England vs Pakistan: ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನಕ್ಕೆ ಭಾರಿ ಮುಖಭಂಗ; ಸೋಲಿನಲ್ಲೂ ಹೊಸ ದಾಖಲೆ

ಪಾಕಿಸ್ತಾನ ಗೆಲುವಿನಲ್ಲೂ ಹೊಸ ದಾಖಲೆ ಬರೆದಿದೆ. ಇಂಗ್ಲೆಂಡ್ ಹೊಸ ಇತಿಹಾಸವನ್ನು ಸೃಷ್ಟಿಸಿದ್ದು, ಪಾಕಿಸ್ತಾನದ ವಿರುದ್ಧ ಇನ್ನಿಂಗ್ಸ್ ಮತ್ತು 47 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಾಕಿಸ್ತಾನದ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ.

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಪಾಕಿಸ್ತಾನ 556 ರನ್‌ ಗಳಿಸಿ ಆಲೌಟ್ ಆಯಿತು. ಅಬ್ದುಲ್ಲಾ ಶಫೀಕ್ 102 ರನ್ ಗಳಿಸಿದರೆ, ನಾಯಕ ಶಾನ್ ಮಸೂದ್ 151 ರನ್ ಗಳಿಸಿದರು, ಅಘಾ ಸಲ್ಮಾನ್ 104 ರನ್ ಗಳಿಸಿದರು. ಈ ಮೂವರು ಆಟಗಾರರ ಶತಕಗಳ ನೆರವಿನಿಂದ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 556 ರನ್ ಕಲೆಹಾಕಿತು.

pakistan vs england test world record defeat

ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪಾಕಿಸ್ತಾನದ ಬೌಲಿಂಗ್ ಅನ್ನು ಧೂಳಿಪಟ ಮಾಡಿತು. ಹ್ಯಾರಿ ಬ್ರೂಕ್ ತ್ರಿಶತಕ ಮತ್ತು ಜೋ ರೂಟ್ ಅವರ ದ್ವಿಶತಕದ ನೆರವಿನಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 823 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 268 ರನ್‌ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿತು.

ರೂಟ್, ಬ್ರೂಕ್ ಭರ್ಜರಿ ಆಟ

ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಜೋ ರೂಟ್ 262 ರನ್ ಗಳಿಸಿ ಮಿಂಚಿದರೆ, ಹ್ಯಾರಿ ಬ್ರೂಕ್ 317 ರನ್ ಗಳಿಸಿ ಹೊಸ ದಾಖಲೆ ಬರೆದರು. 1990 ರ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಬ್ಯಾಟರ್ ಒಬ್ಬ ತ್ರಿಶತಕ ಗಳಿಸಿದರು. ಬೆನ್ ಡಕೆಟ್ 75 ಎಸೆತಗಳಲ್ಲಿ 84 ರನ್ ಗಳಿಸಿದರೆ, ಜಾಕ್ ಕ್ರಾಲಿ 78 ರನ್ ಗಳಿಸಿದರು.

ಪಾಕಿಸ್ತಾನಕ್ಕೆ ಹೀನಾಯ ಸೋಲು

ಎರಡನೇ ಇನ್ನಿಂಗ್ಸ್ ಆರಂಭಿಸಿ ಪಾಕಿಸ್ತಾನ 220 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಮತ್ತು 47 ರನ್‌ಗಳಿಂದ ಸೋಲು ಕಂಡಿತು. ಅಘಾ ಸಲ್ಮಾನ್ 63 ರನ್, ಅಮೀರ್ ಅಜ್ಮಲ್ 55 ರನ್ ಗಳಿಸಿ ಇಂಗ್ಲೆಂಡ್‌ಗೆ ಹೋರಾಟ ಕೊಟ್ಟರೂ, ಸೋಲು ತಪ್ಪಿಸಲು ಆಗಲಿಲ್ಲ. ಜಾಕ್ ಲೀಚ್ 4 ವಿಕೆಟ್ ಪಡೆದರೆ, ಬ್ರೈಡನ್ ಕಾರ್ಸ್ ಮತ್ತು ಗಸ್ ಆಟ್ಕಿನ್‌ಸನ್ ತಲಾ 2 ವಿಕೆಟ್ ಪಡೆದರು. ಕ್ರಿಸ್ ವೋಕ್ಸ್ 1 ವಿಕೆಟ್ ಪಡೆದರು.

ಕೆಟ್ಟ ದಾಖಲೆ ಬರೆದ ಪಾಕ್‌

ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕಿಂತ ಹೆಚ್ಚು ರನ್ ಗಳಿಸಿದ ಬಳಿಕ ಇನ್ನಿಂಗ್ಸ್‌ ಸೋಲು ಕಂಡ ಮೊದಲ ಕೆಟ್ಟ ದಾಖಲೆಯನ್ನು ಪಾಕಿಸ್ತಾನ ಮಾಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 500 ಕ್ಕಿಂತ ಹೆಚ್ಚು ರನ್ ಗಳಿಸಿದ ಯಾವ ತಂಡ ಕೂಡ ಇನ್ನಿಂಗ್ಸ್‌ ಸೋಲು ಕಂಡಿಲ್ಲ. 1976ರ ಬಳಿಕ ಮೊದಲ ಬಾರಿಗೆ ಇಂಗ್ಲೆಂಡ್‌ ಏಷ್ಯಾದಲ್ಲಿ ಇನ್ನಿಂಗ್ಸ್ ಗೆಲುವು ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕಿಂತ ಹೆಚ್ಚು ರನ್ ಗಳಿಸಿದರೂ ಐದು ಬಾರಿ ಸೋತ ಕೆಟ್ಟ ದಾಖಲೆ ಪಾಕಿಸ್ತಾನದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+