RCB IPL 2026 Trophy: ಆರ್‌ಸಿಬಿ ಐಪಿಎಲ್ 2026 ಟ್ರೋಫಿ ಗೆಲ್ಲಲ್ಲ: ಡಿಸಿ ನಾಯಕ ಅಕ್ಷರ್ ಪಟೇಲ್
RCB IPL 2026 Trophy: ಈಗಾಗಲೇ ಐಪಿಎಲ್ 2026ರ ಪ್ಲೇಆಫ್ ಹಂತದ ನಾಲ್ಕು ಸ್ಥಾನಗಳು ಭರ್ತಿಯಾಗಿವೆ. ಅದರಂತೆಯೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಮೇ 26ರಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಅವರು ಈ ಬಾರಿ ಟ್ರೋಫಿ ಎತ್ತುವ ತಂಡವನ್ನು ಹೆಸರಿಸಿದ್ದಾರೆ. ಇದು ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಈಡನ್ ಗಾರ್ಡನ್ಸ್‌ನಲ್ಲಿ ಭಾನುವಾರ (ಮೇ 25) ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನ ಹೊರತಾಗಿಯೂ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಡಿಸಿ ನಾಯಕ ಅಕ್ಷರ್ ಪಟೇಲ್ ಅವರು ಈ ಬಾರಿಯ ಟ್ರೋಫಿ ಗೆಲ್ಲುವ ತಂಡವನ್ನು ಹೆಸರಿಸಿದ್ದಾರೆ.

ಆರ್‌ಸಿಬಿ-ಜಿಟಿ ನಡುವೆ ಹೈವೋಲ್ಟೇಜ್ ಸಮರ
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಮೇ 26ರ ಮಂಗಳವಾರದಂದು ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎದುರಿಸಲಿದೆ. ಮರುದಿನ ಮೇ 27ರ ಬುಧವಾರದಂದು ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ನೇರವಾಗಿ ಫೈನಲ್ ಪ್ರವೇಶಿಸಲು ಏನು ಮಾಡಬೇಕು?
ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡಕ್ಕೆ ಮತ್ತೊಂದು ಅವಕಾಶವಿದ್ದು, ಆ ತಂಡವು ಎಲಿಮಿನೇಟರ್ ಪಂದ್ಯದ ವಿಜೇತರ ವಿರುದ್ಧ ಮೇ 29ರ ಶುಕ್ರವಾರದಂದು ನ್ಯೂ ಚಂಡೀಗಢದಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಹೋರಾಟ ನಡೆಸಲಿದೆ. ಫೈನಲ್ ಪಂದ್ಯವು ಮೇ 31ರ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ.
ಕೆಕೆಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು
ಭಾನುವಾರ (ಮೇ 24) ಸಂಜೆ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 40 ರನ್‌ಗಳ ಜಯ ಸಾಧಿಸಿತು. ಈ ಕೊನೆಯ ಲೀಗ್ ಪಂದ್ಯದ ನಂತರ ನಡೆದ ಸಂದರ್ಶನದಲ್ಲಿ ಪ್ಲೇ-ಆಫ್ ತಲುಪಿರುವ ತಂಡಗಳಲ್ಲಿ ಅತ್ಯಂತ ಬಲಿಷ್ಠ ತಂಡ ಯಾವುದು ಎಂಬ ಪ್ರಶ್ನೆಗೆ ಡಿಸಿ ನಾಯಕ ಅಕ್ಷರ್ ಪಟೇಲ್ ಅಚ್ಚರಿ ಉತ್ತರ ನೀಡಿದ್ದಾರೆ.
ಆರ್‌ಸಿಬಿ ಟ್ರೋಫಿ ಗೆಲ್ಲಲ್ಲ ಎಂದ ಡೆಲ್ಲಿ ನಾಯಕ
'ನನ್ನ ಪ್ರಕಾರ ಸನ್‌ರೈಸರ್ಸ್ ಹೈದರಾಬಾದ್ ತಂಡವು ಅತ್ಯಂತ ಬಲಿಷ್ಠವಾಗಿ ಕಾಣುತ್ತಿದೆ. ಅವರ ಮೊದಲ ಮೂವರು ಬ್ಯಾಟರ್‌ಗಳು ರನ್ ಗಳಿಸಿದರೆ, ಆ ತಂಡವನ್ನು ತಡೆಯುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ನಾನು ಎಸ್‌ಆರ್‌ಎಚ್ ತಂಡವನ್ನೇ ಹೆಸರಿಸುತ್ತೇನೆ,' ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ. ಆದರೆ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಈ ಬಾರಿ ಟ್ರೋಫಿ ಎತ್ತಲು ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಇದು ಅವರ ಅಭಿಪ್ರಾಯವಾಗಿದೆ ಅಷ್ಟೇ ಆಗಿದೆ ಅಷ್ಟೇ.
ಪ್ರಸಕ್ತ 2026ರ ಐಪಿಎಲ್ ಆವೃತ್ತಿಯ ಲೀಗ್ ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಒಟ್ಟು 18 ಅಂಕಗಳನ್ನು ಗಳಿಸಿದೆ. ಆಡಿದ 14 ಪಂದ್ಯಗಳಲ್ಲಿ 9 ಜಯ ಮತ್ತು 5 ಸೋಲುಗಳನ್ನು ಕಂಡಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳಿಗೆ ಹೋಲಿಸಿದರೆ ಕಡಿಮೆ ರನ್ ರೇಟ್ ಇದೆ. ಆದ್ದರಿಂದ ಎಸ್‌ಆರ್‌ಎಚ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಹೈದರಾಬಾದ್ ತಂಡದಲ್ಲಿ ಹೆನ್ರಿಚ್ ಕ್ಲಾಸೆನ್, ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಈ ಮೂವರೂ ಆಟಗಾರರು ಈಗಾಗಲೇ ತಲಾ 500ಕ್ಕೂ ಅಧಿಕ ರನ್ ಗಳಿಸಿದ್ದು, ಮುಂಬರುವ ನಾಕೌಟ್ ಪಂದ್ಯಗಳಲ್ಲಿ ತಂಡದ ಪಾಲಿಗೆ ದೊಡ್ಡ ಭರವಸೆಯಾಗಿದ್ದಾರೆ. ಹಾಗಂತ ಪ್ಲೇಆಫ್ ತಲುಪಿರುವ ಇನ್ನುಳಿದ ಟೀಂಗಳಲ್ಲೂ ಸಹ ಅಷ್ಟೇ ಬಲಿಷ್ಠ ಬ್ಯಾಟರ್, ಬೌಲಿಂಗ್ ಪಡೆ ಇದೆ ಎನ್ನುವುದನ್ನು ಮರೆಯಬೇರದು. ಒಟ್ಟಿನಲ್ಲಿ ಈ ಬಾರಿ ಬಲಿಷ್ಠ ತಂಡಗಳೇ ಪ್ಲೇ ಆಫ್ ಟಿಕೆಟ್ ಪಡೆದುಕೊಂಡಿದ್ದು, ಯಾವ ಟೀಮ್ ಟ್ರೋಫಿ ಎತ್ತಲಿದೆ ಎಂಬುದನ್ನ ಕಾದುನೋಡಬೇಕಿದೆ.
ಪ್ಲೇ-ಆಫ್ ತಲುಪಿದ ತಂಡಗಳು
* ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಗುಜರಾತ್ ಟೈಟಾನ್ಸ್
* ಸನ್‌ರೈಸರ್ಸ್ ಹೈದರಾಬಾದ್
* ರಾಜಸ್ಥಾನ್ ರಾಯಲ್ಸ್












Click it and Unblock the Notifications