ಆಗಸ್ಟ್ 1 ರಂದು ಪ್ಯಾರಿಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಭಾಗವಹಿಸುವ ಸಂಪೂರ್ಣ ವೇಳಾಪಟ್ಟಿ..
ಬುಧವಾರ ಭಾರತದ ಕ್ರೀಡಾಪಟುಗಳು ಸ್ಥಿರ ಪ್ರದರ್ಶನ ನೀಡಿದ್ದು, ಪದಕದ ಆಸೆಯನ್ನು ಚಿಗುರಿಸಿದ್ದಾರೆ. ಈಗಾಗಲೇ ಭಾರತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಶೂಟಿಂಗ್‌ನಲ್ಲಿ ಪಡೆದಿದ್ದು, ಇನ್ನು ಪದಕದ ಬೇಟೆಯನ್ನು ನಡೆಸುವ ಉತ್ಸಾಹದಲ್ಲಿದೆ.
ಬ್ಯಾಡ್ಮಿಂಟನ್‌ನಲ್ಲಿ ಸ್ಟಾರ್ ಆಟಗಾರರಾದ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಅವರು ಗುರುವಾರ ಅಖಾಡಕ್ಕೆ ಇಳಿಯಲಿದ್ದಾರೆ. ಈ ಆಟಗಾರರು ಪದಕದ ಆಸೆಯನ್ನು ಚಿಗುರಿಸಿದ್ದಾರೆ. ಗುರುವಾರ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಗೆಲ್ಲುವ ಭರವಸೆಯನ್ನು ಹೊಂದಿದ್ದಾರೆ.

ಗುಂಪು ಹಂತದ ಹಾಕಿಯಲ್ಲಿ ಈಗಾಗಲೇ ಅಜೇಯ ಓಟವನ್ನು ಮುಂದುವರೆಸಿರುವ ಭಾರತ ತಂಡ, ನಾಲ್ಕನೇ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಗೆದ್ದು ಮುಂದಿನ ಸುತ್ತಿಗೆ ಕ್ವಾಲಿಫೈ ಆಗುವ ಪ್ಲ್ಯಾನ್ ಭಾರತ ತಂಡದ್ದಾಗಿದೆ.
ಗುರುವಾರದ ಸಂಪುರ್ಣ ವೇಳಾಪಟ್ಟಿ
ಬೆಳಗ್ಗೆ 11 ಗಂಟೆ, ಅಥ್ಲೆಟಿಕ್ಸ್, ಪುರುಷರ 20 ಕಿಮೀ ಓಟದ ನಡಿಗೆ
ಮಧ್ಯಾಹ್ನ 12, ಬ್ಯಾಡ್ಮಿಂಟನ್, ಪುರುಷರ ಸಿಂಗಲ್ಸ್ ರೌಂಡ್ ಆಫ್ 16
ಮಧ್ಯಾಹ್ನ 12:30, ಗಾಲ್ಫ್, ಪುರುಷರ ಸುತ್ತು 1
ಮಧ್ಯಾಹ್ನ 12:50, ಮಹಿಳೆಯರ 20 ಕಿಮೀ ಓಟದ ನಡಿಗೆ
ಮಧ್ಯಾಹ್ನ 1 ಗಂಟೆ, ಶೂಟಿಂಗ್, 50 ಮೀ ರೈಫಲ್ 3 ಸ್ಥಾನಗಳು ಪುರುಷರ ಫೈನಲ್
ಮಧ್ಯಾಹ್ನ 1:30, ಹಾಕಿ, ಪುರುಷರ ಗುಂಪು ಬಿ ಪಂದ್ಯ (ಭಾರತ ವಿರುದ್ಧ ಬೆಲ್ಜಿಯಂ)
ಮಧ್ಯಾಹ್ನ 1:30, ಟೇಬಲ್ ಟೆನ್ನಿಸ್, ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ಸ್
ಮಧ್ಯಾಹ್ನ 2.31, ಆರ್ಚರಿ ಪುರುಷರ ವೈಯಕ್ತಿಕ 64 ಸುತ್ತಿನ ಪಂದ್ಯ
ಮಧ್ಯಾಹ್ನ 2:30, ಬಾಕ್ಸಿಂಗ್, ಮಹಿಳೆಯರ 50 ಕೆಜಿ ಸುತ್ತಿನ 16
ಮಧ್ಯಾಹ್ನ 3.10, ಆರ್ಚರಿ ಪುರುಷರ ವೈಯಕ್ತಿಕ 32 ಸುತ್ತಿನ ಪಂದ್ಯ
ಮಧ್ಯಾಹ್ನ 3:30, ಶೂಟಿಂಗ್, 50 ಮೀ ರೈಫಲ್ 3 ಸ್ಥಾನಗಳು ಮಹಿಳೆಯರ ಅರ್ಹತೆ
ಮಧ್ಯಾಹ್ನ 3:45, ಸೀಲಿಂಗ್, ಪುರುಷರ
ಸಂಜೆ 4:30, ಬ್ಯಾಡ್ಮಿಂಟನ್, ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ಸ್
ಸಂಜೆ 7.05, ಸೀಲಿಂಗ್, ಮಹಿಳೆಯರ,
ರಾತ್ರಿ 10, ಬ್ಯಾಡ್ಮಿಂಟನ್, ಮಹಿಳೆಯರ ಸಿಂಗಲ್ಸ್ ರೌಂಡ್ 16












Click it and Unblock the Notifications