RCB: ಆರ್‌ಸಿಬಿ ಪ್ಲೇಆಫ್ ತಲುಪಲು ಈ ಸವಾಲು ಗೆಲ್ಲಬೇಕು!
ಐಪಿಎಲ್ 2025ರ ಆವೃತ್ತಿಯಲ್ಲಿ ಬುಧವಾರ (ಏಪ್ರಿಲ್ 16) 32 ಪಂದ್ಯಗಳು ಮುಗಿದಿವೆ. ಬಹುತೇಕ ಅರ್ಧ ಪಂದ್ಯಗಳು ಮುಗಿದಿದ್ದು ಎಲ್ಲಾ ತಂಡಗಳು ಈಗಾಗಲೇ ಪ್ಲೇಆಫ್ ಲೆಕ್ಕಾಚಾರ ಶುರು ಮಾಡಿವೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು ಪ್ಲೇಆಫ್ ತಲುಪುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.
ಐಪಿಎಲ್‌ನಲ್ಲಿ ಯಾವುದೂ ಕೂಡ ಲೆಕ್ಕಾಚಾರದಂತೆ ನಡೆಯಲಲ್ಲ, ಮೊದಲಾರ್ಧದ ಪಂದ್ಯಾವಳಿಯಲ್ಲಿ ಕೊನೆಯ ಸ್ಥಾನದಲ್ಲಿರುವ ತಂಡಗಳೇ ದ್ವಿತೀಯಾರ್ಧದದ ಪಂದ್ಯಾಳಿಯಲ್ಲಿ ಸತತವಾಗಿ ಗೆದ್ದು ಪ್ಲೇಆಫ್ ತಲುಪಿವೆ. 2024ರ ಆವೃತ್ತಿಯಲ್ಲಿ ಆರ್ ಸಿಬಿ ಇದೇ ಪವಾಡ ಮಾಡಿತ್ತು. ಆದರೂ ಪ್ಲೇಆಫ್‌ನಲ್ಲಿ ಸೋತು ನಿರಾಸೆ ಮಾಡಿತ್ತು.

ಆರ್ ಸಿಬಿ ಇನ್ನೆಷ್ಟು ಪಂದ್ಯ ಗೆಲ್ಲಬೇಕು?
ರಾಯಲ್ ಚಾಲೆಂಜರ್ಸ್ ಬೆಂಗಳೂರು 2025ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿರುವ 6 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಸದ್ಯ 3ನೇ ಸ್ಥಾನದಲ್ಲಿದೆ. ಆರ್ ಸಿಬಿ ಲೀಗ್ ಹಂತದಲ್ಲಿ ಇನ್ನೂ 8 ಪಂದ್ಯಗಳನ್ನು ಆಡಲಿದೆ. ಉಳಿದ 8 ಪಂದ್ಯಗಳಲ್ಲಿ ಆರ್ ಸಿಬಿ ಕನಿಷ್ಠ 4 ರಿಂದ 5 ಪಂದ್ಯ ಗೆದ್ದರೂ ಪ್ಲೇಆಫ್ ಸ್ಥಾನ ಖಚಿತವಾಗಲಿದೆ.
ಉತ್ತಮ ರನ್‌ರೇಟ್ ಜೊತೆ 16 ಅಂಕಗಳನ್ನು ಪಡೆದರೂ ಪ್ಲೇಆಫ್ ತಲುಪುವುದು ಸುಲಭವಾಗುತ್ತದೆ. ಆದರೆ ಆರ್ ಸಿಬಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿತ್ತು ಉಳಿದ 8 ಪಂದ್ಯಗಳಲ್ಲಿ 6 ಪಂದ್ಯ ಗೆದ್ದರೆ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಫೈನಲ್ ತಲುಪಲು ಪ್ಲೇಆಫ್‌ನಲ್ಲಿ ಎರಡು ಅವಕಾಶವಿರುದವುದರಿಂದ ಮೊದಲ ಎರಡು ಸ್ಥಾನದ ಮೇಲೆ ಆರ್ ಸಿಬಿ ಕಣ್ಣಿಟ್ಟಿದೆ.
ತವರಿನಲ್ಲಿ 5 ಪಂದ್ಯಗಳು
ಆರ್ ಸಿಬಿಗೆ ಈಗ ಇರುವ ದೊಡ್ಡ ಸಮಸ್ಯೆ ಚಿನ್ನಸ್ವಾಮಿ ಕ್ರೀಡಾಂಗಣ! ಈ ಬಾರಿ ಐಪಿಎಲ್‌ನಲ್ಲಿ ಈವರೆಗೂ ಆಡಿರುವ 6 ಪಂದ್ಯಗಳಲ್ಲಿ ತವರಿನ ಹೊರಗೆ ಆಡಿದ ಎಲ್ಲಾ 4 ಪಂದ್ಯಗಳನ್ನೂ ಗೆದ್ದಿದ್ದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಏಪ್ರಿಲ್ 18ರಂದು ಶುಕ್ರವಾರ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಗೆದ್ದರೆ ಆರ್ ಸಿಬಿ ತಂಡದ ದೊಡ್ಡ ಆತಂಕ ದೂರವಾಗಲಿದೆ. ತವರಿನಲ್ಲಿ ಇನ್ನೂ 5 ಪಂದ್ಯಗಳನ್ನು ಆಡಬೇಕಿದ್ದು ಇದರಲ್ಲಿ ಕನಿಷ್ಠ 3-4 ಪಂದ್ಯಗಳನ್ನಾದರೂ ಗೆದ್ದರೆ ಪ್ಲೇಆಫ್ ಹಾದಿ ಸುಗಮವಾಗಲಿದೆ.












Click it and Unblock the Notifications