ವಿರಾಟ್ ಕೊಹ್ಲಿ ತಲೆಗೆ ಬಿದ್ದ ಚಂಡು, ಓಡಿ ಬಂದ ವೈದ್ಯರು... RCB VS CSK
ವಿರಾಟ್ ಕೊಹ್ಲಿ ಅಂದ್ರೆ ಕನ್ನಡಿಗರಿಗೆ ತುಂಬಾ ಇಷ್ಟ, ಆರ್‌ಸಿಬಿ ಪರ 18 ವರ್ಷದಿಂದ ಸತತ ಬೆವರು ಹರಿಸಿ ಆಡುತ್ತಿರುವ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಸತತವಾಗಿ ಯಾವುದೇ ಒಬ್ಬ ಆಟಗಾರ 18 ವರ್ಷಗಳ ಕಾಲ ಒಂದೇ ತಂಡಕ್ಕೆ ಆಡಿರುವುದು ಐಪಿಎಲ್ ಇತಿಹಾಸದಲ್ಲೇ ಇಲ್ಲ. ಹೀಗೆ ಕನ್ನಡಿಗರ ಹೃದಯ ಗೆದ್ದಿರುವ ವಿರಾಟ್ ಕೊಹ್ಲಿಯನ್ನು ಆರ್‌ಸಿಬಿ ಅಭಿಮಾನಿಗಳು ಮನೆ ಮಗನ ರೀತಿ ನೋಡಿಕೊಳ್ಳುತ್ತಾರೆ. ಆದರೆ ವಿರಾಟ್ ಕೊಹ್ಲಿ ಇವತ್ತು ಚೆನ್ನೈ ವಿರುದ್ಧ ಆಡುವಾಗ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಆರಂಭದಲ್ಲೇ ಸರಿಯಾಗಿ ಚಚ್ಚಲು ಶುರು ಮಾಡಿ ಚೆನ್ನೈ ತಂಡದ ಬೌಲರ್‌ಗಳ ಬೆವರು ಇಳಿಸಿತ್ತು. ಪವರ್ ಪ್ಲೇ ಓವರ್‌ಗಳಲ್ಲಿ ಬರೋಬ್ಬರಿ 50ಕ್ಕೂ ಹೆಚ್ಚು ರನ್ ಗಳಿಸಿತ್ತು, ನೋಡ ನೋಡುತ್ತಲೇ 10 ಓವರ್‌ಗೆ 93 ರನ್ ಗಳಿಸಿ 2 ವಿಕೆಟ್‌ಗಳನ್ನ ಕಳೆದುಕೊಂಡಿತ್ತು ಆರ್‌ಸಿಬಿ ತಂಡ. ಇದೇ ಸಮಯದಲ್ಲಿ, ವಿರಾಟ್ ಕೊಹ್ಲಿ ತಲೆಗೆ ಚಂಡು ಬಂದು ಬಡಿಯಿತು.

ವಿರಾಟ್ ಕೊಹ್ಲಿ ತಲೆಗೆ ಬಡಿದ ಚಂಡು
ಆರ್‌ಸಿಬಿ ತಂಡ ಅತ್ಯುತ್ತಮವಾಗಿ ಆಟವಾಡುತ್ತಿದ್ದ ಸಮಯದಲ್ಲೇ ದುರ್ಘಟನೆಯು ನಡೆದಿತ್ತು, ವಿರಾಟ್ ಕೊಹ್ಲಿ ಸ್ಟ್ರೈಕ್ ಪಡೆದು ಬ್ಯಾಟ್ ಮಾಡುವ ಸಮಯದಲ್ಲಿ ಮಥೀಶ ಪತಿರಾನ 11ನೇ ಓವರ್ ಎಸೆಯಲು ಬಂದರು. ಈ ಸಮಯದಲ್ಲಿ 23 ಬಾಲ್‌ಗೆ 16 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ತಲೆಗೆ ನೇರವಾಗಿ ಬಂದು ಚಂಡು ಬಡಿಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಈ ಸೀನ್ ನೋಡಿ ಬೆಚ್ಚಿಬಿದ್ದರು. ವಿರಾಟ್ ಕೊಹ್ಲಿ ತಲೆಗೆ ಚಂಡು ಬಡಿದ ನಂತರ ಅಭಿಮಾನಿಗಳಿಗೂ ಟೆನ್ಷನ್.. ಟೆನ್ಷನ್.. ವೈದ್ಯರು ಓಡೋಡಿ ಬಂದರು...












Click it and Unblock the Notifications