RCB: ಟ್ರಾವಿಸ್ ಹೆಡ್‌ಗೆ ಶಾಕ್ ಕೊಟ್ಟ ಆರ್‌ಸಿಬಿ! ದೆಹಲಿ ಹೈಕೋರ್ಟ್‌ನಲ್ಲಿ ಕೇಸ್ ದಾಖಲು
ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ನಟಿಸಿದ್ದ ಜಾಹೀರಾತು ಅವರಿಗೆ ಸಂಕಷ್ಟ ತಂದಿದೆ. ಉಬರ್ ಕಂಪನಿಯ ಟ್ಯಾಕ್ಸಿ, ಬೈಕ್ ಸೇವೆ ಜಾಹೀರಾತಿನಲ್ಲಿ ಆರ್ ಸಿಬಿ ಬಗ್ಗೆ ಅವಹೇಳನ ಮಾಡಿದ ಆರೋಪದ ಮೇಲೆ ಕಂಪನಿ ಜಾಹೀರಾತು ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ.
ವೈರಲ್ ಆದ 'ಟ್ರಾವಿಸ್ ಹೆಡ್ ಜಾಹೀರಾತು'ಯಲ್ಲಿ ರಾಯಲ್ ಚಾಲೆಂಜಡ್ ಬೆಂಗಳೂರು ಎಂದು ಕರೆದಿದ್ದಕ್ಕಾಗಿ ಆರ್‌ಸಿಬಿ ದೆಹಲಿ ಹೈಕೋರ್ಟ್‌ನಲ್ಲಿ ಭಾರತದ ಪ್ರಸಿದ್ಧ ಟ್ಯಾಕ್ಸಿ ಸೇವೆ ಕಂಪನಿ ಉಬರ್ ವಿರುದ್ಧ ಮೊಕದ್ದಮೆ ಹೂಡಿದೆ. ಏಪ್ರಿಲ್ 5 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಜಾಹೀರಾತಿನಲ್ಲಿ ಅವಹೇಳನಕಾರಿ ದೃಶ್ಯಗಳನ್ನು ಸೇರಿಸಲಾಗಿದೆ ಎಂದು ಆರ್‌ಸಿಬಿ ಹೇಳಿದೆ. ಈ ಜಾಹೀರಾತಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ (ಎಸ್‌ಆರ್‌ಹೆಚ್) ಸ್ಟಾರ್ ಓಪನರ್ ಟ್ರಾವಿಸ್ ಹೆಡ್ ಕಾಣಿಸಿಕೊಂಡಿದ್ದಾರೆ, ಅಲ್ಲಿ ಅವರು ಆರ್‌ಸಿಬಿಯನ್ನು ಗುರಿಯಾಗಿಸಿಕೊಂಡು ವ್ಯಂಗ್ಯವಾಗಿ ಚಿತ್ರೀಕರಣವಾಗಿರುವುದನ್ನು ಕಾಣಬಹುದು.

1 ನಿಮಿಷದ ಜಾಹೀರಾತಿನಲ್ಲಿ, ಹೆಡ್ ಆರ್‌ಸಿಬಿಯನ್ನು 'ರಾಯಲಿ ಚಾಲೆಂಜಡ್ ಬೆಂಗಳೂರು' ಎಂದು ಬರೆಯುವದನ್ನು ನೋಡಬಹುದು. ಇದು ಆರ್ ಸಿಬಿ ಫ್ರಾಂಚೈಸಿಯ ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದ ಆರ್ ಸಿಬಿ ಉಬರ್ ಕಂಪನಿ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದಾರೆ.
ನ್ಯಾಯಾಲಯದಲ್ಲಿ ಆರ್‌ಸಿಬಿಯನ್ನು ಪ್ರತಿನಿಧಿಸುವ ವಕೀಲೆ ಶ್ವೇತಶ್ರೀ ಮಜುಂದರ್, ಯಾವುದೇ ನಕಾರಾತ್ಮಕ ಕಾಮೆಂಟ್ ಅನ್ನು ಅವಹೇಳನವೆಂದು ಪರಿಗಣಿಸಬಹುದು ಎಂದು ಹೇಳಿದ್ದಾರೆ. ಈ ಜಾಹೀರಾತು ಆರ್‌ಸಿಬಿಯ ಟ್ರೇಡ್‌ಮಾರ್ಕ್ ಅನ್ನು ಸಹ ಉಲ್ಲಂಘಿಸುತ್ತದೆ ಎಂದು ಅವರು ಹೇಳಿದರು.
"ಜಾಹೀರಾತು ಮಾಡಲು ನಿಮಗೆ ಲಕ್ಷಾಂತರ ಸೃಜನಶೀಲ ಮಾರ್ಗಗಳಿದ್ದವು. ನನ್ನ ಕಕ್ಕಚಿದಾರರ ಟ್ರೇಡ್‌ಮಾರ್ಕ್ ಬಳಸಿ ನೀವು ಅದನ್ನು ಮಾಡಬೇಕಿತ್ತೇ? ಸಮಾನತೆ, ನ್ಯಾಯಯುತ ಬಳಕೆಯ ರಕ್ಷಣೆ ಉಬರ್ ಮೋಟೋದ ಮಾನದಂಡವಾಗಿದೆಯಾ?" ಎಂದು ಪ್ರಶ್ನಿಸಿದ್ದಾರೆ.
ಕಂಪನಿ ಪರ ವಕೀಲರು ಹೇಳಿದ್ದೇನು?
ಆರ್ ಸಿಬಿ ವಾದಕ್ಕೆ ಪ್ರತಿಯಾಗಿ ಉಬರ್ ಕಂಪನಿಯ ವಕೀಲರು 'ರಾಯಲಿ ಚಾಲೆಂಜಡ್' ಎಂಬ ಪದವನ್ನು ಹಿಂದೆ ಆರ್‌ಸಿಬಿಯೊಂದಿಗೆ ಸಂಯೋಜಿಸಲಾಗಿದೆ ಎಂದು ವಾದಿಸಿದ್ದಾರೆ. ತಂಡಗಳು ಆರ್‌ಸಿಬಿ ವಿರುದ್ಧ ಹೋದಾಗಲೆಲ್ಲಾ, ಮಾಧ್ಯಮ ಸಂಸ್ಥೆಗಳು ಮತ್ತು ಪ್ರಕಟಣೆಗಳು ಈ ಪದವನ್ನು ಬಳಸಿವೆ ಎಂದು ಸಮರ್ಥನೆ ನೀಡಿದ್ದಾರೆ.
"ಹಿಂದೆ, ತಂಡಗಳು ಆರ್‌ಸಿಬಿಯನ್ನು ಸವಾಲು ಮಾಡಿದ್ದವು, ಮತ್ತು ಪಂದ್ಯದಲ್ಲಿ ಆರ್‌ಸಿಬಿಯನ್ನು ರಾಯಲ್ ಆಗಿ ಸವಾಲು ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ" ಎಂದು ವಕೀಲರು ಹೇಳಿದರು.
ಮೇ 13 ರಂದು ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ನಡುವಿನ ಪಂದ್ಯ ನಡೆಯಲಿದೆ. ಈ ದಿನಾಂಕದಂದು ಉಬರ್ ಟ್ಯಾಕ್ಸಿ ಬಳಕೆ ಬಗ್ಗೆ ಪ್ರಚಾರ ಮಾಡಲು ಜಾಹೀರಾತು ನಿರ್ಮಿಸಲಾಗಿದೆ ಎಂದು ವಕೀಲರು ಹೇಳಿದ್ದಾರೆ.












Click it and Unblock the Notifications