RCB: 6 ಸಿಕ್ಸರ್, 4 ಬೌಂಡರಿ; 28 ಎಸೆತಗಳಲ್ಲೇ 62 ರನ್ ಚಚ್ಚಿದ ಆರ್‌ಸಿಬಿ ಆಲ್‌ರೌಂಡರ್

2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ ಸಿಬಿ ಬಲಿಷ್ಠ ತಂಡವನ್ನೇ ಕಟ್ಟಿದೆ. ತಂಡದಲ್ಲಿ ಬಲಿಷ್ಠ ಆಟಗಾರರು ಇದ್ದರು ಕೆಲವೊಮ್ಮೆ ಫಾರ್ಮ್‌ನಲ್ಲಿ ಇಲ್ಲದೇ ಇದ್ದರೆ ಉತ್ತಮ ಪ್ರದರ್ಶನ ನೀಡಲು ಆಗುವುದಿಲ್ಲ. ಹಿಂದಿನ ಹಲವು ಸೀಸನ್‌ಗಳಲ್ಲಿ ಆರ್ ಸಿಬಿ ಈ ಸಮಸ್ಯೆಯನ್ನು ಎದುರಿಸಿದೆ. ಸ್ಟಾರ್ ಆಟಗಾರರು ಇದ್ದರೂ ಫಾರ್ಮ್‌ನಲ್ಲಿ ಇಲ್ಲದೇ ಇರುವುದು ಸೋಲಿಗೆ ಕಾರಣವಾಗಿತ್ತು. ಆದರೆ ಈ ವರ್ಷ ಆರ್ ಸಿಬಿ ಹಣೆಬರಹ ಬದಲಾಗುವ ಸೂಚನೆ ಸಿಕ್ಕಿದೆ.

ಮೆಗಾ ಹರಾಜಿನಲ್ಲಿ ಆರ್ ಸಿಬಿ ಸೇರಿರುವ ಹಲವು ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ವಿವಿಧ ಪಂದ್ಯಾವಳಿಗಳಲ್ಲಿಈಗಾಗಲೇ ಉತ್ತಮ ಪ್ರದರ್ಶನ ನೀಡುತ್ತಿದ್ದು ಆರ್ ಸಿಬಿ ಅಭಿಮಾನಿಗಳು ಖುಷಿಯಾಗಿದ್ದಾರೆ. 2024ರ ಐಪಿಎಲ್ ಬಳಿಕ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ ಮಾಡಿದ್ದು ಈ ಆವೃತ್ತಿಯಲ್ಲಿ ತಂಡದಲ್ಲಿ ಫಿನಿಷರ್ ಯಾರು ಎನ್ನುವ ಪ್ರಶ್ನೆ ಇತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ.

rcb find new finisher as tim david scores 62 runs in 28 ball in bbl

ಆಸ್ಟ್ರೇಲಿಯಾದಲ್ಲಿ ಟಿಮ್ ಡೇವಿಡ್ ಅಬ್ಬರ

ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆರ್ ಸಿಬಿ ಆಲ್‌ರೌಂಡರ್ ಟಿಮ್ ಡೇವಿಡ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬಿಬಿಎಲ್‌ನಲ್ಲಿ ಹೋಬರ್ಟ್ ಹರಿಕೇನ್ಸ್ ತಂಡಕ್ಕಾಗಿ ಆಡುತ್ತಿದ್ದಾರೆ. ಭಾನುವಾರ ನಡೆದ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಟಿಮ್ ಡೇವಿಡ್ 28 ಎಸೆತಗಳಲ್ಲಿ 4 ಬೌಂಡರಿ 6 ಸಿಕ್ಸರ್ ಸಹಿತ 62 ರನ್ ಗಳಿಸಿದರು.

ಟಿಮ್ ಡೇವಿಡ್‌ರ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದ 187 ರನ್‌ಗಳ ಗುರಿಯನ್ನು 18.4 ಓವರ್ ಗಳಲ್ಲೇ ಬೆನ್ನಟ್ಟಿದ ಹೋಬರ್ಟ್ ಹರಿಕೇನ್ಸ್ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಟಿಮ್ ಡೇವಿಡ್‌ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.

ಆರ್‌ಸಿಬಿ ಅಭಿಮಾನಿಗಳ ಸಂತಸ

ಕಳೆದ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಲ್‌ರೌಂಡರ್ ವಿಲ್ ಜ್ಯಾಕ್ಸ್‌ರನ್ನು ಕೈಬಿಟ್ಟು ಟಿಮ್‌ ಡೇವಿಡ್‌ರನ್ನು ಖರೀದಿ ಮಾಡಿದ್ದಕ್ಕೆ ಆರ್ ಸಿಬಿ ಅಭಿಮಾನಿಗಳು ಸಿಟ್ಟಾಗಿದ್ದರು. ಮ್ಯಾನೇಜ್‌ಮೆಂಟ್ ಉತ್ತಮ ಆಟಗಾರನನ್ನು ಕೈಬಿಟ್ಟು ಫಾರ್ಮ್‌ನಲ್ಲಿ ಇಲ್ಲದ ಟಿಮ್ ಡೇವಿಡ್‌ರನ್ನು ಯಾಕೆ ತೆಗೆದುಕೊಳ್ಳಬೇಕಿತ್ತು ಎಂದು ಪ್ರಶ್ನೆ ಮಾಡಿದ್ದರು.

ಆದರೆ ಈಗ ಟಿಮ್ ಡೇವಿಡ್ ನೀಡುತ್ತಿರವ ಪ್ರದರ್ಶನ ನೋಡಿ ಮ್ಯಾನೇಜ್‌ಮೆಂಟ್ ಸರಿಯಾದ ನಿರ್ಧಾರ ಮಾಡಿದೆ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ. ದಿನೇಶ್ ಕಾರ್ತಿಕ್ ರೀತಿ ಕೊನೆಯ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಆಟಗಾರನಿಗಾಗಿ ಆರ್ ಸಿಬಿ ಹುಡುಕಾಡಿತ್ತು, ಅದಕ್ಕೆ ಟಿಮ್‌ ಡೇವಿಡ್‌ರನ್ನು ಖರೀದಿ ಮಾಡಿತ್ತು.

ಐಪಿಎಲ್‌ನಲ್ಲೂ ಟಿಮ್ ಡೇವಿಡ್ ಇದೇ ರೀತಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಆರ್ ಸಿಬಿ ಬೃಹತ್ ಮೊತ್ತ ಕಲೆ ಹಾಕಲು ಮತ್ತು ಬೆನ್ನಟ್ಟುವುದು ಸುಲಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+