖರೀದಿ ಮಾಡಿತ್ತು. ಲುಂಗಿ ಎನ್ಗಿಡಿ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಸಿಎಸ್‌ಕೆ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಎರಡು ರನ್‌ನಿಂದ ಗೆಲ್ಲಲು ಎನ್ಗಿಡಿ ನೆರವು ನೀಡಿದ್ದರು. ಅವರು ಈ ಪಂದ್ಯದಲ್ಲಿ 30 ರನ್ ನೀಡಿ 3 ವಿಕೆಟ್ ಕಿತ್ತಿದ್ದರು.
ಆದರೆ, ಬೆಥೆಲ್ ಅವರಂತೆಯೇ ಎನ್ಗಿಡಿ ಸಹ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದರು. ಬಳಿಕ ರಾಷ್ಟ್ರೀಯ ಬದ್ಧತೆಗಳ ಕಾರಣ ಅವರು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಿನ್ನೆಲೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಬೇಕಾಯಿತು. ಬಳಿಕ ಅವರ ಬದಲಿಗೆ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಸೇರಿಸಿಕೊಳ್ಳಲಾಯಿತು.
ರಾಸಿಖ್ ದಾರ್ ಸಲಾಮ್: 6,00,00,000 ರೂಪಾಯಿಗಳಿಗೆ ರಾಯಲ್ ಚಾಲೆಂಜರ್ಡ್ ಬೆಂಗಳೂರು ಸೇರ್ಪಡೆ ಆಗುವುದಕ್ಕೂ ಮುನ್ನ ಯುವ ವೇಗಿ ರಾಸಿಖ್ ದಾರ್ ಸಲಾಮ್ ಮೂರು ವಿಭಿನ್ನ ಫ್ರಾಂಚೈಸಿಗಳ ಪರ ಆಡಿದ್ದರು. ಬೆಥೆಲ್ ಹಾಗೂ ಲುಂಗಿ ಎನ್ಗಿಡಿ ಅವರ ರೀತಿಯಲ್ಲೇ ರಾಸಿಖ್ ಸಹ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದರು. ಆದರೂ ಅವರು ತಮ್ಮ ಬೌಲಿಂಗ್‌ನಲ್ಲಿ ಹೇಳಿಕೊಳ್ಳುವಷ್ಟು ಪ್ರದರ್ಶನ ಕಂಡುಬರಲಿಲ್ಲ. ಆದ್ದರಿಂದ ಅವರನ್ಮು ಟ್ರೇಡ್ ಡೀಲ್ ಮೂಲಕ ಬದಲಾಯಿಸುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಹೀಗೆ ಆರ್‌ಸಿಬಿ ಈಗಾಗಲೇ ಉತ್ತಮ ಆಟಗಾರರನ್ನು ಹೊಂದಿದ್ದು, ಕೆಲ ಆಟಗಾರರನ್ನು ಮಿನಿ ಹರಾಜಿಗೂ ಮುನ್ನ ಬಿಡುಗಡೆಗೊಳಿಸುವ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ.
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Ananya Birla: ಆರ್‌ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಶುಭ್ಮನ್ ಗಿಲ್ ಭೇಟಿಯಾದ ಅನನ್ಯಾ ಬಿರ್ಲಾ; ಆರ್‌ಸಿಬಿ ಹೊಸ ಮಾಲೀಕನ ಸಹೋದರಿಗೆ ಗುಜರಾತ್ ಜೆರ್ಸಿನಾ ಎಂದ ನೆಟ್ಟಿಗರು -
IPL 2026: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ 'ನಮ್ಮ ಮೆಟ್ರೋ' ಪ್ರಯಾಣ ಉಚಿತ -
ಐಪಿಎಲ್‌ಗೂ ಮುನ್ನ ಆರ್‌ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
RCB Yash Dayal: ಐಪಿಎಲ್ 2026ರ ಸೀಸನ್ನಿಂದ ಸ್ಟಾರ್ ವೇಗಿ ಯಶ್ ದಯಾಳ್ ಔಟ್; ಆರ್‌ಸಿಬಿ ಅಧಿಕೃತ ಮಾಹಿತಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ












Click it and Unblock the Notifications