Get Updates
Get notified of breaking news, exclusive insights, and must-see stories!

RCB: ಭುವನೇಶ್ವರ್ ಕುಮಾರ್ ಸೇರಿ ಈ ಐವರು ಆಟಗಾರರು ಆರ್‌ಸಿಬಿಯಿಂದ ಔಟ್..

IPL RCB: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ಎಲ್ಲರ ಚಿತ್ತ 2026ರ ಆವೃತ್ತಿಯತ್ತ ನೆಟ್ಟಿದ್ದು, ಇದಕ್ಕೂ ಮುನ್ನವೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐದು ಆಟಗಾರರನ್ನು ಕೈಬಿಡಲಿದೆ ಎಂದು ತಿಳಿದುಬಂದಿದೆ. ಹಾಗಾದ್ರೆ, ಅವರು ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಆಡಿದ 17 ಆವೃತ್ತಿಗಳಿಂದಲೂ ಆರ್‌ಸಿಬಿ ಒಂದೇ ಒಂದು ಟ್ರೋಫಿ ಎತ್ತಿಕೊಂಡಿರಲಿಲ್ಲ. ಆದರೆ, 18ನೇ ಆವೃತ್ತಿಯಲ್ಲಿ ಕೊನೆಗೂ ಫೈನಲ್‌ನಲ್ಲಿ ಗೆದ್ದು ಟ್ರೋಫಿ ಇಲ್ಲ ಎನ್ನುವ ಕೊರಗಿಗೆ ತೆರೆ ಎಳೆದಿದೆ. ಇದಕ್ಕೆ ಕಾರಣ ಆರ್‌ಸಿಬಿ ಉತ್ತಮ ತಂಡವನ್ನು ಹೊಂದಿದ್ದು, ಬೌಲಿಂಗ್‌, ಬ್ಯಾಟಿಂಗ್‌, ಫೀಲ್ಡಿಂಗ್‌ ಮೂರು ವಿಭಾಗದಲ್ಲೂ ಉತ್ತಮ ಪ್ರದರ್ಶನ ಮಾಡಿರುವುದು.

RCB Likely to Release Five Players Ahead of IPL 2026 Mini Auction

ಈ ಹಿಂದೆ ಆರ್‌ಸಿಬಿ ಉತ್ತಮ ತಂಡ ಕಟ್ಟುವಲ್ಲಿ ವಿಫಲವಾಗಿತ್ತು. ಇನ್ಮೇಲೆ ಇದೇ ತಂಡ ಫಿಕ್ಸ್‌ ಆದಂತಾಗಿದೆ. ಈ ನಡುವೆಯೇ ಇದೀಗ 2026ರ ಆವತ್ತಿ ಆರಂಭಕ್ಕೂ ಮುನ್ನ ಐದು ಜನರನ್ನು ಕೈಬಿಡಲು ನಿರ್ಧರಿಸಿದೆ. ಹಾಗಾದ್ರೆ ಯಾರೆಲ್ಲ ಈ ಪಟ್ಟಿಯಲ್ಲಿ ಇದ್ದಾರೆ ಎನ್ನುವ ಕುತೂಹಲ ಬಹುತೇಕ ಮಂದಿಯಲ್ಲಿ ಇರುತ್ತದೆ. ಇಲ್ಲಿದೆ ನೋಡಿ ಉತ್ತರ..

ಉತ್ತಮ ಆಟಗಾರರನ್ನು ಹೊಂದಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ 2025ರಲ್ಲಿ ಚೊಚ್ಚಲ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿತು. 18 ವರ್ಷಗಳ ನಂತರ ಈ ಸಾಧನೆ ಮಾಡಿತು. ಅಷ್ಟರ ಮಟ್ಟಿಗೆ ಬಲಿಷ್ಠ ತಂಡ ಹೊಂದಿತ್ತು.

ಒಬ್ಬರು ಕೈಕೊಟ್ಟರೆ ಮತ್ತೊಬ್ಬರು ಆಟ ಆಡುತ್ತಿದ್ದರು. ಇದೇ ಟ್ರೋಫಿ ಗೆಲ್ಲಲು ಸಾಧ್ಯವಾಯಿತು ಅಂದ್ರೆ ತಪ್ಪಾಗಲಾರದು. ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್, ರೊಮಾರಿಯೋ ಶೆಫರ್ಡ್‌ ಉತ್ತಮ ಸ್ಫೋಟಕ ಬ್ಯಾಟ್‌ ಬೀಸಿದರೆ, ಕೃನಾಲ್‌ ಪಾಂಡೆ ಬೌಲಿಂಗ್ ಜೊತೆ ಬ್ಯಾಟಿಂಗ್‌ನಲ್ಲಿ ಸಹ ಮಿಂಚಿದರು.

ಬೌಲಿಂಗ್ ವಿಭಾಗದಲ್ಲಿ ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್ ಮಾರಕ ಬೌಲಿಂಗ್ ದಾಳಿ ಮಾಡಿದರೆ, ಕೃನಾಲ್ ಪಾಂಡೆ, ಭವನೇಶ್ವರ್ ಕುಮಾರ್, ಶೆಫರ್ಡ್‌ ಇವರಿಗೆ ಸಾಥ್ ನೀಡಿದರು. ಅಲ್ಲದೆ, ದೇವದತ್ ಪಡಿಕ್ಕಲ್ ಗಾಯಗೊಂಡ ಕಾರಣ ಅವರ ಸ್ಥಾನ ತುಂಬಿದ್ದ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಆರ್‌ಸಿಬಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದವರಲ್ಲಿ ಒಬ್ಬರಾಗಿದ್ದಾರೆ.

ಇದೀಗ 2026ರ ಐಪಿಎಲ್‌ ಮಿನಿ ಹಾರಾಜಿಗೂ ಮುನ್ನ ಐವರು ಆಟಗಾರರನ್ನು ಆರ್‌ಸಿಬಿ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಆರ್ಥಿಕವಾಗಿ ಮತ್ತಷ್ಟು ಉತ್ತಮಗೊಳಿಸುವ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಲಿಯಾಮ್ ಲಿವಿಂಗ್‌ಸ್ಟೋನ್ (ಆಲ್‌ರೌಂಡರ್), ಭುವನೇಶ್ವರ್ ಕುಮಾರ್ (ಬೌಲರ್), ರಾಸಿಖ್ ಸಲಾಮ್ ದಾರ್ (ಬೌಲರ್), ಮಾಯಾಂಕ್ ಅಗರ್ವಾಲ್ (ಬ್ಯಾಟ್ಸ್‌ಮನ್), ಮಾಯಾಂಕ್ ಅಗರ್ವಾಲ್ (ಬ್ಯಾಟ್ಸ್‌ಮನ್), ಟಿಮ್ ಸೀಫರ್ಟ್ (ವಿ.ಕೀ, ಬ್ಯಾಟರ್) ರನ್ನು ಕೈಬಿಡುವ ಸಾಧ್ಯತೆಯಿದೆ.

* ಲಿಯಾಮ್ ಲಿವಿಂಗ್‌ಸ್ಟೋನ್: 2025ರ ಐಪಿಎಲ್‌ನಲ್ಲಿ ಒಂದು ಪಂದ್ಯ ಬಿಟ್ಟರೆ, ಉಳಿದ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ಹಾಗೂ ಉತ್ತಮ ಬೌಲಿಂಗ್‌ ದಾಳಿ ಕಾಣದ ಹಿನ್ನೆಲೆ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಕೈಬಿಡುವ ಸಾಧ್ಯತೆಯಿದೆ. ಇವರನ್ನು ಆರ್‌ಸಿಬಿ 8.75 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.

* ಭುವನೇಶ್ವರ್ ಕುಮಾರ್: ಭುವನೇಶ್ವರ್ ಕುಮಾರ್ ಅವರ ಬೌಲಿಂಗ್‌ ಪ್ರದರ್ಶನ ಹೇಳಿಕೊಳ್ಳುವಷ್ಟು ಇರಲಿಲ್ಲ. 14 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಗಳಿಸಿದರು. ಆದರೂ ಅವರಿಗೆ ನೀಡಲಾದ ಸಂಬಳ ಮತ್ತು ವಯಸ್ಸು ಹೆಚ್ಚಳ ಹಿನ್ನೆಲೆ ಅವರನ್ನು ಕೈಬಿಡುವ ಸಾಧ್ಯತೆಯಿದೆ. ಇವರನ್ನು 10.75 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.

* ರಾಸಿಖ್ ಸಲಾಮ್ ದಾರ್: ಅಚ್ಚರಿಯೆಂದರೆ 6 ಕೋಟಿ ರೂಪಾಯಿ ಕೊಟ್ಟು ಖರೀದಿಸಲಾದ ರಸಿಕ್ ಸಲಾಂ ದಾರ್ ಕೂಡ ತಂಡಕ್ಕ ಕೊಡುಗೆ ನೀಡುವಲ್ಲಿ ವಿಫಲರಾದರು. ಕೇವಲ 2 ಪಂದ್ಯಗಳನ್ನು ಆಡಿದ ಅವರು 1 ವಿಕೆಟ್ ಪಡೆದರು. ಅಲ್ಲದೆ, ಇವರನ್ನು ಹೆಚ್ಚಿನ ಪಂದ್ಯಗಳಿಗೆ ಆಡಿಸದೆ, ಬೆಂಚ್‌ ಕಾಯಿಸಲಾಯಿತು. ಆದ್ದರಿಂದ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

* ಮಾಯಾಂಕ್ ಅಗರ್ವಾಲ್: ದೇವದತ್ ಪಡಿಕ್ಕಲ್ ಗಾಯಗೊಂಡ ಕಾರಣ ತಾತ್ಕಾಲಿಕವಾಗಿ ಅವರ ಸ್ಥಾನಕ್ಕೆ ಮಾಯಾಂಕ್ ಅಗರ್ವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ, ನಿಯಮದ ಪ್ರಕಾರ ಬದಲಿ ಆಟಗಾರರನ್ನು ತಂಡದಲ್ಲಿ ಇಟ್ಟುಕೊಳ್ಳುವಂತಿಲ್ಲ. ಆದ್ದರಿಂದ ಬಿಡುಗಡೆಗೊಳಿಸಲಾಗುತ್ತದೆ. ಇವರನ್ನು 1 ಕೋಟಿ ರೂಪಾಯಿಗೆ ಖರೀದಿಸಲಾಗಿತ್ತು.

* ಟೀಮ್ ಸೀಫರ್ಟ್: ಹಾಗೆಯೇ ಜಾಕೋಬ್ ಬೆಥೆಲ್ ಬದಲಿಗೆ ತಾತ್ಕಾಲಿಕವಾಗಿ ಟಿಮ್ ಸೀಫರ್ಟ್ ಅವರನ್ನು 2 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.

ಆರ್‌ಸಿಬಿ ಯಾರನ್ನೆಲ್ಲಾ ಕೈಬಿಡಲಿದೆ?

* ಲಿಯಾಮ್ ಲಿವಿಂಗ್‌ಸ್ಟೋನ್
* ಭುವನೇಶ್ವರ್ ಕುಮಾರ್
* ರಾಸಿಖ್ ಸಲಾಮ್ ದಾರ್
* ಮಾಯಾಂಕ್ ಅಗರ್ವಾಲ್
* ಟೀಮ್ ಸೀಫರ್ಟ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+