ದನ ಕಾಯೋದಕ್ಕೂ ಆರ್‌ಸಿಬಿ ಆಟಗಾರರು ಲಾಯಕ್ ಇಲ್ವಾ? ಅಭಿಮಾನಿಗಳು ಏನ್ ಹೇಳ್ತಿದ್ದಾರೆ ಕೇಳಿ!
ಆರ್‌ಸಿಬಿ ಅಭಿಮಾನಿಗಳು ಸತತ ಸೋಲಿನಿಂದ ರೊಚ್ಚಿಗೆದ್ದಿದ್ದು, ಆಕ್ರೋಶ ಹೊರಹಾಕುತ್ತಾ ತಮ್ಮ ಕೋಪ ತೋರಿಸುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಈಗ, ಭಾರಿ ದೊಡ್ಡ ಮಟ್ಟದಲ್ಲಿ ಟ್ರೋಲ್ & ಚರ್ಚೆ ನಡೆಸುತ್ತಿದ್ದಾರೆ ಫ್ಯಾನ್ಸ್. ಇದೇ ಸಮಯದಲ್ಲಿ ಫ್ಯಾನ್ಸ್ ಸಿಟ್ಟು ಆರ್‌ಸಿಬಿ ಆಟಗಾರರ ವಿರುದ್ಧವೂ ತಿರುಗಿದೆ! 'ದನ ಕಾಯೋದಕ್ಕೂ ಆರ್‌ಸಿಬಿ ಆಟಗಾರರು ಲಾಯಕ್ ಇಲ್ಲ' ಅಂತಿದ್ದಾರೆ ಫ್ಯಾನ್ಸ್.
ಆರ್‌ಸಿಬಿ ಕಳೆದ 16 ವರ್ಷಗಳಿಂದ ಕೂಡ ಕಪ್ ಗೆದ್ದಿಲ್ಲ, ಹಾಗೇ ಅಭಿಮಾನಿಗಳ ಆಸೆಯನ್ನ ಕೂಡ ಪೂರೈಸಿಲ್ಲ. ಹೀಗಿದ್ದರೂ ಆರ್‌ಸಿಬಿ ಅಭಿಮಾನಿಗಳು ಮಾತ್ರ ತಮ್ಮ ನೀಯತ್ತು ಹಾಗೇ ಉಳಿಸಿಕೊಂಡು, ಬೆಂಗಳೂರು ತಂಡಕ್ಕೆ ಐಪಿಎಲ್ ಟೂರ್ನಿಯಲ್ಲಿ ಸಪೋರ್ಟ್ ಮಾಡುತ್ತಿದ್ದಾರೆ. ಇಷ್ಟಾದರೂ ಆರ್‌ಸಿಬಿ ಆಟಗಾರರು ಸರಿಯಾಗಿ ಆಟ ಆಡುತ್ತಿಲ್ಲ ಎಂಬ ಬೇಸರ ಅಭಿಮಾನಿ ಬಳಗದ ಎದೆಯಲ್ಲಿ ಕಾಡ್ತಿದೆ. ಮತ್ತೊಂದು ಕಡೆ ಆರ್‌ಸಿಬಿ ಈ ರೀತಿ ಕೆಟ್ಟ ಪ್ರದರ್ಶನವನ್ನು ತೋರಿಸುತ್ತಿದ್ದು, ಈಗಾಗಲೇ ಸತತ 3 ಸೋಲು ಕಂಡು ಹ್ಯಾಟ್ರಿಕ್ ಬಾರಿಸಿದೆ. ಈ ಹೊತ್ತಲ್ಲೇ ಅಭಿಮಾನಿಗಳು ರೊಚ್ಚಿಗೆದ್ದು, ದನ ಕಾಯೋಕೆ ಹೋಗಿ ಅಂತಾನೆ ಆರ್‌ಸಿಬಿ ಪ್ಲೇಯರ್ಸ್ & ಆಡಳಿತ ಮಂಡಳಿಗೆ ಬೈಯುತ್ತಿದ್ದಾರೆ. ಇದು ಕಿಚ್ಚು ಹೊತ್ತಿಸಿದೆ.

ಆರ್‌ಸಿಬಿ ಸೋಲಿಗೆ ಕಾರಣ ಏನು?
ಹೀಗೆ ಆರ್‌ಸಿಬಿ ತಂಡ ಹೀನಾಯವಾಗಿ ಸೋಲು ಕಾಣೋದಕ್ಕೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಕಾರಣ ಅಂತಾ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಯಾಕಂದ್ರೆ ಸರಿಯಾದ ಆಟಗಾರರನ್ನೇ ಆಯ್ಕೆ ಮಾಡದ ಆರ್‌ಸಿಬಿ ಆಡಳಿತ ಮಂಡಳಿ, ಈ ರೀತಿ ಹೀನಾಯ ಸೋಲಿಗೆ ನೇರವಾಗೇ ಕಾರಣ ಆಗಿದೆ. ಯಾರ್ ಯಾರಿಗೋ ಕೋಟಿ ಕೋಟಿ ಹಣ ಕೊಟ್ಟು ಹೊರ ದೇಶದ ಕ್ರಿಕೆಟ್ ಆಟಗಾರರನ್ನು ಖರೀದಿ ಮಾಡುವ ಬದಲು, ಕನ್ನಡ ನಾಡಿನ ಪ್ರತಿಭಾವಂತ ಆಟಗಾರರನ್ನೇ ಯಾಕೆ ಆಯ್ಕೆ ಮಾಡಿಲ್ಲ? ಎಂದು ಆರ್‌ಸಿಬಿ ಆಡಳಿತ ಮಂಡಳಿ ಅಂದ್ರೆ ಮ್ಯಾನೆಂಜ್‌ಮೆಂಟ್ ಬಳಿ ಪ್ರಶ್ನೆ ಕೇಳುತ್ತಿದ್ದಾರೆ.
ವಿರಾಟ್ ಕೊಹ್ಲಿ ಮತ್ತೆ ಕ್ಯಾಪ್ಟನ್?
ಇಷ್ಟೆಲ್ಲಾ ಘಟನೆ ನಡುವೆ ಇದೀಗ ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ಆರ್‌ಸಿಬಿ ತಂಡಕ್ಕೆ ಕ್ಯಾಪ್ಟನ್ ಆಗಬೇಕು ಎಂಬ ಬೇಡಿಕೆ ಕೂಡ ಮುಂದಿಟ್ಟಿದ್ದಾರೆ ಫ್ಯಾನ್ಸ್. ಯಾಕಂದ್ರೆ ಆರ್‌ಸಿಬಿ ಆಡಳಿತ ಮಂಡಳಿ ಸದಸ್ಯರು ಸೂಕ್ತವಾಗಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಮತ್ತೊಮ್ಮೆ ಆರ್‌ಸಿಬಿ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ಅವರೇ ಕ್ಯಾಪ್ಟನ್ ಆಗಲಿ ಅಂತಾ ಆಗ್ರಹಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಈ ರೀತಿ ವಿರಾಟ್ ಕೊಹ್ಲಿ ಪರವಾಗಿ ಭಾರಿ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ.
ಗ್ಲೆನ್ ಮ್ಯಾಕ್ಸ್‌ವೆಲ್ ತಂಡದಿಂದ ಹೊರಗೆ?
ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆರ್‌ಸಿಬಿ ಯಾವಾಗ ಹೀನಾಯ ಸೋಲು ಕಂಡು ಅಭಿಮಾನಿಗಳ ಭಾವನೆ ಕೆರಳಿಸಿತ್ತೊ, ಅಲ್ಲಿಂದಲೇ ಶುರುವಾಗಿತ್ತು ಆಕ್ರೋಶ. ಹೀಗಾಗಿಯೇ ಇದೀಗ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಮುಂದಿನ ಮ್ಯಾಚ್‌ನಲ್ಲಿ ಆಟ ಆಡಿಸಲ್ಲ. ಬದಲಾಗಿ ಅವರನ್ನು ಕೂರಿಸುತ್ತಾರೆ ಅಂತಿದ್ದಾರೆ ಅಕಾಶ್ ಚೋಪ್ರಾ. ಸಾಲು ಸಾಲು ಸೋಲುಗಳಿಂದ, ಆರ್‌ಸಿಬಿ ತಂಡ ಈಗ ಕಂಗೆಟ್ಟು ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ತಂಡದಲ್ಲಿ, ಬಹುಮುಖ್ಯ ಬದಲಾವಣೆ ಗ್ಯಾರಂಟಿ ಎನ್ನಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ, ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಮನೆ ದಾರಿ ತೋರಿಸುವುದು ಗ್ಯಾರಂಟಿ ಆಗುತ್ತಿದೆ.
201 ರನ್ ಬಾರಿಸಿದ್ದ ಮ್ಯಾಕ್ಸಿಗೆ ಏನಾಯ್ತು?
ಗ್ಲೆನ್ ಮ್ಯಾಕ್ಸ್‌ವೆಲ್ 2023 ವಿಶ್ವಕಪ್ ಟೂರ್ನಿಯಲ್ಲಿ 128 ಬಾಲ್‌ನ ಆಡಿ ಅಫ್ಘಾನ್ ವಿರುದ್ಧ 201 ರನ್ ಗಳಿಸಿದ್ದರು. 21 ಬೌಂಡರಿ ಹಾಗೂ 10 ಸಿಕ್ಸರ್ ಚಚ್ಚಿದ್ದ ಇದೇ ಗ್ಲೆನ್ ಮ್ಯಾಕ್ಸ್‌ವೆಲ್ ಈಗ, ಆರ್‌ಸಿಬಿ ತಂಡಕ್ಕೆ ವಿಲನ್ ಆಗುತ್ತಿದ್ದಾರೆ ಅಂತಿದ್ದಾರೆ ಫ್ಯಾನ್ಸ್. ಈ ಆರೋಪಗಳ ನಡುವೆ, ಗ್ಲೆನ್ ಮ್ಯಾಕ್ಸ್‌ವೆಲ್ ಕುಡಿತಕ್ಕೆ ದಾಸರಾಗಿದ್ದಾರೆ. ವಿಪರೀತ ಕುಡಿತದ ಕಾರಣಕ್ಕೆ, ಗ್ಲೆನ್ ಮ್ಯಾಕ್ಸ್‌ವೆಲ್ ಏಕಾಗ್ರತೆ ಕಳೆದುಕೊಂಡಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ. ಇದು ಒಂದು ಕಡೆ ಆದರೆ, ಮತ್ತೊಂದು ಕಡೆಗೆ ಗ್ಲೆನ್ ಮ್ಯಾಕ್ಸಿ ಅವರನ್ನು ಆರ್‌ಸಿಬಿ ತಂಡದಿಂದ ಕೈಬಿಡಲಿದೆ ಎಂಬ ಮಾಹಿತಿ ಓಡಾಡುತ್ತಿದೆ. ಆದರೆ ಇದು ಇನ್ನೂ ಅಧಿಕೃತವಾಗಿಲ್ಲ, ಹೀಗಾಗಿ ಕುತೂಹಲ ಡಬಲ್ ಆಗಿದೆ.












Click it and Unblock the Notifications