RCB vs SRH: ಪಂದ್ಯ ಸೋತಿದ್ದಕ್ಕಿಂತ ಟಿಮ್ ಡೇವಿಡ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡ ಆರ್‌ಸಿಬಿ ಅಭಿಮಾನಿಗಳು

ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಇದ್ದ ಅವಕಾಶವನ್ನು ಆರ್ ಸಿಬಿ ಕಳೆದುಕೊಂಡಿದೆ. ಶುಕ್ರವಾರ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ ಸಿಬಿ 42 ರನ್‌ಗಳಿಂದ ಸೋಲು ಕಂಡಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಈಗ ಎಲ್‌ಎಸ್‌ಜಿ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದು ಪಂಜಾಬ್ ಕಿಂಗ್ಸ್ ಉಳಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಸೋತರೆ ಮಾತ್ರ ಆರ್ ಸಿಬಿಗೆ ಅಗ್ರ 2 ಸ್ಥಾನದಲ್ಲಿ ಒಂದು ಸ್ಥಾನ ಪಡೆಯುವ ಅವಕಾಶವಿದೆ.

232 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆರ್ ಸಿಬಿ ಉತ್ತಮ ಆರಂಭವನ್ನೇ ಪಡೆಯಿತು. 15 ಓವರ್ ಗಳವರೆಗೆ ಪಂದ್ಯದಲ್ಲಿ ಗೆಲುವು ಸಾಧಿಸುವ ಸ್ಥಿತಿಯಲ್ಲಿದ್ದ ಆರ್ ಸಿಬಿ ಬಳಿಕ ನಾಟಕೀಯ ಕುಸಿತ ಕಾಣುವ ಮೂಲಕ ಸೋಲು ಕಂಡಿತು. ಆರ್ ಸಿಬಿಗೆ ಅದೃಷ್ಟ ಕೂಡ ಕೈಕೊಟ್ಟಿತ್ತು.

rcb fans worry about tim david after lost against srh ipl 2025

ಆರ್ ಸಿಬಿ ತಂಡದ ಫಿನಿಷರ್ ಇಡೀ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಟಿಮ್ ಡೇವಿಡ್ ಗಾಯಗೊಂಡಿದ್ದು, ರಜತ್ ಪಟಿದಾರ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಲು ಮಾತ್ರ ಬಂದಿದ್ದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿತು.

ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಟಿಮ್ ಡೇವಿಡ್ ಸ್ನಾಯು ಸೆಳೆತಕ್ಕೆ ಒಳಗಾದರು. ಎಡಗಾಲು ನೋವಿನಿಂದ ಅವರು ನಡೆಯಲು ಕೂಡ ಕಷ್ಟಪಡುತ್ತಿದ್ದರು. ಟಿಮ್ ಡೇವಿಡ್ ಗಾಯಗೊಂಡಿದ್ದರಿಂದ ರೊಮಾರಿಯೋ ಶೆಫರ್ಡ್ ಮೊದಲು ಬ್ಯಾಟಿಂಗ್‌ಗೆ ಬರಬೇಕಾಯಿತು, ಆ ಬಳಿಕ ಕೃನಾಲ್ ಪಾಂಡ್ಯ ಬಂದರು. ಶೆಫರ್ಡ್ ಮೊದಲನೇ ಎಸೆತದಲ್ಲೇ ಔಟಾಗಿದ್ದರಿಂದ ಟಿಮ್ ಡೇವಿಡ್ ಅನಿವಾರ್ಯವಾಗಿ ಬ್ಯಾಟಿಂಗ್‌ಗೆ ಬಂದರು. ಅವರು ನಡೆಯಲೂ ಕೂಡ ಕಷ್ಟಪಡುತ್ತಿದ್ದರು. ಬಳಿಕ 5 ಎಸೆತಗಳಲ್ಲಿ 1 ರನ್ ಮಾತ್ರ ಗಳಿಸಿ ಔಟಾದರು.

ಒಂದು ವೇಳೆ ಟಿಮ್ ಡೇವಿಡ್ ಫಿಟ್ ಆಗಿದ್ದರೆ ಆರ್ ಸಿಬಿ ಗೆಲ್ಲುವ ಸಾಧ್ಯತೆ ಇತ್ತು. ಈಗ ಅಭಿಮಾನಿಗಳಿಗೆ ಆರ್ ಸಿಬಿ ಎಸ್‌ಆರ್ ಎಚ್ ವಿರುದ್ಧ ಸೋತಿದ್ದಕ್ಕಿಂತ ಟಿಮ್ ಡೇವಿಡ್ ಗಾಯಗೊಂಡಿರುವುದೇ ಅಭಿಮಾನಿಗಳ ಚಿಂತೆ ಹೆಚ್ಚಿಸಿದೆ.

ಫಿಟ್ ಆಗ್ತಾರಾ ಟಿಮ್ ಡೇವಿಡ್?

ಟಿಮ್ ಡೇವಿಡ್ ಗಾಯದ ಪರಿಸ್ಥಿತಿ ಬಗ್ಗೆ ಆರ್ ಸಿಬಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಅವರು ಎಲ್‌ಎಸ್‌ಜಿ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆಡುತ್ತಾರಾ ಇಲ್ಲವಾ ಎನ್ನುವುದು ಇನ್ನೂ ಗೊತ್ತಿಲ್ಲ. ಟಿಮ್ ಡೇವಿಡ್ ಪ್ಲೇಆಫ್‌ನಲ್ಲಿ ಆಡುವುದು ಆರ್ ಸಿಬಿಗೆ ಬ್ಯಾಟಿಂಗ್ ಬಲವನ್ನು ಹೆಚ್ಚಿಸುತ್ತದೆ. ಜೇಕಬ್ ಬೆಥೆಲ್ ಕೂಡ ಪ್ಲೇಆಫ್‌ಗೆ ಅಲಭ್ಯವಾಗಿರುವುದು ತಂಡದ ಸಂಕಷ್ಟವನ್ನು ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+