RCB VS Delhi: ಆರ್‌ಸಿಬಿ ಹವಾ ನೋಡಿ ಹಾರಿ ಹೋದ ದೆಹಲಿ!

ಕನ್ನಡಿಗರ ಹೆಮ್ಮೆಯ ತಂಡ ಆರ್‌ಸಿಬಿ ಒಂದು ಬಾರಿ ಕೂಡ ಕಪ್ ಗೆದ್ದಿಲ್ಲ. ಹೀಗಿದ್ದರೂ ಫ್ಯಾನ್ಸ್ ಮಾತ್ರ ಆರ್‌ಸಿಬಿ ತಂಡವನ್ನು ಬಿಟ್ಟುಕೊಡದೆ, ಹಲವು ವರ್ಷಗಳ ಕಾಲ ಆರ್‌ಸಿಬಿ ತಂಡದ ಪರ ನಿಂತಿದ್ದಾರೆ. ಹೀಗಾಗಿದ್ದಾಗಲೇ 2024 ಬೆಂಗಳೂರು ತಂಡದ ಅಭಿಮಾನಿಗಳ ಪಾಲಿಗೆ ಸಖತ್ ಲಕ್ಕಿ ಆಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲೋದು ಪಕ್ಕಾ ಆಗಿದೆ.

ಅಂದಹಾಗೆ ಈಗ ಮಹಿಳಾ ಪ್ರಿಮಿಯರ್ ಲೀಗ್‌ ಫೈನಲ್ ಪಂದ್ಯದಲ್ಲಿ ನಮ್ಮ ಆರ್‌ಸಿಬಿ ಮತ್ತು ದೆಹಲಿ ತಂಡಗಳು ಎದುರಾಗಿವೆ. ಆರಂಭದಲ್ಲಿ ಚೆನ್ನಾಗಿ ಆಡುತ್ತಿದ್ದ ದೆಹಲಿ ಮಹಿಳಾ ತಂಡ ಫೈನಲ್ ಗೆಲ್ಲೋದು ಪಕ್ಕಾ ಎನ್ನುವಂತಾಗಿತ್ತು. ಆದರೆ ಇದೀಗ 87 ರನ್ ಗಳಿಸಿದ ದೆಹಲಿಯ ಹುಡುಗಿಯರು ಒಬ್ಬೊಬ್ಬರಾಗಿ ಪೆವಿಲಿಯನ್ ಗೂಡು ಸೇರಿದ್ದಾರೆ. ಈ ಮೂಲಕ ದೆಹಲಿಯಲ್ಲಿ ಕೂಡ ನಮ್ಮ ಬೆಂಗಳೂರು ತಂಡದ ಹವಾ ಜೋರಾಗಿದೆ. ಕೇವಲ 25 ರನ್ ಗಳಿಸುವ ಒಳಗೆ ಬರೋಬ್ಬರಿ 7 ವಿಕೆಟ್ ಕಳೆದುಕೊಂಡು ದೆಹಲಿ ಕ್ರಿಕೆಟ್ ತಂಡ ಈಗ ನರಳಾಡುತ್ತಿದೆ.

RCB Have Chance To Win The WPL Final After Delhi Capitals Lost 7 Wickets For 87 Runs

ಶ್ರೇಯಾಂಕಾ ಪಾಟೀಲ್ ಮೋಡಿ!

ಕನ್ನಡತಿ ಶ್ರೇಯಾಂಕಾ ಮೋಡಿ ಮಾಡಿ, ಪ್ರಮುಖ ವಿಕೆಟ್ ಬೀಳಿಸಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಕ್ಕೆ ಬೆನ್ನೆಲುಬಾಗಿದ್ದಾರೆ. ಇಂದು ಕೂಡ ಒಳ್ಳೆಯ 2 ವಿಕೆಟ್ ಅನ್ನೇ ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದ, ಶ್ರೇಯಾಂಕಾ ಪಾಟೀಲ್ ದೆಹಲಿ ಕ್ಯಾಪಿಟಲ್ ತಂಡದ ಓಪನರ್ ಆಗಿರುವ ಮೆಗ್ ಲ್ಯಾನಿಂಗ್ ಅವರನ್ನು ಮನೆಗೆ ಕಳಿಸಿದ್ದಾರೆ. ಈ ಮೂಲಕ ಆರ್‌ಸಿಬಿಗೆ ಮತ್ತಷ್ಟು ಬಲ ತುಂಬಿದ್ದಾರೆ ಶ್ರೇಯಾಂಕಾ. ಹಾಗಾದ್ರೆ ಈಗ ನಮ್ಮ ಆರ್‌ಸಿಬಿ ತಂಡಕ್ಕೆ ಫ್ಯಾನ್ಸ್ ಸಪೋರ್ಟ್ ಹೇಗಿದೆ? ಮುಂದೆ ಓದಿ.

ಎಲ್ಲೆಲ್ಲೂ ಆರ್‌ಸಿಬಿ ಹವಾ ಜೋರು!

ಏನಾದರೂ ಆಗಲಿ ನಮ್ಮ ಬೆಂಗಳೂರು ತಂಡ ಕಪ್ ಗೆಲ್ಲಲಿ ಅಂತಾ ಕಾಯುತ್ತಿದ್ದ ಕನ್ನಡಿಗ ಕ್ರಿಕೆಟ್ ಅಭಿಮಾನಿಗಳ ಕನಸು ಇಂದು ನನಸಾಗುವ ಸಮಯ ಬಂದಿದೆ. ಅದರಲ್ಲೂ ನಮ್ಮ ಕನ್ನಡದ ಹುಡುಗಿಯರು ಈ ಸಾಧನೆ ಮಾಡಲು ಇನ್ನು ಕೇವಲ ಒಂದೇ ಒಂದು ಇನ್ನಿಂಗ್ಸ್ ಬಾಕಿ ಇದೆ. ಮತ್ತೊಂದು ಕಡೆ ದೆಹಲಿ ಕ್ರಿಕೆಟ್ ಮೈದಾನದಲ್ಲಿ ಮ್ಯಾಚ್ ನಡೆಯುತ್ತಿದ್ದರೂ, ಇಡೀ ಕ್ರೀಡಾಂಗಣ ಆರ್‌ಸಿಬಿ ಅಭಿಮಾನಿಗಳಿಂದ ತುಂಬಿ ಹೋಗಿದೆ. ಕನ್ನಡಿಗರು ಅಲ್ಲಿಯು ಹೋಗಿ ನಮ್ಮ ಬೆಂಗಳೂರು ತಂಡದ ಹುಡುಗಿಯರಿಗೆ ತಮ್ಮ ಸಪೋರ್ಟ್ ಕೊಡುತ್ತಿದ್ದಾರೆ.

ಒಟ್ಟಾರೆ ಹೇಳುವುದಾದರೆ ಕನ್ನಡದ ಜನರಿಗೆ 'ಆರ್‌ಸಿಬಿ' ಅಂದ್ರೆ ಒಂದು ಹೆಮ್ಮೆ, ಇಷ್ಟು ದಿನ ಹುಡುಗರ ತಂಡಕ್ಕೆ ನಮ್ಮ ಕನ್ನಡಿಗರು ಬೆಂಬಲವನ್ನ ನೀಡುತ್ತಿದ್ದರು. ಆದ್ರೆ ಇದೀಗ 'ಆರ್‌ಸಿಬಿ' ಹುಡುಗಿಯರ ತಂಡವೂ ಅಖಾಡಕ್ಕೆ ಇಳಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯರ ಅಬ್ಬರ ಬಲು ಜೋರಾಗಿದೆ. ಇದೇ ನಮ್ಮ ಆರ್‌ಸಿಬಿ ತಂಡದಲ್ಲಿರುವ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಇಂದು ಕೂಡ ತಮ್ಮ ಬೌಲಿಂಗ್ ಮೂಲಕ ಮೋಡಿ ಮಾಡಿದ್ದಾರೆ. ಈಗ, ದೆಹಲಿ ಪರಿಸ್ಥಿತಿ ನೋಡುತ್ತಿದ್ದರೆ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗುವ ಸಾಧ್ಯತೆ ಇದೆ. ಹೀಗೆ ಆಗಿದ್ದೇ ಆದರೆ ಆರ್‌ಸಿಬಿ ಮಹಿಳೆಯರ ತಂಡ ಇಂದು ಕಪ್ ಗೆದ್ದು ಬೀಗುವುದು ಪಕ್ಕಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+