RCB VS CSK: ಆರ್‌ಸಿಬಿ ಕಪ್ ಗೆದ್ದರೆ ರಾಷ್ಟ್ರೀಯ ರಜೆ ಘೋಷಣೆ?
ಆರ್‌ಸಿಬಿ ಬೆಂಗಳೂರು ತಂಡ ಇದೀಗ ಎಲ್ಲೆಲ್ಲೂ ಹವಾ ಎಬ್ಬಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಂಡ್ರೆ ಐಪಿಎಲ್ ಅಖಾಡದಲ್ಲಿ ಒಂದು ಭಯ ಹುಟ್ಟಿದೆ. ಯಾಕಂದ್ರೆ ಸತತ 6 ಸೋಲುಗಳ ನಂತರ ಸತತ 6 ಗೆಲುವು ಕಂಡಿರುವ ಆರ್‌ಸಿಬಿ ತಂಡ ಇದೀಗ 2024ರ ಐಪಿಎಲ್ ಟೂರ್ನಿ ಪ್ಲೇಆಫ್ ಪ್ರವೇಶ ಮಾಡಿದೆ. ಇದರ ಜೊತೆಗೆ, ಐಪಿಎಲ್ ಕಪ್ ಗೆಲ್ಲುವ ತಂಡವಾಗಿ ಕೂಡ ಆರ್‌ಸಿಬಿ ಈಗ ಗುರುತಿಸಿಕೊಂಡಿದೆ. ಹೀಗಿದ್ದಾಗಲೇ ಆರ್‌ಸಿಬಿ ಅಭಿಮಾನಿಗಳು ರಾಜ್ಯ & ಕೇಂದ್ರ ಸರ್ಕಾರಕ್ಕೆ ಹೊಸ ಬೇಡಿಕೆ ಸಲ್ಲಿಸಿದ್ದಾರೆ.
ಇಡೀ ಇಂಡಿಯಾ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದ ಮೇಲೆ ಕಣ್ಣಿಟ್ಟು ಕೂತಿತ್ತು ಯಾಕಂದ್ರೆ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ಮಹತ್ವದ ಮ್ಯಾಚ್ ನಡೆದಿತ್ತು. ಈ ಕಾರಣಕ್ಕೆ ಕೋಟ್ಯಂತರ ಅಭಿಮಾನಿಗಳು ಆರ್‌ಸಿಬಿ ಬೆಂಗಳೂರು ಟೀಂನ ಗೆಲುವಿಗಾಗಿ ಪ್ರಾರ್ಥನೆ ಮಾಡಿದ್ರು. ಅದರಲ್ಲೂ ಕೋಟಿ ಕೋಟಿ ಅಭಿಮಾನಿಗಳು ಆರ್‌ಸಿಬಿ ಗೆದ್ದ ತಕ್ಷಣ ರೋಡ್ ರೋಡ್‌ನಲ್ಲಿ ಸಂಭ್ರಮಿಸಿ, ತಮ್ಮ ಖುಷಿ ಹೊರಹಾಕಿದ್ದಾರೆ. ಇದೇ ಸಮಯದಲ್ಲಿ RCB ಅಭಿಮಾನಿಗಳು ಹೊಸ ಡಿಮ್ಯಾಂಡ್ ಇಟ್ಟಿದ್ದು, ರಾಷ್ಟ್ರೀಯ ರಜೆ ಬೇಕು ಅಂತಿದ್ದಾರೆ!

ಆರ್‌ಸಿಬಿ ಕಪ್ ಗೆದ್ದರೆ ಸರ್ಕಾರಿ ರಜೆ?
ಹೌದು, ಶನಿವಾರ ಆರ್‌ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದು ಬೀಗಿದ ನಂತರ ಬೆಂಗಳೂರಿನಲ್ಲಿ ಬೆಂಗಳೂರು ತಂಡದ ಅಭಿಮಾನಿಗಳು ಭರ್ಜರಿ ಸಂಭ್ರಮ ವ್ಯಕ್ತಪಡಿಸಿದರು. ಮಧ್ಯರಾತ್ರಿಯ ಸಮಯದಲ್ಲೂ ಎಂಜಾಯ್ ಮಾಡಿ, 2 ರಿಂದ 3 ಗಂಟೆ ತನಕ ಸೆಲೆಬ್ರೇಷನ್‌ನ ಮಾಡಿದರು. ರೋಡ್ ರೋಡ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು, ಹಾಗೇ ವಿರಾಟ್ ಕೊಹ್ಲಿ & ಆರ್‌ಸಿಬಿ ತಂಡದ ಇತರ ಆಟಗಾರರನ್ನು ಕೂಗಿ ಕೂಗಿ ಹೊಗಳಿದರು ಕನ್ನಡಿಗರು.
ಹಾಗೇ ಇದೇ ಸಮಯದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಆರ್‌ಸಿಬಿ ಫ್ಯಾನ್ಸ್, ಬಹುದೊಡ್ಡ ಡಿಮ್ಯಾಂಡ್ ಇಟ್ಟಿದ್ದಾರೆ. ಅದು ಏನಂದ್ರೆ ಈ ಬಾರಿ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲೋದು ಬಹುತೇಕ ಗ್ಯಾರಂಟಿ. 2024ರ ಐಪಿಎಲ್ ಆರ್‌ಸಿಬಿ ಗೆದ್ದ ತಕ್ಷಣ ರಜೆ ಘೋಷಿಸಿ, ರೋಡ್‌ಗಳನ್ನ ಬಂದ್ ಮಾಡಿ ಅಂತಾ ಬೇಡಿಕೆ ಇಡುತ್ತಿದ್ದಾರೆ. ನೇರವಾಗಿ ಸಿಎಂ ಸಿದ್ದರಾಮಯ್ಯ ಅವರೇ ಈ ಬಗ್ಗೆ ಕ್ರಮ ಕೈಗೊಂಡು ರಜೆ ಘೋಷಣೆ ಮಾಡಬೇಕು ಅಂತಿದ್ದಾರೆ.
ಆರ್‌ಸಿಬಿ VS ರಾಜಸ್ಥಾನ ಮ್ಯಾಚ್!
ಹೀಗೆ ಆರ್‌ಸಿಬಿ ಅಭಿಮಾನಿಗಳು ಬೆಂಗಳೂರು ತಂಡ ಗೆದ್ದ ಖುಷಿಯಲ್ಲಿ ಹಲವು ಬೇಡಿಕೆಯ ಮುಂದಿಡುತ್ತಿದ್ದಾರೆ. ಇದೀಗ ಆರ್‌ಸಿಬಿ ತಂಡ ಪ್ಲೇಆಫ್‌ನಲ್ಲಿ ರಾಜಸ್ಥಾನ ತಂಡ ಎದುರಿಸುವ ಬಗ್ಗೆ ಕನ್ಫರ್ಮೇಷನ್ ಸಿಕ್ಕಿದ್ದು, ರಾಜಸ್ಥಾನ ತಂಡಕ್ಕೆ ಸೋಲಿನ ರುಚಿ ತೋರಿಸಲು ಕಾಯ್ತಾ ಇದ್ದಾರೆ ಆರ್‌ಸಿಬಿ ಆಟಗಾರರು. ಹಾಗೇ ಈ ಮೂಲಕ ಫೈನಲ್ ತಲುಪಲು ಬೆಂಗಳೂರು ಟೀಂ ಹುಡುಗರು ಸಿದ್ಧತೆ ಆರಂಭಿಸಿದ್ದಾರೆ.
ಸುನೀಲ್ ಗವಾಸ್ಕರ್ ವಿರುದ್ಧ ಸಿಟ್ಟು!
ವಿರಾಟ್ ಕೊಹ್ಲಿ ಕಂಡರೆ ಸುನೀಲ್ ಗವಾಸ್ಕರ್‌ಗೆ ಅದೇನು ಆಗಿದೆಯೋ ಗೊತ್ತಿಲ್ಲ. ವಿರಾಟ್ ಕೊಹ್ಲಿ ವಿರುದ್ಧ ಪದೇ ಪದೇ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಾರೆ ಸುನೀಲ್ ಗವಾಸ್ಕರ್. ಇದೇ ತಿಂಗಳ ಆರಂಭದಲ್ಲಿ ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡಿದ್ದ ಗವಾಸ್ಕರ್, ಕೆಲ ದಿನಗಳ ಹಿಂದೆ ಮತ್ತೊಮ್ಮೆ ಕೊಹ್ಲಿ ಬಗ್ಗೆ ಮಾತನಾಡಿದ್ದರು. ಮಹೇಂದ್ರ ಸಿಂಗ್ ಧೋನಿ ಇರದೇ ಇದ್ದಿದ್ದರೆ ವಿರಾಟ್ ಕೊಹ್ಲಿ ವೃತ್ತಿ ಜೀವನ ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತಿರಲಿಲ್ಲ ಎಂದಿದ್ದರು. ಸುನೀಲ್ ಗವಾಸ್ಕರ್ ಹೀಗೆ ಕೊಹ್ಲಿ ಕುರಿತು ಮತ್ತೆ ಬಾಯಿಗೆ ಬಂದಂತೆ ಹೇಳಿಕೆ ನೀಡಿರುವುದು ಈಗ ಅಕ್ಷರಶಃ ಕಿಚ್ಚು ಹೊತ್ತಿಸಿದೆ.
ಗವಾಸ್ಕರ್ ಬಾಯಿ ಮುಚ್ಚಿಸುತ್ತಾರಾ ಫ್ಯಾನ್ಸ್?
ಸುನೀಲ್ ಗವಾಸ್ಕರ್ ಈ ವಯಸ್ಸಲ್ಲಿ ಬಾಯಿಗೆ ಬಂದ ರೀತಿ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆ ನೀಡುತ್ತಿರುವುದು ಕಿಚ್ಚು ಹೊತ್ತಿಸಿದೆ. ಹೀಗಾಗಿ ವಿರಾಟ್ ಕೊಹ್ಲಿ ಫ್ಯಾನ್ಸ್ ಕೂಡ ಈ ಕುರಿತು ಗರಂ ಆಗಿದ್ದಾರೆ. ಅದರಲ್ಲೂ ಮೊನ್ನೆ ಚೆನ್ನೈ ವಿರುದ್ಧ ಆರ್‌ಸಿಬಿ ತಂಡ ಗೆದ್ದ ನಂತರ ಈ ಕೋಪ ಮತ್ತಷ್ಟು ಹೆಚ್ಚಾಗಿದೆ. ಹೀಗೆ ಕೊಹ್ಲಿ ಫ್ಯಾನ್ಸ್ ಕೋಪದಲ್ಲಿ ಗವಾಸ್ಕರ್ ವಿರುದ್ಧ ಈ ಸಮಯದಲ್ಲಿ ಮತ್ತಷ್ಟು ರೊಚ್ಚಿಗೆದ್ದಿದ್ದು, ಖಡಕ್ ಪ್ರತ್ಯುತ್ತರ ನೀಡುತ್ತಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಸ್ವಂತ ಶಕ್ತಿಯಿಂದ ಇಷ್ಟು ಎತ್ತರಕ್ಕೆ ಬಂದಿದ್ದಾರೆ. ನಿಮ್ಮ ರೀತಿ ವಿರಾಟ್ ಕೊಹ್ಲಿ ಬೇರೆಯವರ ಬಗ್ಗೆ ಮಾತನಾಡಲ್ಲ ಅಂತಾ ಗವಾಸ್ಕರ್‌ಗೆ ಕೊಹ್ಲಿ ಫ್ಯಾನ್ಸ್ ತಿರುಗೇಟು ನೀಡುತ್ತಿದ್ದಾರೆ. ಅಲ್ಲದೆ ಈ ರೀತಿ ಮಾತನಾಡುವುದನ್ನು ನೀವು ನಿಲ್ಲಿಸಿ, ವಿರಾಟ್ ಕೊಹ್ಲಿಯ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ ಕೊಹ್ಲಿ ಫ್ಯಾನ್ಸ್.












Click it and Unblock the Notifications