RCB VS CSK: ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದ ಸುನೀಲ್ ಗವಾಸ್ಕರ್ ವಿರುದ್ಧ ಕೊಹ್ಲಿ ಫ್ಯಾನ್ಸ್ ಫೈಟಿಂಗ್!

ವಿರಾಟ್ ಕೊಹ್ಲಿ ಬಗ್ಗೆ ಪದೇ ಪದೇ ಮಾತನಾಡಿ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವ ಸುನೀಲ್ ಗವಾಸ್ಕರ್ ವಿರುದ್ಧ ಇದೀಗ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಬಗ್ಗೆ ಮತ್ತೆ ನಾಲಿಗೆ ಹರಿಬಿಟ್ಟಿದ್ದ ಗವಾಸ್ಕರ್, ವಿರಾಟ್ ಕೊಹ್ಲಿ ತನ್ನ ಕ್ರಿಕೆಟ್ ಜೀವನ ಉಳಿಸಿಕೊಳ್ಳಲು ಒದ್ದಾಡಿದ್ದರು ಎಂದಿದ್ದರು. ಇನ್ನು ಸುನೀಲ್ ಗವಾಸ್ಕರ್ ಈ ರೀತಿ ನೀಡಿರುವ ಹೇಳಿಕೆಗೆ ಬೆಂಕಿಯೇ ಹೊತ್ತಿಕೊಂಡಿದೆ.

ವಿರಾಟ್ ಕೊಹ್ಲಿ ಕಂಡರೆ ಸುನೀಲ್ ಗವಾಸ್ಕರ್‌ಗೆ ಅದೇನು ಆಗಿದೆಯೋ ಗೊತ್ತಿಲ್ಲ. ವಿರಾಟ್ ಕೊಹ್ಲಿ ವಿರುದ್ಧ ಪದೇ ಪದೇ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಾರೆ ಸುನೀಲ್ ಗವಾಸ್ಕರ್. ಇದೇ ತಿಂಗಳ ಆರಂಭದಲ್ಲಿ ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡಿದ್ದ ಗವಾಸ್ಕರ್, ಕೆಲ ದಿನಗಳ ಹಿಂದೆ ಮತ್ತೊಮ್ಮೆ ಕೊಹ್ಲಿ ಬಗ್ಗೆ ಮಾತನಾಡಿದ್ದರು. ಮಹೇಂದ್ರ ಸಿಂಗ್ ಧೋನಿ ಇರದೇ ಇದ್ದಿದ್ದರೆ ವಿರಾಟ್ ಕೊಹ್ಲಿ ವೃತ್ತಿ ಜೀವನ ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತಿರಲಿಲ್ಲ ಎಂದಿದ್ದರು. ಸುನೀಲ್ ಗವಾಸ್ಕರ್ ಹೀಗೆ ಕೊಹ್ಲಿ ಕುರಿತು ಮತ್ತೆ ಬಾಯಿಗೆ ಬಂದಂತೆ ಹೇಳಿಕೆ ನೀಡಿರುವುದು ಈಗ ಅಕ್ಷರಶಃ ಕಿಚ್ಚು ಹೊತ್ತಿಸಿದೆ.

RCB Fans Angry Against Sunil Gavaskar After He Spoke Again About Virat Kohli

ಗವಾಸ್ಕರ್ ಬಾಯಿ ಮುಚ್ಚಿಸುತ್ತಾರಾ ಫ್ಯಾನ್ಸ್?

ಸುನೀಲ್ ಗವಾಸ್ಕರ್ ಈ ವಯಸ್ಸಲ್ಲಿ ಬಾಯಿಗೆ ಬಂದ ರೀತಿ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆ ನೀಡುತ್ತಿರುವುದು ಕಿಚ್ಚು ಹೊತ್ತಿಸಿದೆ. ಹೀಗಾಗಿ ವಿರಾಟ್ ಕೊಹ್ಲಿ ಫ್ಯಾನ್ಸ್ ಕೂಡ ಈ ಕುರಿತು ಗರಂ ಆಗಿದ್ದಾರೆ. ಅದರಲ್ಲೂ ಮೊನ್ನೆ ಚೆನ್ನೈ ವಿರುದ್ಧ ಆರ್‌ಸಿಬಿ ತಂಡ ಗೆದ್ದ ನಂತರ ಈ ಕೋಪ ಮತ್ತಷ್ಟು ಹೆಚ್ಚಾಗಿದೆ. ಹೀಗೆ ಕೊಹ್ಲಿ ಫ್ಯಾನ್ಸ್ ಕೋಪದಲ್ಲಿ ಗವಾಸ್ಕರ್ ವಿರುದ್ಧ ಈ ಸಮಯದಲ್ಲಿ ಮತ್ತಷ್ಟು ರೊಚ್ಚಿಗೆದ್ದಿದ್ದು, ಖಡಕ್ ಪ್ರತ್ಯುತ್ತರ ನೀಡುತ್ತಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಸ್ವಂತ ಶಕ್ತಿಯಿಂದ ಇಷ್ಟು ಎತ್ತರಕ್ಕೆ ಬಂದಿದ್ದಾರೆ. ನಿಮ್ಮ ರೀತಿ ವಿರಾಟ್ ಕೊಹ್ಲಿ ಬೇರೆಯವರ ಬಗ್ಗೆ ಮಾತನಾಡಲ್ಲ ಅಂತಾ ಗವಾಸ್ಕರ್‌ಗೆ ಕೊಹ್ಲಿ ಫ್ಯಾನ್ಸ್ ತಿರುಗೇಟು ನೀಡುತ್ತಿದ್ದಾರೆ. ಅಲ್ಲದೆ ಈ ರೀತಿ ಮಾತನಾಡುವುದನ್ನು ನೀವು ನಿಲ್ಲಿಸಿ, ವಿರಾಟ್ ಕೊಹ್ಲಿಯ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ ಕೊಹ್ಲಿ ಫ್ಯಾನ್ಸ್.

ಸೈಲೆಂಟ್ ಆಗ್ತಾರಾ ಗವಾಸ್ಕರ್?

ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಯಾಕಂದ್ರೆ ಸುಖಾಸುಮ್ಮನೆ, ಸುನೀಲ್ ಗವಾಸ್ಕರ್ ಅವರು ವಿರಾಟ್ ಕೊಹ್ಲಿಯ ಬಗ್ಗೆ ಮಾತನಾಡುತ್ತಿದ್ದಾರೆ ಅನ್ನೋದು ಅಭಿಮಾನಿಗಳ ಆರೋಪ. ಈಗಲಾದರೂ, ಗವಾಸ್ಕರ್ ಸುಮ್ಮನೆ ತಮ್ಮ ಕೆಲಸ ನೋಡಿಕೊಳ್ಳಲಿ. ಅದನ್ನ ಬಿಟ್ಟು ಬೇರೆ ರೀತಿಯಲ್ಲಿ ಕಿರಿಕ್ ಮಾಡಿ ಕಿತಾಪತಿ ಎಬ್ಬಿಸುವುದು ಬೇಡ ಅನ್ನೋದು ಕೊಹ್ಲಿ ಅಭಿಮಾನಿಗಳ ಆಗ್ರಹವಾಗಿದೆ. ಆದರೆ ಇಷ್ಟಕ್ಕೇ ಸುನೀಲ್ ಗವಾಸ್ಕರ್ ಸುಮ್ಮನೆ ಆಗುತ್ತಾರಾ? ಅಥವಾ ಕೊಹ್ಲಿ ಅವರ ಅಭಿಮಾನಿಗಳನ್ನೂ ಬೈಯ್ತಾರಾ? ಈ ಬಗ್ಗೆ ಉತ್ತರ ಹುಡುಕಲು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+