RCB Vs RR: ಪ್ರಮುಖ ಆಟಗಾರನನ್ನೇ ಕೈಬಿಟ್ಟ ಆರ್‌ಸಿಬಿ; ಫ್ಯಾನ್ಸ್ ಆಕ್ರೋಶ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್‌ಮೆಂಟ್‌ನ ರಾಕೆಟ್ ಸೈನ್ಸ್ ಅಭಿಮಾನಿಗಳಿಗೆ ಅರ್ಥವಾಗುತ್ತಿಲ್ಲ. ತಂಡದಲ್ಲಿ ರನ್ ಗಳಿಸದ, ಪದೇ ಪದೇ ವಿಫಲವಾಗುತ್ತಿರುವ ಆಟಗಾರರನ್ನು ಕೈಬಿಟ್ಟು ಬೇರೆ ಆಟಗಾರರಿಗೆ ಅವಕಾಶ ಕೊಡುವುದು ಸಾಮಾನ್ಯ, ಆದರೆ ಅವಕಾಶ ಸಿಕ್ಕಾಗೆಲ್ಲಾ ಚನ್ನಾಗಿ ಆಡಿದರೂ ತಂಡದಿಂದ ಕೈಬಿಟ್ಟರೆ ಅದಕ್ಕೆ ಏನು ಹೇಳುವುದು?
ಜೈಪುರದ ಸವಾನ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮಹಿಪಾಲ್ ಲೊಮ್ರೋರ್ ಅವರನ್ನೇ ಕೈಬಿಟ್ಟಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಸತತ ಮೂರು ಪಂದ್ಯಗಳನ್ನು ಗೆದ್ದಿರುವ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಣಕ್ಕಿಳಿಯಲು ನಿರ್ಧರಿಸಿತು.
ಲೋಮ್ರೋರ್, ವೈಶಾಖ್ ಇಲ್ಲ
ಸತತ ಎರಡು ಪಂದ್ಯಗಳನ್ನು ಸೋತ ಬಳಿಕ ಆರ್‌ಸಿಬಿ ತಂಡದಲ್ಲಿ ಹಲವು ಬದಲಾವಣೆ ನಿರೀಕ್ಷೆ ಮಾಡಲಾಗಿತ್ತು. ವಿಲ್ ಜ್ಯಾಕ್ಸ್, ಲಾಕಿ ಫರ್ಗ್ಯುಸನ್ ಇಬ್ಬರಲ್ಲಿ ಒಬ್ಬರಾದರೂ ತಂಡದಲ್ಲಿ ಅವಕಾಶ ಪಡೆಯುತ್ತಾರೆ ಎಂದು ನಿರೀಕ್ಷೆ ಮಾಡಿದ್ದರು. ಆದರೆ ನೀವು ಅಂದುಕೊಂಡಂತೆ ನಾವಲ್ಲ ಎಂದು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮತ್ತೆ ಸಾಬೀತುಮಾಡಿದೆ.
I just can't believe that RCB can't give a good 8-10 game run for a talent like Lomror and allow him to express himself. Let me tell you this, next year he'll be bought by some other franchise and sooner or later, he's gonna come good in the IPL. The talent is clearly evident.
— Srini Mama (@SriniMaama16) April 6, 2024
ಕಳೆದ ಪಂದ್ಯದಲ್ಲಿ 13 ಎಸೆತಗಳಲ್ಲಿ 33 ರನ್ ಗಳಿಸಿದ್ದ ಲೋಮ್ರೋರ್ ಅವರು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಚ್ ಕಾಯುವಂತಾಗಿದೆ. ಆರ್‌ಸಿಬಿ ಮೊದಲು ಬ್ಯಾಟ್ ಮಾಡುತ್ತಿದ್ದು, ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವುದು ಅನುಮಾನವಾಗಿದೆ.
ಅನುಜ್ ರಾವತ್ ಬದಲಾಗಿ ತಂಡದಲ್ಲಿ ಸೌರವ್ ಚೌವ್ಹಾಣ್ ಅವರಿಗೆ ಅವಕಾಶ ನೀಡಲಾಗಿದೆ. ಆದರೆ ರಜತ್ ಪಾಟಿದಾರ್ ಮತ್ತೆ ಅವಕಾಶ ಪಡೆದುಕೊಂಡಿದ್ದಾರೆ. ವೈಶಾಖ್ ವಿಜಯ್ ಕುಮಾರ್ ಕೂಡ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿಲ್ಲ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಅವರು ಆಡುವ ಸಾಧ್ಯತೆ ಇದೆ.
Imagine dropping your second best player in a hope that your non performing players will come good.
— 𝐊𝐨𝐡𝐥𝐢𝐧𝐚𝐭!𝟎𝐧_👑🚩 (@bholination) April 6, 2024
Lomror deserves a place in this playing 11. Such a clueless management. pic.twitter.com/Jr4xr6r1PK
ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್ ನೋಡಿ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಎಕ್ಸ್ ನಲ್ಲಿ ಹಲವು ಅಭಿಮಾನಿಗಳು ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಫೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ಆಡಿಸದೇ ಇರುವುದಕ್ಕೆ ಮತ್ತು ಕಳೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದರೂ ಲೊಮ್ರೋರ್ ಅವರನ್ನು ಕೈಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
No will Jacks again but why? And dropped Lomror too. This team cannot win the ipl trophy with this clown management pic.twitter.com/vpadtsGvu9
— leisha (@katyxkohli17) April 6, 2024
ಲೊಮ್ರೋರ್‌ನಂತಹ ಪ್ರತಿಭಾವಂತರಿಗೆ ಆರ್ ಸಿಬಿ ಉತ್ತಮ 8-10 ಪಂದ್ಯವನ್ನು ನೀಡಲು ಮತ್ತು ಉತ್ತಮ ಪ್ರದರ್ಶನ ನೀಡಲು ಅವಕಾಶ ನೀಡುವುದಿಲ್ಲ ಎಂದು ನಂಬಲು ಸಾಧ್ಯವಿಲ್ಲ. ಮುಂದಿನ ವರ್ಷ ಅವರನ್ನು ಬೇರೆ ಫ್ರಾಂಚೈಸಿ ಖರೀದಿಸಲಾಗುತ್ತದೆ ಮತ್ತುಅವರು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಶ್ರೀನಿಮಾಮಾ ಎನ್ನುವವರು ಹೇಳಿದ್ದಾರೆ.
ವಿಲ್ ಜ್ಯಾಕ್ಸ್ ಅವರಂತಹ ಆಟಗಾರರಿಗೆ ಅವಕಾಶ ನೀಡುತ್ತಿಲ್ಲ. ಮತ್ತು ಲೋಮ್ರೋರ್ ಅವರನ್ನು ಡ್ರಾಪ್ ಮಾಡಲಾಗಿದೆ. ಈ ತಂಡ ಇಂತಹ ಮೂರ್ಖ ಮ್ಯಾನೇಜ್‌ಮೆಂಟ್‌ನೊಂದಿಗೆ ಎಂದಿಕೂ ಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications