RCB vs CSK: ಆರ್‌ಸಿಬಿ...ಆರ್‌ಸಿಬಿ.. ! ಸಿಎಸ್‌ಕೆ ಭದ್ರಕೋಟೆಯಲ್ಲಿ ಅಬ್ಬರಿಸಿದ ರಾಯಲ್ ಅಭಿಮಾನಿಗಳು

ಐಪಿಎಲ್‌ 2025ರಲ್ಲಿ ಆರ್ ಸಿಬಿ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದೆ. ಮೊದಲನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ನರನ್ನೇ ಅವರ ತವರಿನ ಅಂಗಳದಲ್ಲಿ ಮಣಿಸಿದ್ದ ಆರ್‌ಸಿಬಿ ಇದೀಗ ಚೆನ್ನೈನಲ್ಲಿ ಸಿಎಸ್‌ಕೆ ತಂಡದ ಭದ್ರಕೋಟೆಯನ್ನು ಛಿದ್ರಮಾಡಿದೆ. 17 ವರ್ಷಗಳ ಬಳಿಕ ಚೆನ್ನೈನಲ್ಲಿ ಸಿಎಸ್‌ಕೆ ತಂಡವನ್ನು ತವರಿನಲ್ಲಿ ಸೋಲಿಸಿದೆ. ಇದು ಆರ್ ಸಿಬಿ ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದೆ.

ಸಿಎಸ್‌ಕೆ ತಂಡ ಯಾವಾಗಲೂ ತವರಿನಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ. ಮೈದಾನದಲ್ಲಿ ಪ್ರತಿ ಪಂದ್ಯದಲ್ಲಿ ಸಿಎಸ್‌ಕೆ ಅಭಿಮಾನಿಗಳ ಅಬ್ಬರವೇ ಜೋರಾಗಿರುತ್ತದೆ. ಆದರೆ ಶುಕ್ರವಾರ ನಡೆದ ಪಂದ್ಯದಲ್ಲಿ ಆರ್ ಸಿಬಿ ಅಭಿಮಾನಿಗಳು ಸಿಎಸ್‌ಕೆ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

Rcb chants in chepauk vs csk match ipl 2025

ಸಿಎಸ್‌ಕೆ ತಂಡದ ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಆರ್ ಸಿಬಿ ಅಭಿಮಾನಿಗಳು ಮಾತ್ರ ಅಬ್ಬರಿಸಿದರು. ಒಂದು ಹಂತದಲ್ಲಿ ಆರ್‌ಸಿಬಿ...ಆರ್‌ಸಿಬಿ.. ಎನ್ನುವ ಕೂಗು ಕ್ರೀಡಾಂಗಣದಲ್ಲಿ ಮಾರ್ದನಿಸಿತು. ವಿರಾಟ್ ಕೊಹ್ಲಿಗೂ ಕೂಡ ಭಾರಿ ಬೆಂಬಲ ಸಿಕ್ಕಿತು.

ಕಳೆದ ವರ್ಷ ಸಿಎಸ್‌ಕೆ ಪ್ಲೇಆಫ್ ಕನಸು ಹಾಳು ಮಾಡಿದ್ದ ಆರ್ ಸಿಬಿ ಈ ಬಾರಿ ತವರಿನಲ್ಲೇ ಸೋಲಿಸಿದೆ. ಸಿಎಸ್‌ಕೆ ಗೆದ್ದರೆ ಸಿಕ್ಕಾಪಟ್ಟೆ ಟ್ರೋಲ್ ಮಾಡುವ ಕನಸು ಕಾಣುತ್ತಿದ್ದ ಸಿಎಸ್‌ಕೆ ಅಭಿಮಾನಿಗಳಿಗೆ ನಿರಾಸೆಯಾಗಿದೆ. 6155 ದಿನಗಳ ಬಳಿಕ ಸಿಎಸ್‌ಕೆ ವಿರುದ್ಧ ಚೆನ್ನೈನಲ್ಲಿ ಗೆದ್ದು ಬೀಗಿದೆ.

ರಜತ್ ಪಟಿದಾರ್ ಅಬ್ಬರ

ನಾಯಕನಾಗಿ ಮೊದಲ ಎರಡು ಪಂದ್ಯದಲ್ಲೇ ರಜತ್ ಪಟಿದಾರ್ ಅಭಿಮಾನಿಗಳ ಮನಗೆದ್ದಿದ್ದಾರೆ. ಎರಡು ದೊಡ್ಡ ತಂಡಗಳ ವಿರುದ್ಧ ಸುಲಭ ಗೆಲುವು ಸಾಧಿಸಲು ತಂಡವನ್ನು ಮುನ್ನಡೆಸಿದ್ದಾರೆ. ಸಿಎಸ್‌ಕೆ ವಿರುದ್ಧ ಅವರು ಮಾಡಿದ ಬೌಲಿಂಗ್ ಬದಲಾವಣೆ, ಫೀಲ್ಡಿಂಗ್ ಬದಲಾವಣೆ ಇವರು ಉತ್ತಮ ನಾಯಕರಾಗಬಹುದು ಎನ್ನುವ ಭರವಸೆ ಮೂಡಿಸಿದೆ.

ನಾಯಕನಾಗಿ ಮಾತ್ರವಲ್ಲ ಎಂದಿನಂತೆ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದ್ದಾರೆ. 32 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 51 ರನ್ ಗಳಿಸುವ ಮೂಲಕ ಮಿಂಚಿದರು. ತಂಡದ ಒತ್ತಡದ ಸಂದರ್ಭದಲ್ಲೂ ವೇಗವಾಗಿ ರನ್ ಗಳಿಸಿ ಉಳಿದ ಬ್ಯಾಟರ್ ಮೇಲಿನ ಒತ್ತಡ ಕಡಿಮೆ ಮಾಡಿದ್ದರು.

ಬಲಿಷ್ಠ ಬೌಲಿಂಗ್ ಪಡೆ

ಆರ್ ಸಿಬಿ ಎಂದರೆ ಬರೀ ಬ್ಯಾಟಿಂಗ್ ಮಾತ್ರ, ಬೌಲಿಂಗ್ ದುರ್ಬಲ ಎನ್ನುವ ವಾದವಿತ್ತು, ಆದರೆ ಈ ಬಾರಿ ತಂಡದ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲಾಗಿದೆ. ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದರೆ. ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ, ಲಿಯಾಮ್ ಲಿವಿಂಗ್‌ಸ್ಟೋನ್ ಸ್ಪಿನ್ ಬೌಲರ್ ಗಳಾಗಿದ್ದಾರೆ.

ಆರ್ ಸಿಬಿ ಮುಂದಿನ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಏಪ್ರಿಲ್ 2 ರಂದು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+