RCB: ಇದೇ ಕಾರಣಕ್ಕೆ ಐಪಿಎಲ್‌ನಿಂದ ಆರ್‌ಸಿಬಿ ಬ್ಯಾನ್ ಸಾಧ್ಯತೆ; ಎಲ್ಲರ ಚಿತ್ತ ಬಿಸಿಸಿಐನತ್ತ
RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು 17 ವರ್ಷಗಳ ಬಳಿಕ ಮೊದಲ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿತು. ರಾಯಲ್ ತಂಡದ ಗೆಲುವನ್ನು ಬರೀ ಕರ್ನಾಟಕ ಅಷ್ಟೇ ಅಲ್ಲದೆ, ಇಡೀ ದೇಶವೇ ಸಂಭ್ರಮಾಚರಣೆ ಮಾಡಿತು. ಮಾರನೇ ದಿನ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಮಾಣ ಕಳೆದುಕೊಂಡಿದ್ದರು. ಈ ದುರಂತ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಐಪಿಎಲ್‌ನಲ್ಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 17 ಸೀಸನ್‌ಗಳಲ್ಲಿ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, 18ನೇ ಆವೃತ್ತಿಯಲ್ಲಿ ಟ್ರೋಫಿ ಗೆಲ್ಲುವ ಮೂಲಕ ಈ ಕೊರಗನ್ನು ದೂರ ಮಾಡಿತು. ಆರ್‌ಸಿಬಿ ಟ್ರೋಫಿ ಗೆದ್ದ ಖುಷಿಯಲ್ಲಿ ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದರು. ಇದಾದ ಬಳಿಕ ಹಲವು ಬೆಳವಣಿಗೆಗಳು ಆದ್ವು.

ಕಾಲ್ತುಳಿತ ದುರಂತ ಸಂಬಂಧ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್ ನಗರ ಆಯುಕ್ತ ದಯಾನಂದ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿತು. ಕೆಎಸ್‌ಸಿಎ, ಆರ್‌ಸಿಬಿ ವಿರುದ್ಧವೂ ಎಫ್‌ಐಆರ್ ದಾಖಲಿಸಿತು. ಅಷ್ಟೇ ಸಾಲದೆಂಬಂತೆ ವಿರಾಟ್ ಕೊಹ್ಲಿ ವಿರುದ್ಧವೂ ದೂರು ದಾಖಲಿಲಾಯಿತು. ಇದೀಗ ಕೇಂದ್ರ ಆಡಳಿತ ನ್ಯಾಯಮಂಡಳಿ ಈ ಸಂಬಧ ಮಹತ್ವದ ಆದೇಶ ಹೊರಡಿಸಿದ್ದು, ನೇರ ಹೊಣೆಯನ್ನು ಆರ್‌ಸಿಬಿ ಮೇಲೆ ಹೊರಿಸಿದೆ. ಹಾಗಾದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾನ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಯಾಕಂದ್ರೆ ಈಗಾಗಲೇ ಬಿಸಿಸಿಐ ಹಲವು ಕಾರಣಗಳಿಂದ ಕೆಲ ಐಪಿಎಲ್ ಟೀಂಗಳನ್ನು ಬ್ಯಾನ್ ಮಾಡಿರುವ ಉದಾಹರಣೆಗಳಿವೆ. ಆದರೆ, ಆರ್‌ಸಿಬಿ ವಿಚಾರಕ್ಕೆ ಬಂದರೆ, ಕಾಲ್ತುಳಿತ ಚಿಕ್ಕ ವಿಚಾರವಲ್ಲ. ಇದು ಜೀವಗಳ ಜೊತೆ ಆಟ ಆಡಿರುವ ವಿಚಾರ. ಆದ್ದರಿಂದ ಇದೀಗ ಕೇಂದ್ರ ಆಡಳಿತ ನ್ಯಾಯಮಂಡಳಿ ಪ್ರಕರಣದ ನೇರ ಹೊಣೆಯನ್ನು ಆರ್‌ಸಿಬಿ ಮೇಲೆ ಹೊರಿಸಿರುವ ಹಿನ್ನೆಲೆ ಬಿಸಿಸಿಐ ಈ ತಂಡವನ್ನು ಇಂಡಿಯನ್ಸ್ ಪ್ರೀಮಿಯರ್ ಲೀಂಗ್‌ನಿಂದಲೇ ಬ್ಯಾನ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ನ್ಯಾಯ ಮಂಡಳಿ ಆದೇಶದಲ್ಲಿ ಏನಿದೆ?: ಕೇಂದ್ರ ಆಡಳಿತ ನ್ಯಾಯಮಂಡಳಿಯು ಚಿನ್ನಸ್ವಾಮಿ ಕಾಲ್ತುಳಿತ ಘಟನೆಗೆ ಆರ್‌ಸಿಬಿಯನ್ನೇ ಹೊಣೆಗಾರರನ್ನಾಗಿ ಮಾಡಿದೆ. ಈ ಕಾಲ್ತುಳಿತದಲ್ಲಿ 14 ವರ್ಷದ ಬಾಲಕಿ ಸೇರಿದಂತೆ 11 ಜನರು ಸಾವನ್ನಪ್ಪಿದ್ದರು. ಆರ್‌ಸಿಬಿಯು ಪೊಲೀಸರಿಂದ ಯಾವುದೇ ಪೂರ್ವಾನುಮತಿ ಪಡೆಯಲಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೊಲೀಸರ ಅನುಮತಿ ಇಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ವಿಜಯೋತ್ಸವ ಮೆರವಣಿಗೆಯ ಆಹ್ವಾನವನ್ನು ಪೋಸ್ಟ್ ಮಾಡಿದೆ. ಈ ಹಿನ್ನೆಲೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು ಹಾಗೂ ಪೊಲೀಸರಿಗೆ ಭದ್ರತಾ ವ್ಯವಸ್ಥೆಗಳನ್ನ ಮಾಡಲು ತುಂಬಾ ಸಮಯ ಇರಲಿಲ್ಲ ಎಂದು ನ್ಯಾಯ ಮಂಡಳಿ ಹೇಳಿದೆ.
ಮೂಲಗಳ ಪ್ರಕಾರ, ಆರ್‌ಸಿಬಿ ಪೊಲೀಸರಿಂದ ಯಾವುದೇ ಪೂರ್ವಾನುಮತಿ ಪಡೆಯಲಿಲ್ಲ. ದಿಢೀರ್ ಅದರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿತು. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದರು. ಪೊಲೀಸರು ಕೇವಲ 12 ಗಂಟೆಗಳಲ್ಲಿ ಸಂಪೂರ್ಣ ವ್ಯವಸ್ಥೆಗಳನ್ನು ಮಾಡುತ್ತಾರೆಂದು ನಿರೀಕ್ಷಿಸಲಾಗುವುದಿಲ್ಲ ಎಂದು ಹೇಳಿದೆ.
ಪೊಲೀಸರು ಸಹ ಮನುಷ್ಯರು, ದೇವರುಗಳಲ್ಲ, ಮಾಂತ್ರಿಕರಲ್ಲ. ಅವರ ಬಳಿ ಅಲ್ಲಾದೀನ ದೀಪವಿಲ್ಲ. ಒಂದು ವೇಳೆ ಅದಿದ್ದರೆ ಅವರು ಒಂದೇ ಬಾರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಬಹುದಾಗಿತ್ತು. ಈ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರಿಗೆ ದೊಡ್ಡ ಪರಿಹಾರ ಸಿಕ್ಕಿದೆ. ಅವರ ಅಮಾನತು ರದ್ದುಗೊಳಿಸಿದ ನ್ಯಾಯಮಂಡಳಿ, ಅಮಾನತು ಅವಧಿಯನ್ನು ಸೇವೆಯ ಭಾಗವೆಂದು ಪರಿಗಣಿಸಬೇಕೆಂದು ಹೇಳಿದೆ. ವಿಕಾಸ್ ಕುಮಾರ್ ಆಗ ಬೆಂಗಳೂರಿನ ಪಶ್ಚಿಮ ವಲಯದ ಹೆಚ್ಚುವರಿ ಆಯುಕ್ತರು ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಉಸ್ತುವಾರಿ ವಹಿಸಿದ್ದರು.
ದಯಾನಂದ್ ಅಮಾನತು ಬಗ್ಗೆ ನಿಲುವೇನು?: ಮತ್ತೊಂದೆಡೆ ಬೆಂಗಳೂರಿನ ಆಗಿನ ಪೊಲೀಸ್ ಆಯುಕ್ತ ಬಿ.ದಯಾನಂದ್ ಮತ್ತು ಡಿಸಿಪಿ ಶೇಖರ್ ಎಚ್ ತೆಕ್ಕಣ್ಣವರ್ ಅವರ ಅಮಾನತು ಆದೇಶವನ್ನು ಮರುಪರಿಶೀನನೆ ಮಾಡುವಂತೆ ನ್ಯಾಯಮಂಡಳಿ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ.
ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವ ನಿರ್ಧಾರವು ಸಾಕಷ್ಟು ಪುರಾವೆಗಳನ್ನು ಆಧರಿಸಿಲ್ಲ. ನಿರ್ಧಾರದ ಸಮಯದಲ್ಲಿ, ಈ ಅಪಘಾತವು ಈ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂಭವಿಸಿದೆ ಎಂದು ಸಾಬೀತುಪಡಿಸಲು ಯಾವುದೇ ಆಧಾರ ಇರಲಿಲ್ಲ ಎಂದು ಸಿಎಟಿ ಹೇಳಿದೆ.
ಇನ್ನು ಇದೀಗ ಪ್ರಕರಣಕ್ಕೆ ಆರ್‌ಸಿಬಿಯೇ ನೇರ ಹೊಣೆ ಎಎಂದು ನ್ಯಾಯ ಮಂಡಳಿ ತೀರ್ಪು ನೀಡಿದ ಬೆನ್ನಲ್ಲೇ ಎಲ್ಲರ ಗಮನ ಬಿಸಿಸಿಐ ಕಡೆಗೆ ನೆಟ್ಟಿದೆ. ಯಾಕಂದ್ರೆ, ಐಪಿಎಲ್‌ನಲ್ಲಿರುವ ಎಲ್ಲಾ ಫ್ರಾಂಚೈಸಿಗಳು ವಾಣಿಜ್ಯ ಘಟಕಗಳಾಗಿದ್ದರೂ ಕೂಡ ಅವುಗಳ ಭಾಗವಹಿಸುವಿಕೆಯನ್ನು ಬಿಸಿಸಿಐ ಒಪ್ಪಂದಗಳಿಂದ ನಿಯಂತ್ರಿಸ್ಪಡುತ್ತದೆ. ಒಂದು ವೇಳೆ ನ್ಯಾಯಮಂಡಳಿಯಂತೆ ಬಿಸಿಸಿಐ ನಿರ್ಧಾರ ತೆಗೆದುಕೊಂಡರೆ, ಆರ್‌ಸಿಬಿ ಬ್ಯಾನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ.












Click it and Unblock the Notifications