ಇದೇ ಕಾರಣಕ್ಕೆ ಐಪಿಎಲ್ 2026ರಿಂದ ಆರ್‌ಸಿಬಿ ಬ್ಯಾನ್ ಸಾಧ್ಯತೆ
RCB Ban From IPL: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು 17 ವರ್ಷಗಳ ಬಳಿಕ ಮೊದಲ ಬಾರಿ ಟ್ರೋಫಿಗೆ ಮುತ್ತಿಟಿತು. ಇದಾದ ಬೆನ್ನಲ್ಲೇ ರಾಯಲ್ ತಂಡಕ್ಕೆ 'ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಎಂಬಂತೆ' ಒಂದಲ್ಲ ಒಂದು ಆಘಾತಗಳು ಎದುರಾಗುತ್ತಲಿವೆ. ಹಾಗೆಯೇ ಇದೀಗ ಈ ಕಾರಣಕ್ಕೆ ಬ್ಯಾನ್ ಆತಂಕ ಎದುರಾಗಿದೆ.
ಈ ಬಾರಿಯ ಐಪಿಎಲ್ ಫೈನಲ್ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ವೇಳೆ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗು ಬಡಿಯುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಆ ದಿನ ಜೂನ್ 3ರಂದು ಬರೀ ಕರ್ನಾಟಕ ಅಷ್ಟೇ ಅಲ್ಲದೆ, ಇಡೀ ದೇಶವೇ ಬೆಂಗಳೂರು ತಂಡದ ಗೆಲ್ಲುವನ್ನು ಸಂಭ್ರಮಿಸಿತು. ಆದ್ರೆ, ಮಾರನೇ ದಿನ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿದ್ದು, ಈ ವೇಳೆ ಚಿನ್ನಸ್ವಾಮಿ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಪ್ರಾಣ ಕಳೆದುಕೊಂಡರು.

ಈ ದರಂತ ಸಂಭವಿಸಿದ ಬಳಿಕ ತುಂಬಾ ಬೆಳವಣಿಗೆಗಳು ಆದ್ವು, ಇನ್ನೂ ಕೂಡ ಆಗುತ್ತಲಿವೆ. ಕಾಲ್ತುಳಿತ ಪ್ರಕರಣ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರ ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧ ಎಫ್‌ಐಆರ್ ದಾಖಲಿಸಿತು. ಅಷ್ಟೇ ಅಲ್ಲದೆ, ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ವಿರುದ್ಧವೂ ಕೇಶ್ ದಾಖಲಾಯಿತು. ಬಳಿಕ ಆರ್‌ಸಿಬಿ ತಂಡ ಐಪಿಎಲ್‌ನಿಂದ ಬ್ಯಾನ್ ಆಗಲಿದೆ ಹಾಗೂ ಮಾರಾಟ ಮಾಡಲಾಗುತ್ತದೆ ಎನ್ನುವ ವಂದಂತಿಗಳು ಹಬ್ಬಿದ್ದು, ಇದಕ್ಕೆ ಸ್ಪಷ್ಟನೆ ನೀಡುವ ಕೆಲಸವನ್ನು ಪ್ರಾಂಚೈಸಿ ಮಾಡಿತ್ತು.
ನಾವು ಯಾವುದೇ ಕಾರಣಕ್ಕೂ ಆರ್‌ಸಿಬಿ ತಂಡವನ್ನು ಮಾರಾಟ ಮಾಡುವುದಿಲ್ಲ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪ್ರಾಂಚೈಸಿ ಸ್ಪಷ್ಟನೆ ನೀಡುವ ಕೆಲಸವನ್ನು ಮಾಡಿತ್ತು. ಇವೆಲ್ಲಾ ಬೆಳವಣಿಗಗಳ ನಡುವೆಯೂ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಹೌದು.. ಬೆಂಗಳೂರಿನಲ್ಲಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆ ರಾಜ್ಯ ಸರ್ಕಾರವು ವಿಧಾನಸೌಧದ ಮೆಟ್ಟಿಲುಗಳು ಮೇಲೆ ಸನ್ಮಾನ ಸಮಾರಂಭವನ್ನು ಇಟ್ಟುಕೊಂಡಿತ್ತು. ಈ ವೇಳೆ ಆರ್ಸಿಬಿ ಆಟಗಾರರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಅಭಿಮಾನಿಗಳು ವಿಧಾನಸೌಧದ ಪಕ್ಕದಲ್ಲಿದ್ದ ಕಬ್ಬನ್ ಪಾರ್ಕ್ನಲ್ಲಿನ ಮರಗಳ ಮೇಲೆ ಹತ್ತಿ ಆಟಗಾರರನ್ನ ನೋಡಲು ಮುಂದಾದ್ರು. ಪರಿಣಾಮ ಇಲ್ಲಿನ ತುಂಬಾ ಸಸಿಗಳಿಗೆ ಹಾನಿಯಾಗಿದೆ. ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ ಎಂದು ಕಬ್ಬನ್ ಪಾರ್ಕ್ ಅಸೋಸಿಯೇಷನ್ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದೆ.
ಕಬ್ಬನ್ ಪಾರ್ಕ್‌ನಲ್ಲಿ ಇದ್ದ ಸಸಿಗಳು, ಮರಗಳಿಗೆ ಮತ್ತು ಉದ್ಯಾನವನಕ್ಕೂ ಹಾನಿ ಆಗಿದೆ. ಅಲ್ಲದೆ, ವಿಧಾನಸೌಧದ ಮುಂಭಾಗದ ಗಾರ್ಡನ್ನಲ್ಲಿ ತುಂಬಾ ಹಾನಿ ಆಗಿದೆ. ತೋಟಗಾರಿಕೆ ಇಲಾಖೆ ಕಬ್ಬನ್ ಪಾರ್ಕ್ನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಲಾನ್ ಅಳವಡಿಕೆ ಮಾಡಿದ್ದು, ಇದಕ್ಕೂ ಸಗ ಕಾಲ್ತುತುಳಿತದಲ್ಲಿ ಅಪಾಯ ಹಾನಿ ಆಗಿದೆ. ಕಬ್ಬನ್ ಪಾರ್ಕ್ಗೆ ಹಾನಿ ಆದರೇ ನೀವೇ ಹೊಣೆಗಾರರು ಎಂದು ಆರ್ಸಿಬಿ ಹಾಗೂ ಕೆಎಸ್ಸಿಎಗೆ ಮೊದಲೇ ಷರತ್ತು ವಿಧಿಸಲಾಗಿತ್ತು.
ಆದರೆ ಇದೆನ್ನೆಲ್ಲ ಮೀರಿ ಅಭಿಮಾನಿಗಳ ಕಾಲ್ತುತುಳಿತದಿಂದ ಪಾರ್ಕ್ಗೆ ತುಂಬಾ ಹಾನಿ ಆಗಿದೆ. ಈ ನಷ್ಟವನ್ನ ಆರ್ಸಿಬಿ ಮತ್ತು ಕೆಎಸ್ಸಿಎ ಭರಿಸಿಕೊಡಬೆಂದು ಕಬ್ಬನ್ ಪಾರ್ಕ್ ಅಸೋಸಿಯೇಷನ್ ಹೈಕೋರ್ಟ್ನಲ್ಲಿ ಆರೋಪಿಸಿದ ದೂರಿನಲ್ಲಿ ತಿಳಿಸಿದೆ. ಇದರಿಂದ ಒಂದು ವೇಳೆ ಈ ನಷ್ಟವನ್ನು ಭರಿಸದಿದ್ದರೆ, ಆರ್‌ಸಿಬಿಗೆ ದೊಡ್ಡ ಹೊಡೆತ ಬೀಳಲಿದೆ. ಮತ್ತೊಂದೆಡೆ ಬ್ಯಾನ್ ಆಗುವ ಆತಂಕವೂ ಎದುರಾಗಿದೆ. ಆದರೆ, ಇದು ಅಸಾಧ್ಯ ಯಾಕಂದ್ರೆ ಬಿಸಿಸಿಐಗೆ ಅತೀ ಹೆಚ್ಚು ಆದಾಯ ಬರುವುದೇ, ಐಪಿಎಲ್‌ನಿಂದ.. ಈ ಟೀಂ ಇಲ್ಲದಿದ್ದರೆ ಐಪಿಎಲ್ ಕೂಡ ಬ್ಯಾನ್ ಆಗುವುದರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ ಐಪಿಎಲ್‌ನಲ್ಲಿ ಎಲ್ಲಾ ತಂಡಗಳಿಗಿಂತಲೂ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂದ್ರೆ ಅದು ಆರ್‌ಸಿಬಿ. ಅಷ್ಟೇ ಅಲ್ಲದೆ, ಬ್ರ್ಯಾಂಡ್ ವ್ಯಾಲ್ಯೂನಲ್ಲೂ ಮೊದಲನೇ ಸ್ಥಾನದಲ್ಲಿದೆ.












Click it and Unblock the Notifications