Ravichandran Ashwin: ಕ್ರೀಸ್‌ನಲ್ಲೇ ಇರುವಂತೆ ರವಿಚಂದ್ರನ್‌ ಅಶ್ವಿನ್‌ಗೆ ವಾರ್ನಿಂಗ್ ಕೊಟ್ಟ ಆಟಗಾರ

ರವಿಚಂದ್ರನ್ ಅಶ್ವಿನ್ ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ಅವರನ್ನು ಮಂಕಡ್ ರನೌಟ್ ಮಾಡಿದ್ದು ಇನ್ನೂ ಅಭಿಮಾನಿಗಳಿಗೆ ನೆನಪಿದೆ. ಅಶ್ವಿನ್ ತಮ್ಮ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಲ್ಲದೆ, ನಾನ್‌ ಸ್ಟ್ರೈಕರ್‍‌ ಎಂಡ್‌ನಲ್ಲಿರುವ ಬ್ಯಾಟರ್ ಗಳು ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್ ಬಿಡುವುದು ತಪ್ಪು ಎಂದು ವಾದಿಸಿದ್ದರು.

ಇದೇ ರೀತಿಯ ಮಂಕಡ್‌ ರನೌಟ್‌ ಎಲ್ಲೇ ನಡೆದರೂ, ಅಶ್ವಿನ್ ಹೆಸರು ಟ್ರೆಂಡಿಂಗ್ ಆಗುತ್ತಿತ್ತು. ಮಹಿಳಾ ಕ್ರಿಕೆಟ್‌ನಲ್ಲಿ ದೀಪ್ತಿ ಶರ್ಮಾ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹೀಗೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಐಸಿಸಿ ಮಂಕಡ್‌ ಅನ್ನು ಅಧಿಕೃತ ರನೌಟ್ ಎಂದು ನಿಯಮದಲ್ಲಿ ಬದಲಾವಣೆ ಮಾಡಿತ್ತು.

ಕ್ರೀಸ್ ಬಿಡದಂತೆ ಎಚ್ಚರಿಕೆ

ರವಿಚಂದ್ರನ್ ಅಶ್ವಿನ್ ಈಗ ಮತ್ತೆ ಸುದ್ದಿಯಾಗಿದ್ದಾರೆ, ಈ ಬಾರಿ ಅವರಿಗೆ ಕ್ರೀಸ್ ಬಿಡದಂತೆ ಬೌಲರ್ ಕಡೆಯಿಂದ ಎಚ್ಚರಿಕೆ ಸಿಕ್ಕಿದೆ. ಸದ್ಯ ನಡೆಯುತ್ತಿರುವ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ಪಂದ್ಯದಲ್ಲಿ ಕ್ರೀಸ್ ಬಿಡಲು ಯತ್ನಿಸಿದ ರವಿಚಂದ್ರನ್ ಅಶ್ವಿನ್ ಅವರಿಗೆ ಬೌಲರ್ ಮೋಹನ್ ಪ್ರಶಾಂತ್ ಕ್ರೀಸ್ ಬಿಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ.

Ravichandran Ashwin Faces Mankad Warning in Tamil Nadu Premier League

ಹಲವು ಬ್ಯಾಟರ್ ಗಳಿಗೆ ವಾರ್ನಿಂಗ್ ಕೊಡುತ್ತಿದ್ದ ರವಿಚಂದ್ರನ್ ಅಶ್ವಿನ್ ಅವರಿಗೇ ವಾರ್ನಿಂಗ್ ಸಿಕ್ಕಿರುವುದು ವಿಶೇಷ. ನೆಲ್ಲೈ ರಾಯಲ್ ಕಿಂಗ್ಸ್ ವಿರುದ್ಧ ದಿಂಡಿಗಲ್ ಡ್ರಾಗನ್ಸ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಈ ಪಂದ್ಯದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ 4 ವಿಕೆಟ್‌ಗಳ ಗೆಲುವು ಸಾಧಿಸಿತು.

ದಿಂಡಿಗುಲ್ ಡ್ರಾಗನ್ಸ್ ತಂಡಕ್ಕೆ ಆರ್ ಅಶ್ವಿನ್ ನಾಯಕರಾಗಿದ್ದಾರೆ. ಅಶ್ವಿನ್‌ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಎಡಗೈ ಸ್ಪಿನ್ನರ್ ಮೋಹನ್ ಪ್ರಶಾಂತ್ ಎಚ್ಚರಿಕೆ ನೀಡಿದರು. 15 ನೇ ಓವರ್‌ನಲ್ಲಿ, ಅಶ್ವಿನ್ ಕ್ರೀಸ್ ತೊರೆಯಲು ತಯಾರಿ ನಡೆಸುತ್ತಿದ್ದರು, ಮೋಹನ್ ಬೌಲಿಂಗ್ ಮಾಡುವುದನ್ನು ಅರ್ಧಕ್ಕೆ ನಿಲ್ಲಿಸಿದರು. ಅಶ್ವಿನ್ ಅವರ ಸ್ಥಾನದ ಬಗ್ಗೆ ಅಂಪೈರ್‌ಗೆ ಸಂದೇಶವನ್ನು ರವಾನಿಸಿದರು. ಅಶ್ವಿನ್ ಅವರ ಬ್ಯಾಟ್ ಇನ್ನೂ ಕ್ರೀಸ್‌ನಲ್ಲೇ ಇದೆ ಮರು ಪ್ರಸಾರದಲ್ಲಿ ತಿಳಿಯಿತು. ಆದರೆ ಈ ಘಟನೆಯು ವೀಕ್ಷಕ ವಿವರಣೆಕಾರರಿಗೆ ಮನರಂಜನೆ ಒದಗಿಸಿತು.

ಸೋತರೂ ಪ್ಲೇಆಫ್‌ಗೆ ಅರ್ಹತೆ

ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ದಿಂಡಿಗುಲ್ ಡ್ರಾಗನ್ಸ್ ಸೋತರೂ ಪ್ಲೇ ಆಫ್ ತಲುಪುವಲ್ಲಿ ಯಶಸ್ವಿಯಾಗಿದೆ. ಲೈಕಾ ಕೋವೈ ಕಿಂಗ್ಸ್, ಐಡ್ರೀಮ್ ತಿರುಪುರ್ ತಮಿಳನ್ಸ್, ಚೆಪಾಕ್ ಸೂಪರ್ ಗಿಲ್ಲೀಸ್, ದಿಂಡಿಗುಲ್ ಡ್ರಾಗನ್ಸ್ ಪ್ಲೇಆಫ್ ತಲುಪಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+