ಕನ್ನಡಿಗ ಅನಿಲ್ ಕುಂಬ್ಳೆ ದಾಖಲೆ ಮುರಿದ ಆರ್. ಅಶ್ವಿನ್!

ಭಾರತದ ಕ್ರಿಕೆಟ್ ಅಂದ್ರೆ ಸ್ಪಿನ್ ಬೌಲರ್‌ಗಳಿಗೆ ದೊಡ್ಡ ಸ್ಥಾನಮಾನ ಇದೆ. ಅದರಲ್ಲೂ ಇಲ್ಲಿ ಅಂದ್ರೆ ನಮ್ಮ ಭಾರತದಲ್ಲಿ ಸ್ಪಿನ್ ಬೌಲರ್ಸ್ ಇಲ್ಲದೆಯೇ ಕ್ರಿಕೆಟ್ ಆಡುವುದು ಅಸಾಧ್ಯವೇ ಸರಿ. ಯಾಕಂದ್ರೆ ಭಾರತದಲ್ಲಿ ಕ್ರಿಕೆಟ್ ಪಿಚ್‌ಗಳು ಸ್ಪಿನ್ ಬೌಲರ್ಸ್‌ಗೆ ಸಹಾಯ ಮಾಡುತ್ತವೆ. ಇದೇ ಕಾರಣಕ್ಕೆ ಭಾರತದಲ್ಲಿ ಹತ್ತಾರು ಸ್ಪಿನ್ ಬೌಲರ್‌ಗಳು, ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಲಿನಲ್ಲಿ ಅನಿಲ್ ಕುಂಬ್ಳೆ ಟಾಪ್ ಆಗಿದ್ದು, ಅವರ ದಾಖಲೆಗಳನ್ನ ಒಂದೊಂದಾಗಿ ಹಿಂದೆ ಹಾಕುತ್ತಿದ್ದಾರೆ ಆರ್. ಅಶ್ವಿನ್.

ಆರ್. ಅಶ್ವಿನ್ ಬೌಲಿಂಗ್ ಮಾಡುತ್ತಿದ್ದರೆ, ಎದುರಾಳಿ ಪಡೆಯ ಬ್ಯಾಟ್ಸ್‌ಮನ್ ಎದೆಯಲ್ಲೂ ನಡುಕ. ಯಾಕಂದ್ರೆ ಗಿರಗಿರನೆ ತಿರುಗಿ ಬರುವ ಆರ್. ಅಶ್ವಿನ್ ಬಾಲ್‌ಗಳು, ದೊಡ್ಡ ದೊಡ್ಡ ಪಂಟರ್ ಬ್ಯಾಟ್ಸ್‌ಮನ್‌ಗಳನ್ನೇ ಪೆವಿಲಿಯನ್‌ಗೆ ಕಳುಹಿಸುತ್ತವೆ. ಹೀಗೆ, ನೂರಾರು ವಿಕೆಟ್‌ನ ಪಡೆದು ದೊಡ್ಡ ಸಾಧನೆ ಮಾಡಿರುವ ಆರ್. ಅಶ್ವಿನ್ ಈವರೆಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಭರ್ಜರಿ 500 ವಿಕೆಟ್ ಪಡೆದಿದ್ದಾರೆ. ಇದರ ಜೊತೆಗೆ ಮತ್ತೊಂದು ಸಾಧನೆಯನ್ನೂ ಮಾಡಿ ಕನ್ನಡಿಗ ಅನಿಲ್ ಕುಂಬ್ಳೆ ಅವರ ದಾಖಲೆ ಹಿಂದಿಕ್ಕಿದ್ದಾರೆ ಆರ್. ಅಶ್ವಿನ್. ಹಾಗಾದರೆ ಯಾವುದು ಆ ದಾಖಲೆ?

R Ashwin Breaks Another Record Of The Anil Kumble And Shocks England

ಲೆಜೆಂಡ್ ಬೌಲರ್ ಅನಿಲ್ ಕುಂಬ್ಳೆ

ಅಂದಹಾಗೆ ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ಆಡಿ ಅತಿಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿ ದೊಡ್ಡದಾಗಿದೆ. ಈ ಪೈಕಿ ಲೆಜೆಂಡ್ ಅನಿಲ್ ಕುಂಬ್ಳೆ ಅವ್ರು 350 ವಿಕೆಟ್, ಹರ್ಭಜನ್ ಸಿಂಗ್ 265 ವಿಕೆಟ್, ಕಪಿಲ್ ದೇವ್ 219 ವಿಕೆಟ್, ರವೀಂದ್ರ ಜಡೇಜಾ 210 ವಿಕೆಟ್ ಪಡೆದಿದ್ದಾರೆ. ಇದೀಗ, ಇವರೆಲ್ಲರನ್ನೂ ಮೀರಿಸಿ ಆರ್. ಅಶ್ವಿನ್ ಅವರು 355 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿರುವ ಆರ್. ಅಶ್ವಿನ್ ಇಂದು ಇಂಗ್ಲೆಂಡ್ ವಿರುದ್ಧ 2ನೇ ಇನ್ನಿಂಗ್ಸ್ ಆಟದಲ್ಲಿ ಭರ್ಜರಿ 5 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಅಶ್ವಿನ್ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದ್ದಾರೆ.

ಏನು ಹೇಳುತ್ತಿದೆ ಟೆಸ್ಟ್ ಇತಿಹಾಸ?

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈಗಲೂ ಅನಿಲ್ ಕುಂಬ್ಳೆ ಅವರ ಹೆಸರು ರಾರಾಜಿಸುತ್ತಿದ್ದು, ಅತಿಹೆಚ್ಚು ವಿಕೆಟ್ ಉರುಳಿಸಿದ ಟಾಪ್ 5 ಟೆಸ್ಟ್ ಬೌಲರ್‌ಗಳ ಪೈಕಿ ಕುಂಬ್ಳೆ 4ನೇ ಸ್ಥಾನದಲ್ಲಿ ಇದ್ದಾರೆ. 619 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ 4ನೇ ಸ್ಥಾನದಲ್ಲಿದ್ದು, 800 ವಿಕೆಟ್‌ನ ಉರುಳಿಸಿರುವ ಮುತ್ತಯ್ಯ ಮುರಳೀಧರನ್ ಈಗಲೂ ಮೊದಲ ಸ್ಥಾನದಲ್ಲಿ ಇದ್ದಾರೆ. ಇನ್ನು ಆಸ್ಟ್ರೇಲಿಯಾದ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ 708 ವಿಕೆಟ್ ಉರುಳಿಸಿ 2ನೇ ಸ್ಥಾನವನ್ನು ಪಡೆದಿದ್ದಾರೆ. ಹಾಗೆಯೇ 698 ವಿಕೆಟ್ ಪಡೆದಿರುವ ಜೇಮ್ಸ್ ಆಂಡರ್ಸನ್ ಅವರು ಅತಿಹೆಚ್ಚು ವಿಕೆಟ್ ಪಡೆದವರ ಪೈಕಿ 3ನೇ ಸ್ಥಾನದಲ್ಲಿ ಇದ್ದಾರೆ. ಆರ್. ಅಶ್ವಿನ್ 507 ವಿಕೆಟ್ ಪಡೆದು 9ನೇ ಸ್ಥಾನದಲ್ಲಿದ್ದಾರೆ.

R Ashwin Breaks Another Record Of The Anil Kumble And Shocks England

145ಕ್ಕೆ ಮನೆಗೆ ನಡೆದ ಇಂಗ್ಲೆಂಡ್

2ನೇ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡ, ಆರಂಭದಲ್ಲೇ ಭಾರತ ಬೌಲರ್‌ಗಳ ಏಟಿಗೆ ನಲುಗಿ ಹೋಗಿತ್ತು. ಅದರಲ್ಲೂ ಇಂಗ್ಲೆಂಡ್ ತಂಡದ ಪರ ಝಾಕ್ ಕ್ರಾಲಿ ಅವರನ್ನು ಬಿಟ್ಟರೆ, ಇನ್ಯಾವುದೇ ಆಟಗಾರ ಕೆಚ್ಚೆದೆಯ ಹೋರಾಟ ತೋರಿಸಲೇ ಇಲ್ಲ. ಹೀಗಾಗಿ ತನ್ನ ಸಾಲು ಸಾಲು ವಿಕೆಟ್ ಕಳೆದುಕೊಂಡಿತು ಇಂಗ್ಲೆಂಡ್ ಕ್ರಿಕೆಟ್ ತಂಡ, 19 ರನ್ ಆಗಿದ್ದಾಗಲೇ ತನ್ನ ಮೊದಲ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್. ನೋಡ ನೋಡುತ್ತಲೇ ಕೇವಲ 145ಕ್ಕೆ ಆಲೌಟ್ ಆಗಿ ಗೂಡು ಸೇರಿದೆ. ಭಾರತದ ಪರ ಆರ್. ಅಶ್ವಿನ್ ಭರ್ಜರಿ 5 ವಿಕೆಟ್ ಪಡೆದು ಹೊಸ ದಾಖಲೆ ನಿರ್ಮಿಸಿದರು.

ಭಾರತ ತಂಡಕ್ಕೆ ಗೆಲುವು ಗ್ಯಾರಂಟಿ?

ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡ ಈಗಾಗಲೇ, ಸಾಲು ಸಾಲು ಗೆಲುವು ದಾಖಲಿಸಿ ಮಿಂಚುತ್ತಿದೆ. ಅದೇ ರೀತಿ ಇದೀಗ 4ನೇ ಟೆಸ್ಟ್ ಪಂದ್ಯದಲ್ಲಿ ಕೂಡ ಭಾರತ ಗೆಲ್ಲುವುದು ಪಕ್ಕಾ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಭಾರತಕ್ಕೆ ಕೇವಲ 192 ರನ್‌ಗಳ ಗುರಿ ನೀಡಲಾಗಿದೆ. ಹೀಗಾಗಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಈ ಹಿನ್ನೆಲೆ ಭಾರತ ತಂಡದ ಅಬ್ಬರ ಬಲು ಜೋರಾಗಿದೆ. ಹಾಗೇ ಆರ್. ಅಶ್ವಿನ್ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+