RCB Yash Dayal: ಆರ್‌ಸಿಬಿ ಮಾರಕ ಬೌಲರ್ ಯಶ್ ದಯಾಳ್ ಲೀಗ್‌ನಿಂದ ಔಟ್: ಅಧಿಕೃತ ಘೋಷಣೆ
RCB Yash Dayal Banned From League: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಈ ಮೂಲಕ ಟ್ರೋಫಿ ಇಲ್ಲ ಕೊರಗನ್ನು ಕೊನೆಗೂ ದೂರ ಮಾಡಿದೆ. ಆದರೆ, ಈ ನಡುವೆಯೇ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಮಾರಕ ಬೌಲರ್ ಯಶ್ ದಯಾಳ್ ಅವರನ್ನು ಲೀಗ್‌ನಿಂದ ಬ್ಯಾನ್ ಮಾಡಲಾಗಿದೆ. ಹಾಗಾದ್ರೆ, ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಈ ಕೊರಗು ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಆದರೆ, 18ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ ಗೆಲ್ಲುವ ಮೂಲಕ ಮೊಟ್ಟ ಮೊದಲ ಟ್ರೋಫಿ ತನ್ನದಾಗಿಸಿಕೊಂಡಿತು. ಇದಾದ ಬಳಿಕ ತಂಡಕ್ಕೆ ಒಂದಲ್ಲ ಒಂದು ಆಘಾತ ಎದುರಾಗುತ್ತಲಿವೆ.

ಐಪಿಎಲ್ 2025 ಫೈನಲ್ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ವೇಳೆ ಬಲಿಷ್ಠ ಪಂಜಾಬ್ ಕಿಂಗ್ ತಂಡವನ್ನು ಬಗ್ಗು ಬಡಿದು ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆದ್ದುಕೊಂಡಿತು. ಈ ಟ್ರೋಫಿ ಗೆಲುವಿಗೆ ಪ್ರಮುಖ ಕಾರಣಕರ್ತರಲ್ಲಿ ಯಶ್ ದಯಾಳ್ ಒಬ್ಬರು ಆಗಿದ್ದಾರೆ. ಇದೀಗ ಅವರನ್ನೇ ಲೀಗ್‌ನಿಂದ ಹೊರತಳ್ಳಲಾಗಿದೆ ಎನ್ನುವ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ.
ಗಾಜಿಯಾಬಾದ್ ಮತ್ತು ಜೈಪುರದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಹಿನ್ನೆಲೆ ವೇಗಿ ಯಶ್ ದಯಾಳ್ ಅವರನ್ನು ಯುಪಿ ಟಿ-20 ಲೀಗ್ ಟೂರ್ನಿಯಿಂದ ಅಮಾನತು ಮಾಡಿದೆ ಎಂದು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ. ಯುಪಿ ಟಿ-20 ಲೀಗ್ ಟೂರ್ನಿಯ ಇಂದಿನಿಂದ ಅಂದರೆ ಆಗಸ್ಟ್ 17ರಂದು ಆರಂಭ ಆಗಲಿದ್ದು, ಗೋರಖ್‌ಪುರ್ ಲಯನ್ಸ್ ಟೀಮ್ ಆಗಸ್ಟ್ 18ರಂದು ಕಾಶಿ ರುದ್ರಾಸ್ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಸೆಣಸಲಿದೆ. ಆದರೆ, ಈ ಟೂನಿರ್ನಿಯಿಂದ ಯಶ್ ದಯಾಳ್ ಅವರನ್ನು ಹೊರತಳ್ಳಲಾಗಿದೆ.
ಗಾಜಿಯಾಬಾದ್ ಪ್ರಕರಣದಲ್ಲಿ ಯಶ್ ದಯಾಳ್ ವಿವಾಹ ಆಗುವ ನೆಪದಲ್ಲಿ ಲೈಂಗಿಕ ಶೋಷಣೆ ಆರೋಪ ಎದುರಿಸುತ್ತಿದ್ದಾರೆ ಮತ್ತು ಅಲಹಾಬಾದ್ ಹೈಕೋರ್ಟ್‌ನಿಂದ ಬಂಧನದಿಂದ ರಕ್ಷಣೆ ಪಡೆದಿದ್ದಾರೆ. ಆದರೂ, ಅಪ್ರಾಪ್ತ ವಯಸ್ಕ ಒಳಗೊಂಡ ಪ್ರಕರಣದ ಸೂಕ್ಷ್ಮತೆಯನ್ನ ಪರಿಗಣಿಸಿ ಜೈಪುರ ಹೈಕೋರ್ಟ್ ಬಂಧನದಿಂದ ವಿನಾಯಿತಿ ನೀಡಲು ನಿರಾಕರಣೆ ಮಾಡಿದೆ. ವಿಚಾರಣೆಯನ್ನ ಆಗಸ್ಟ್ 22ಕ್ಕೆ ಮುಂದೂಡಿದ್ದು, ಈ ಹಿನ್ನೆಲೆ ಯಶ್ ದಯಾಳ್‌ಗೆ ಬಂಧನದ ಭೀತಿ ಎದುರಾಗಿದೆ. ಮತ್ತೊಂದೆಡೆ ಆರ್‌ಸಿಬಿಯಿಂದಲೂ ಬ್ಯಾನ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತದೆ.
ಯಶ್ ದಯಾಳ್ ಅವರನ್ನು 7 ಲಕ್ಷ ರೂಪಾಯಿಗಳಿಗೆ ಗೋರಖ್‌ಪುರ ಲಯನ್ಸ್ ತಂಡ ಖರೀದಿ ಮಾಡಿದ್ದು, 2025ರ ಯುಪಿ ಟಿ-20 ಲೀಗ್ ಟೂರ್ನಿಯಲ್ಲಿ ಈ ತಂಡದ ಪರ ಆಡಲು ತಯಾರಿ ನಡೆಸುತ್ತಿದ್ದರು. ಆದರೆ, ಅವರನ್ನು ಯುಪಿ ಕ್ರಿಕೆಟ್ ಮಂಡಳಿ ಟೂರ್ನಿಯಿಂದಲೇ ರದ್ದುಗೊಳಿಸಿದೆ. ಇದರಿಂದ ದಯಾಳ್‌ಗೆ ಭಾರೀ ಹಿನ್ನಡೆ ಆದಂತಾಗುದೆ.
ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಕಳೆದ ಎರಡು ವರ್ಷಗಳಿಂದ ಯಶ್ ದಯಾಳ್ ಉತ್ತಮ ಫಾರ್ಮ್‌ನಲ್ಲಿ ಇದ್ದಾರೆ, ಮತ್ತು ಐಪಿಎಲ್ 2025ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಲು ಯಶ್ ದಯಾಳ್ ಅವರದ್ದು ಕೂಡ ಮಹತ್ವದ ಕೊಡುಗೆಯಿದೆ. 18ನೇ ಆವೃತ್ತಿಯಲ್ಲಿ ಅವರು ಮಾರಕ ಬೌಲಿಂಗ್ ಮಾಡುವ ಮೂಲಕ 13 ವಿಕೆಟ್‌ಗಳನ್ನು ಕೀಳುವುದಲ್ಲದೆ, ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸಿದವರಾಗಿದ್ದರು.
ಆದರೆ, ಸತತ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬಂದ ಬಳಿಕ ಅವರಿಗೆ ಇದೀಗ ಬಂಧನದ ಬೀತಿ ಎದುರಾಗಿದೆ. ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ಎರಡನೇ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಅಪ್ರಾಪ್ತ ವಯಸ್ಕಳಿದ್ದಾಳೆ. ಎರಡು ವರ್ಷಗಳ ಅವಧಿಯಲ್ಲಿ ತನ್ನ ಮೇಲೆ ಪದೇ-ಪದೆ ಅತ್ಯಾಚಾರ ಎಸಗಿದ್ದಾನೆ ಮತ್ತು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಮತ್ತು ಕ್ರಿಕೆಟ್ ವೃತ್ತಿಜೀವನದ ಭರವಸೆ ನೀಡಿ ಆಮಿಷ ಒಡ್ಡುತ್ತಿದ್ದಾನೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದರು. ಇದೇ ಯಶ್ ದಯಾಳ್‌ಗೆ ಮುಳುವಾಗಿದ್ದು, ಆರ್‌ಸಿಬಿಯಿಂದಲೂ ಕೂಡ ಬ್ಯಾನ್ ಆಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications