ಜೈ ಆರ್‌ಸಿಬಿ.. ವಿರಾಟ್ ಕೊಹ್ಲಿಯ ಸ್ವೀಡನ್ ಅಭಿಮಾನಿ ಮಾತಿದು!
ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹೀಗೆ ಐಪಿಎಲ್ ಮ್ಯಾಚ್ ನಡೀತಾ ಇದೆ ಅಂದ್ರೆ ಅಲ್ಲಿ ಟೀಂ ಯಾವುದೇ ಇರಲಿ ಒಬ್ಬರಾದರೂ ಆರ್‌ಸಿಬಿ ಅಭಿಮಾನಿ ಇದ್ದೇ ಇರ್ತಾರೆ. ಹಾಗೇ ಈ ಸಮಯದಲ್ಲಿ ಆರ್‌ಸಿಬಿ ತಂಡದ ಬಗ್ಗೆ ಘೋಷಣೆ ಕೇಳಿ ಬಂದೇ ಬರುತ್ತದೆ. ಇಡೀ ಐಪಿಎಲ್ ಟೂರ್ನಿಯಲ್ಲಿ ಉಳಿದ 9 ತಂಡಗಳದ್ದು ಒಂದು ಲೆಕ್ಕವಾಗಿದ್ದರೆ ಆರ್‌ಸಿಬಿ ತಂಡದ್ದೇ ವಿಶೇಷ ಲೆಕ್ಕ. ಹೀಗಿದ್ದಾಗ ಸ್ವೀಡನ್ ಮೂಲದ ಆರ್‌ಸಿಬಿ ಅಭಿಮಾನಿ ವಿರಾಟ್ ಕೊಹ್ಲಿ ಬಗ್ಗೆ ಹೇಳಿದ್ದು ಏನು? ಆ ಬಗ್ಗೆ ವಿಡಿಯೋ ನೋಡಲು ಮುಂದೆ ಓದಿ.
ಐಪಿಎಲ್ ಅಂದ್ರೆ ಭಾರತದಲ್ಲಿ ಒಂದು ಹಬ್ಬದ ರೀತಿ ಜನ ಸೆಲೆಬ್ರೇಷನ್ ಮಾಡ್ತಾರೆ. ಅದರಲ್ಲೂ ಬೆಂಗಳೂರು ಜನರಿಗೆ & ಸ್ಪೆಷಲ್ ಆಗಿ ಕನ್ನಡಿಗರಿಗೆ ಆರ್‌ಸಿಬಿ ಕಣ ಕಣದಲ್ಲೂ ಬೆರೆತು ಹೋಗಿದೆ. ಹೀಗಿದ್ದರೂ ಆರ್‌ಸಿಬಿ ಟೀಂ ಮಾತ್ರ ಕಳೆದ 16 ವರ್ಷ ಕಪ್ ಗೆದ್ದಿಲ್ಲ. ಇಷ್ಟೆಲ್ಲದರ ನಡುವೆಯೂ ಕನ್ನಡಿಗರು ಮಾತ್ರ ಆರ್‌ಸಿಬಿ ಟೀಂ ಕೈಬಿಟ್ಟಿಲ್ಲ ಹಾಗೇ 17ನೇ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ನಾಳೆ ಮತ್ತು ನಾಡಿದ್ದು ಆರ್‌ಸಿಬಿ ಗೆದ್ದೇ ಗೆಲ್ಲಬೇಕಿದೆ.

ಕನ್ನಡಿಗರ ಜೊತೆಗೇ, ಜಗತ್ತಿನ ಮೂಲೆ ಮೂಲೆಯಲ್ಲಿ ಕೂಡ ಆರ್‌ಸಿಬಿ ಬೆಂಗಳೂರು ತಂಡಕ್ಕೆ ಅಭಿಮಾನಿಗಳು ಇದ್ದಾರೆ ಅನ್ನೋದು ಪ್ರೂವ್ ಆಗಿದೆ. ಅದ್ರಲ್ಲೂ ಇದೀಗ ಸ್ವೀಡನ್ ಮೂಲದ ಆರ್‌ಸಿಬಿ ಅಭಿಮಾನಿ ವಿರಾಟ್ ಕೊಹ್ಲಿ & ಆರ್‌ಸಿಬಿ ತಂಡದ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ? ಆ ಬಗ್ಗೆ ಸಂಪೂರ್ಣ ವಿಡಿಯೋ ನೋಡಲು ಮುಂದೆ ಓದಿ.
ಎಲ್ಲೆಲ್ಲೂ ಆರ್‌ಸಿಬಿ ತಂಡದ ಹವಾ!
ಆರ್‌ಸಿಬಿ ತಂಡದ ಬಗ್ಗೆ ಸ್ವೀಡನ್ ಮೂಲದ ಅಭಿಮಾನಿ ಒಬ್ಬರು ಮನಸ್ಸು ತುಂಬಿ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ. ಆರ್‌ಸಿಬಿ ತಂಡವನ್ನು ಫ್ಯಾನ್ಸ್ ಕಣ ಕಣದಲ್ಲೂ ತುಂಬಿಕೊಂಡಿದ್ದಾರೆ. ಭಾರತೀಯರು, ಕನ್ನಡಿಗರು ಮಾತ್ರವಲ್ಲ ಜಗತ್ತಿನಾದ್ಯಂತ ಕೂಡ ಈ ನಮ್ಮ ಆರ್‌ಸಿಬಿ ತಂಡಕ್ಕೆ ಭಾರಿ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಇದ್ದಾರೆ. ಈ ಮಾತು ಈಗ ಮತ್ತೊಮ್ಮೆ ಪ್ರೂವ್ ಆಗಿದೆ. ಅಲ್ಲದೆ ವಿರಾಟ್ ಕೊಹ್ಲಿ ಅವರಿಗೆ ಕೂಡ ಅದೆಷ್ಟು ಫ್ಯಾನ್ಸ್ ಇದ್ದಾರೆ? ಅನ್ನೋದು ಕೂಡ ಮತ್ತೊಮ್ಮೆ ಇಡೀ ಜಗತ್ತಿಗೆ ಗೊತ್ತಾಗಿದೆ.
ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ!
ನೋಡಿದ್ರಲ್ಲ ಆರ್‌ಸಿಬಿ ಅಭಿಮಾನಿ ಏನ್ ಹೇಳಿದ್ದಾರೆ ಅಂತೆ. ಈ ಬಾರಿ ಆರ್‌ಸಿಬಿ ತಂಡವು ಕಪ್ ಗೆದ್ದೇ ಗೆಲ್ಲುತ್ತದೆ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ ಆರ್‌ಸಿಬಿ ತಂಡ ಮುಂದಿನ ಹಂತಕ್ಕೆ ಹೋಗುತ್ತಾ? ಹೋಗೋದಿಲ್ವಾ? ಅನ್ನೋದು ನಾಳೆ ಗೊತ್ತಾಗಲಿದೆ. ನಾಳೆ ಆರ್‌ಸಿಬಿ ತಂಡವು ದೆಹಲಿ ವಿರುದ್ಧ ಮ್ಯಾಚ್ ಆಡಲಿದ್ದು, ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಇದನ್ನ ಗೆದ್ದರೆ ಮಾತ್ರ ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗಲು ಸಾಧ್ಯ ಇಲ್ಲವಾದರೆ ಕಷ್ಟ ಕಷ್ಟ.












Click it and Unblock the Notifications