RCB: ಆರ್‌ಸಿಬಿಗೆ ಹೊಸ ಸಂಕಷ್ಟ: ಸ್ಟಾರ್ ಆಟಗಾರನ ಎಡವಟ್ಟು; ಬ್ಯಾನ್ ಆಗುವ ಭೀತಿ

RCB: ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. 2026ನೇ ಸಾಲಿನಲ್ಲಿ ಕಪ್ ಗೆಲ್ಲುವುದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೂ ಅವಕಾಶ ಇದೆ. ಆದರೆ ಇನ್ನೇನು ನಿರ್ಣಾಯಕ ಪಂದ್ಯಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಆರ್‌ಸಿಬಿಯ ಸ್ಟಾರ್ ಆಟಗಾರರೊಬ್ಬರು ಎಡವಟ್ಟು ಮಾಡಿಕೊಂಡಿದ್ದು, ಐಪಿಎಲ್‌ನಿಂದ ಬ್ಯಾನ್ ಆಗುವ ಸಾಧ್ಯತೆ ಇದೆ.

ಹೌದು ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿಯು ಉತ್ತಮ ಪ್ರದರ್ಶನ ನೀಡುತ್ತಿದೆ. ಪಾಯಿಂಟ್ ಟೇಬಲ್‌ನಲ್ಲಿಯೂ ಅಗ್ರ ಸ್ಥಾನದಲ್ಲಿಯೇ ಇದೆ. ಆದರೆ ಇದೀಗ IPL 2026 ರ ಮಧ್ಯದಲ್ಲಿ RCB ತಂಡಕ್ಕೆ ಕೆಟ್ಟ ಸುದ್ದಿಯೊಂದು ಬಂದಿದೆ. ಆರ್‌ಸಿಬಿಯ ಸ್ಟಾರ್ ಆಟಗಾರನನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ. ಏನಿದು ಚರ್ಚೆ ಎನ್ನುವ ವಿವರ ಈ ಲೇಖನದಲ್ಲಿದೆ.

RCB

IPL 2026ರ ಋತುವಿನಲ್ಲಿ ಸ್ಟಾರ್ ಆಟಗಾರರ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಮಾಡಿಕೊಂಡ ಎಡವಟ್ಟಿನಿಂದ ನಿಷೇಧಕ್ಕೊಳಗಾಗುವ ಅಪಾಯದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಟಾರ್ ಆಟಗಾರ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಅವರೇ ಟಿಮ್ ಡೇವಿಡ್ ಆದರೆ ಟೀಮ್‌ ಡೇವಿಡ್‌ನ ಒಂದೇ ಒಂದು ಸನ್ನೆ ಇದೀಗ ಬ್ಯಾನ್‌ಗೆ ಒಳಗಾಗುವ ಸಾಧ್ಯತೆಯನ್ನು ಸೃಷ್ಟಿ ಮಾಡಿದೆ.

RCBಯಿಂದ ಟಿಮ್ ಡೇವಿಡ್‌ಗೆ 3 ಕೋಟಿ ರೂ.

IPL 2026ರ ಐಪಿಎಲ್ ಪ್ರಾರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಿಮ್ ಡೇವಿಡ್ ಅವರನ್ನು 3 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಇದೀಗ ಮುಂಬೈ ಇಂಡಿಯನ್ಸ್‌ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ನಂತರ ಟಿಮ್ ಡೇವಿಡ್ 'ಮಧ್ಯದ ಬೆರಳು' ತೋರಿಸಿದ್ದು, ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ IPL 2026 ಪಂದ್ಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ 'ಮಧ್ಯದ ಬೆರಳು' ತೋರಿಸಿದ್ದಾರೆ.

BCCI ಟಿಮ್ ಡೇವಿಡ್‌ಗೆ 2 ಡಿಮೆರಿಟ್ ಅಂಕಗಳನ್ನು ನೀಡಿದೆ ಅಲ್ಲದೆ ಪಂದ್ಯ ಶುಲ್ಕದ ಶೇಕಡಾ 30 ರಷ್ಟು ದಂಡ ವಿಧಿಸಿದೆ. "ಟಿಮ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.6 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ, ಇದು 'ಅಶ್ಲೀಲ, ಆಕ್ರಮಣಕಾರಿ ಅಥವಾ ಅವಮಾನಕರವಾದ ಸನ್ನೆಯನ್ನು ಬಳಸುವುದು' ಎಂಬುದಕ್ಕೆ ಸಂಬಂಧಿಸಿದೆ" ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಟಿಮ್ ಡೇವಿಡ್ 5 ಡಿಮೆರಿಟ್ ಅಂಕಗಳನ್ನು ಗಳಿಸಿದರೆ ಅವರನ್ನು ನಿಷೇಧಿಸುವುದಕ್ಕೆ ಅವಕಾಶವಿದೆ. ಟಿಮ್ ಡೇವಿಡ್ 5 ಡಿಮೆರಿಟ್ ಅಂಕಗಳನ್ನು ಗಳಿಸಿದರೆ ಅವರನ್ನು ಒಂದು ಐಪಿಎಲ್ ಪಂದ್ಯಕ್ಕೆ ನಿಷೇಧಿಸಬಹುದು. ಒಂದು ಋತುವಿನಲ್ಲಿ 7 ಡಿಮೆರಿಟ್ ಅಂಕಗಳನ್ನು ಗಳಿಸಿದರೆ ಅವರನ್ನು 2 ಪಂದ್ಯಗಳಿಗೆ ನಿಷೇಧಿಸಬಹುದು. ಡಿಮೆರಿಟ್ ಅಂಕಗಳು ಒಂದು ವರ್ಷ ಮಾನ್ಯವಾಗಿರುತ್ತವೆ.

Krunal Pandya: ನೋವಿನಲ್ಲೂ ಹೋರಾಡಿದ ಕೃನಾಲ್ ಪಾಂಡ್ಯ: ವೈರಲ್ ಆಯ್ತು ಆರ್‌ಸಿಬಿ ಸ್ಟಾರ್ ಆಟಗಾರನ ಭಾವನಾತ್ಮಕ ಪೋಸ್ಟ್‌
Krunal Pandya: ನೋವಿನಲ್ಲೂ ಹೋರಾಡಿದ ಕೃನಾಲ್ ಪಾಂಡ್ಯ: ವೈರಲ್ ಆಯ್ತು ಆರ್‌ಸಿಬಿ ಸ್ಟಾರ್ ಆಟಗಾರನ ಭಾವನಾತ್ಮಕ ಪೋಸ್ಟ್‌

ಇನ್ನು ಆರ್‌ಸಿಬಿಯ ಸ್ಟಾರ್ ಆಟಗಾರ ಟಿಮ್ ಡೇವಿಡ್ ಐಪಿಎಲ್ 2026 ರ ಋತುವಿನಲ್ಲಿ 232 ರನ್ ಗಳಿಸಿದ್ದಾರೆ. ಟಿಮ್ ಡೇವಿಡ್ ಐಪಿಎಲ್ 2026 ರ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 11 ಪಂದ್ಯಗಳಲ್ಲಿ 232 ರನ್ ಗಳಿಸಿದ್ದಾರೆ, 196.61 ಸ್ಟ್ರೈಕ್-ರೇಟ್‌ನಲ್ಲಿ 1 ಅರ್ಧಶತಕ ಗಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+