RCB Vs CSK: ಸಿಎಸ್‌ಕೆ ಅಲ್ಲ.. ಆರ್‌ಸಿಬಿನೇ.. ಉಲ್ಟಾ ಹೊಡೆದ ಡಬಲ್ ಗೇಮ್ ಅಂಬಟಿ ರಾಯಡು
Ambati Rayudu: ಸುಮ್ಮನೆ ಇರಲಾರದೇ ಇರುವೆ ಬಿಟ್ಟುಕೊಂಡ್ರು ಎನ್ನುವ ಕಥೆ ಸಿಎಸ್‌ಕೆ ಮಾಜಿ ಕ್ರಿಕೆಟಿಗ ಅಂಬಟಿ ರಾಯಡು ಅವರದ್ದಾಗಿತ್ತು. ಯಾಕೆ ಅಂತೀರಾ.. ಆರ್‌ಸಿಬಿಯನ್ನು ಪದೇ ಪದೇ ವ್ಯಂಗ್ಯವಾಡಿ ಅಭಿಮಾನಿಗಳ ಕೆಂಗಣಿಗೆ ಗುರಿಯಾಗುತ್ತಲಿದ್ದರು. ಇದೀಗ ಆರ್‌ಸಿಬಿ ಅಭಿಮಾನಿಗಳ ಕಾಟ ತಾಳರಾದೇ ತಮ್ಮ ವರಸೆಯನ್ನೂ ಬದಲಿಸಿದ್ದಾರೆ.
ಇತ್ತೀಚೆಗಷ್ಟೇ ಸಿಎಸ್‌ಕೆ ವಿರುದ್ಧ ಪಂದ್ಯಕ್ಕೂ ಮುನ್ನ ಆರ್‌ಸಿಬಿಯನ್ನು ಕೆಣಕಿದ್ದ ಅಂಬಟಿ ರಾಯಡು ಇದೀಗ ತಮ್ಮ ವರಸೆಯನ್ನು ಬದಲಾಯಿಸಿಬಿಟ್ಟಿದ್ದಾರೆ. ತವರು ನೆಲ ಚೆನ್ನೈನಲ್ಲೇ ಸಿಎಸ್‌ಕೆಯನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ವರ್ಷಗಳ ಬಳಿಕ ಇತಿಹಾಸವನ್ನೇ ನಿರ್ಮಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಯಾವಗಲೂ ವ್ಯಂಗ್ಯದ ಮಾತುಗಳಾಡುವ ಮೂಲಕ ಸಿಎಸ್‌ಕೆ ತಂಡದ ಮಾಜಿ ಕ್ರಿಕೆಟ್ ಆಟಗಾರ ಅಂಬಾಟಿ ರಾಯಡು ಇದೀಗ ತಮ್ಮ ವರಸೆಯನ್ನು ಬದಲಿಸಿದ್ದಾರೆ. ಅದು ಸಿಎಸ್ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ಆರ್‌ಸಿಬಿ ಮೇಲಿದ್ದ ಅವರ ಕೆಟ್ಟ ಕಣ್ಣು, ಬಾಯಿ ಸರಿಯಾಗುತ್ತಾ ಬರುತ್ತಿದೆ. ಇದಕ್ಕೆ ಹಳ್ಳಿ ಕಡೆ ಗಾದೆ ಮಾತೊಂದಿಗೆ ಗೆದ್ದೆತ್ತಿನ ಬಾಲ ಹಿಡಿಯೋದು ಅಂತಾ.. ಇದು ರಾಯಡುಗೆ ಅನ್ವಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮೊನ್ನೆ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮುಂಚೆ ಆರ್ಸಿಬಿ ಬಗ್ಗೆ ಕೀಳಾಗಿ ಮಾತನಾಡಿದ್ದ ಅಂಬಟಿ ರಾಯುಡು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುವಾಗಿದೆ ಎಂದು ಉಲ್ಟಾ ಹೊಡೆದು ವರಸೆ ಬದಲಿಸಿದ್ದಾರೆ. ಸ್ಪೋರ್ಟ್ಸ್ ವೆಬ್ಸೈಟ್ವೊಂದರ ಸಂದರ್ಶನದಲ್ಲಿ ಮಾತನಾಡಿದ ಅಂಬಾಟಿ ರಾಯುಡು, ಈ ಬಾರಿಯ ಆರ್ಸಿಬಿ ತಂಡವು ವಿಶೇಷ ರೀತಿಯಲ್ಲಿ ಕಾಣಿಸುತ್ತಿದೆ. ಅದರಲ್ಲೂ ತಂಡ ಅದ್ಭುತವಾಗಿದೆ ಎಂದೆನಿಸುತ್ತಿದೆ ಎಂದು ಹೇಳಿ ಗಮನ ಸೆಳೆದಿದ್ದಾರೆ.
ಅಲ್ಲದೆ, ಆರ್‌ಸಿಬಿ ತಂಡವು ಈ ಬಾರಿ ತುಂಬಾ ವಿಶೇಷವಾಗಿದೆ. ಏನೋ ಸಾಧಿಸುವ ಹಂಬಲ ಆರ್ಸಿಬಿ ತಂಡದಲ್ಲಿ ಎದ್ದು ಕಾಣಿಸುತ್ತಿದೆ. ಆದ್ದರಿಂದ ರಾಯಲ್ ಚಾಲೆಂಜರ್ಸ್ ತಂಡದಿಂದ ಈ ವರ್ಷ ಏನಾದರೂ ನಿರೀಕ್ಷಿಸಬಹುದು ಎಂದು ಅಂಬಾಟಿ ರಾಯುಡು ಹೇಳಿ ಅಚ್ಚರಿ ಹುಟ್ಟುಹಾಕಿದ್ದಾರೆ.
ಇದಕ್ಕೂ ಮುನ್ನ ಅಂಬಾಟಿ ರಾಯಡು ಅವರು, ಈ ಬಾರಿ ಆರ್ಸಿಬಿ ಕಪ್ ಗೆಲ್ಲಬಾರದು ಎಂದುಕೊಂಡಿದ್ದರು. ಅಲ್ಲದೆ, ಆರ್ಸಿಬಿ ತಂಡದ ಸೋಲಿಗೆ ಅವರ ತಂಡದ ಆಯ್ಕೆಯೇ ಕಾರಣ ಎಂದು ದೂರಿದ್ದರು. ಆದರೆ ಇದೀಗ ಆರ್ಸಿಬಿ ತಂಡ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನು ಗೆಲ್ಲುತ್ತಿದ್ದಂತೆ ರಾಯುಡು ತಮ್ಮ ವರಸೆಯನ್ನೇ ಬದಲಿಸಿದ್ದಾರೆ.
ಮತ್ತೆ ಮುಂದುವರೆದು ಮಾತನಾಟಿದ ರಾಯಡು ಅವರು, ಆರ್‌ಸಿಬಿ ತಂಡವು ಗೆಲ್ಲಲು ಹೆಣಗಾಡುವುದನ್ನು ನೋಡಿ ನಾನು ಸದಾ ಆನಂದಿಸುತ್ತೇನೆ. ಆದರೂ, ಅವರು ಟ್ರೋಫಿ ಗೆಲ್ಲಲಿ ಎಂದು ಬಯಸುತ್ತೇನೆ. ಆದರೆ ಈ ಬಾರಿ ಅವರು ಕಪ್ ಗೆಲ್ಲಬಾರದು. ಮುಂದೊಂದು ದಿನ ಯಾವತ್ತಾದರು ಗೆಲ್ಲಲಿ. ಈ ಸಲ ಸಿಎಸ್‌ಕೆ ತಂಡ ಟ್ರೋಫಿ ಎತ್ತಿ ಹಿಡಿಯಬೇಕೆಂದು ಅಂಬಾಟಿ ರಾಯುಡು ಹೇಳಿದ್ದರು.
ಈ ಹೇಳಿಕೆ ಬೆನ್ನಲ್ಲೇ ಆರ್ಸಿಬಿ ತಂಡವು ಸಿಎಸ್‌ಕೆ ತಂಡವನ್ನು ತವರಿನಲ್ಲಿ 17 ವರ್ಷಗಳ ಬಳಿಕ ಸೋಲಿಸಿದೆ. ಬೃಹತ್ 50 ರನ್ಗಳ ಅಂತರದಿಂದ ಎಂಬುದು ವಿಶೇಷವಾಗಿದೆ ಎಂದು ಹೇಳುವ ಮೂಲಕ ಅಂಬಾಟಿ ರಾಯಡು ಉಲ್ಟಾ ಹೊಡೆದಿದ್ದಾರೆ.
ಇವರ ಶುಗರ್ ಕೋಟ್‌ಗೆಲ್ಲಾ ನಾವು ಬೆಲೆ ಕೊಡುವುದಿಲ್ಲ. ಅಷ್ಟಕ್ಕೂ ಇವರನ್ನು ನಂಬುವುದಾದರೂ ಹೇಗೆ? ಗೆದ್ದೆತ್ತಿನ ಬಾಲ ಹಿಡಿಯುವವರನ್ನು ಯಾವತ್ತು ನಂಬಬಾರದು ಎಂದು ಆರ್‌ಸಿಬಿ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ, ಆರ್‌ಸಿಬಿ ಅಭಿಮಾನಿಗಳು ಡುಬಾಕ್ ನನ್ ಮಕ್ಳಲ್ಲ. ಸೋತರೂ, ಗೆದ್ದರೂ ಪಕ್ಷ ಬಿಟ್ಟುಕೊಡದವರು ಅಂದ್ರೆ ಅದು ಆರ್‌ಸಿಬಿ ಅಭಿಮಾನಿಗಳು ಮಾತ್ರ ಅಂತಲೂ ಅಂಬಟಿ ರಾಯಡುಗೆ ತಿರುಗೇಟು ಕೊಟ್ಟಿದ್ದಾರೆ.












Click it and Unblock the Notifications