India vs USA: ಯುಎಸ್‌ಎ ವಿರುದ್ಧ ಭಾರತ ಗೆಲ್ಲಬೇಕೆಂದು ಬಯಸುತ್ತಿದೆ ಪಾಕಿಸ್ತಾನ
ಟಿ20 ವಿಶ್ವಕಪ್ ಎ ಗುಂಪಿನ ಪಂದ್ಯದಲ್ಲಿ ಭಾರತ ಇಂದು ಆತಿಥೇಯ ಯುಎಸ್‌ಎ ತಂಡವನ್ನು ಎದುರಿಸಲಿದೆ. ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಅಭಿಮಾನಿಗಳು ಭಾರತ ತಂಡವನ್ನು ಬೆಂಬಲಿಸಲಿದ್ದು, ಭಾರತ ಗೆಲ್ಲಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.
ಎ ಗುಂಪಿನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಮತ್ತು ಯುಎಸ್‌ಎ ತಲಾ 4 ಅಂಕಗಳೊಂದಿಗೆ ಮೊದಲ ಎರಡು ಸ್ಥಾನಗಳಲ್ಲಿವೆ. ಭಾರತ ಇಂದಿನ ಪಂದ್ಯ ಗೆದ್ದರೆ ನೇರವಾಗಿ ಸೂಪರ್ 8ಗೆ ಅರ್ಹತೆ ಪಡೆಯಲಿದೆ.

ಮೊದಲ ಎರಡು ಪಂದ್ಯಗಳಲ್ಲಿ ಯುಎಸ್‌ಎ ಮತ್ತು ಭಾರತದ ವಿರುದ್ಧ ಸೋತಿರುವ ಪಾಕಿಸ್ತಾನ ಮಂಗಳವಾರ ಕೆನಡಾ ವಿರುದ್ಧ ಗೆಲುವು ಸಾಧಿಸಿದೆ. ಈ ಮೂಲಕ 2 ಅಂಕಗಳೊಂದಿಗೆ 3 ನೇ ಸ್ಥಾನದಲ್ಲಿದೆ.
ಯುಎಸ್‌ಎ ಮುಂದಿನ ಎರಡೂ ಪಂದ್ಯಗಳಲ್ಲಿ ಸೋತು, ಪಾಕಿಸ್ತಾನ ಐರ್ಲೆಂಡ್ ವಿರುದ್ಧ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದರೆ, ರನ್ ರೇಟ್ ಲೆಕ್ಕಾಚಾರದಲ್ಲಿ ಸೂಪರ್ 8 ಹಂತಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ.
ಮಳೆ ಬಂದರೂ ಪಾಕಿಸ್ತಾನದ ಕಥೆ ಅಂತ್ಯ!
ಒಂದು ವೇಳೆ ಇಂದಿನ ಪಂದ್ಯ ಏನಾದರೂ ಮಳೆಯಿಂದ ರದ್ದಾದರೆ ಪಾಕಿಸ್ತಾನದ ಸೂಪರ್ 8 ಹಂತದ ಕನಸು ಕೊನೆಯಾಗಲಿದೆ. ತಲಾ ಐದು ಅಂಕಗಳೊಂದಿದೆ ಭಾರತ ಮತ್ತು ಯುಎಸ್‌ಎ ಇಂದೇ ಅರ್ಹತೆ ಪಡೆಯುತ್ತವೆ.
ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಈಗ ಮಳೆ ಕೂಡ ದೊಡ್ಡ ತಲೆನೋವಾಗಿದೆ. ಮಳೆ ಕೂಡ ಬರಬಾರದು, ಭಾರತ ದೊಡ್ಡ ಅಂತರದಲ್ಲಿ ಗೆಲ್ಲಬೇಕು, ಪಾಕಿಸ್ತಾನ ಕೆನಡಾ ವಿರುದ್ಧ ಗೆಲ್ಲಬೇಕು ಆಗ ಪಾಕಿಸ್ತಾನಕ್ಕೆ ವಿಶ್ವಕಪ್‌ನಲ್ಲಿ ಉಳಿಯಲು ಒಂದು ಅವಕಾಶ ಇರುತ್ತದೆ.
ಇಂದಿನ ಪಂದ್ಯದಲ್ಲಿ ಭಾರತ ತಂಡ ಗೆಲ್ಲುವ ನೆಚ್ಚಿನ ತಂಡವಾಗಿದೆ. ಈ ಪಂದ್ಯದಲ್ಲಿ ಸೋತರೂ ಯುಎಸ್‌ಎ ಮುಂದಿನ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದ್ದು ಅಲ್ಲಿ ಗೆದ್ದರೂ ಪಾಕಿಸ್ತಾನದ ಕಥೆ ಮುಗಿಯುತ್ತದೆ.












Click it and Unblock the Notifications