ಟೀಮ್ ಇಂಡಿಯಾ ಏಕದಿನ ವಿಶ್ವಕಪ್ 2027 ಟೂರ್ನಿಗೆ ಕನ್ನಡಿಗ, ಆರ್‌ಸಿಬಿ ಸ್ಟಾರ್ ಹೆಸರು..
ODI World Cup 2027: ಈಗಾಗಲೇ ಟೀಮ್ ಇಂಡಿಯಾವು ಟಿ-20 ವಿಶ್ವಕಪ್ 2026 ಟ್ರೋಫಿ ಗೆದ್ದಿದೆ. ಇದೀಗ 2027ರ ವರ್ಲ್ಡ್‌ಕಪ್ ಟೂರ್ನಿಗೆ ತೆರೆಮರೆಯಲ್ಲಿ ಭರ್ಜರಿ ಸಿದ್ಧತೆ ಶುರುವಾಗಿದ್ದು, ಸುನೀಲ್ ಗವಾಸ್ಕರ್ ಅವರು ಭಾರತ ತಂಡವನ್ನು ಹೆಸರಿಸಿದ್ದಾರೆ. ಇದರಲ್ಲಿ ಒಬ್ಬ ಕನ್ನಡಿಗ ಹಾಗೂ ಓರ್ವ ಆರ್‌ಸಿಬಿ ಆಟಗಾರರಿದ್ದಾರೆ. ಇದನ್ನು ಆಕಾಶ್ ಚೋಪ್ರಾ ಅವರು ವಿಶ್ಲೇಷಣೆ ಮಾಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
2027ರ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನೂ ತುಂಬಾ ಸಮಯ ಇದೆ. ಆದರೂ ಈ ಪ್ರಮುಖ ಪಂದ್ಯಾವಳಿಗೆ ಭಾರತೀಯ ತಂಡದ ಆಯ್ಕೆ, ಸಂಯೋಜನೆಗಳು ಹಾಗೂ ಊಹಾಪೋಹಗಳ ಕುರಿತ ಚರ್ಚೆಗಳು ಈಗಾಗಲೇ ಶುರುವಾಗಿವೆ. 2011ರ ಆವೃತ್ತಿಯ ನಂತರ ಭಾರತ ತಂಡವು ಮತ್ತೆ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ.

ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ಭಾರತ
ಕೊನೆಯದಾಗಿ 2023ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವು ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಪ್ರಸ್ತುತ ಟಿ-20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಭಾರತ ತಂಡದ ಮೇಲೆ 2027ರಲ್ಲಿ ನಿರೀಕ್ಷೆಗಳು ಅತ್ಯಂತ ಹೆಚ್ಚಿರಲಿವೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಅವರು ಇತ್ತೀಚೆಗೆ ಸುನಿಲ್ ಗವಾಸ್ಕರ್ ಅವರು ಆಯ್ಕೆ ಮಾಡಿದ ಸಂಭಾವ್ಯ ಭಾರತೀಯ ತಂಡದ ವಿಶ್ಲೇಷಣೆ ಮಾಡಿದ್ದಾರೆ.
ಕನ್ನಡಿಗ ಮತ್ತು ಆರ್‌ಸಿಬಿ ಸ್ಟಾರ್..
'ಶುಬ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ ಟಾಪ್ ಫೈವ್ ಬ್ಯಾಟರ್ಸ್. ಚಾಂಪಿಯನ್ಸ್ ಟ್ರೋಫಿಯಲ್ಲೂ ಇದ್ದವರು ಇವರೇ. ಆದ್ದರಿಂದ ಅದನ್ನೇ ಮುಂದುರೆಸಲಾಗಿದೆ. ಇಶಾನ್ ಕಿಶನ್ ಅವರನ್ನು 15ರ ಬಳಗದಲ್ಲಿ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಅವರು ಉತ್ತಮ ಫಾರ್ಮ್‌ನಲ್ಲಿದ್ದು, ಈ ಮಾದರಿಗೆ ಸಂಪೂರ್ಣ ಸಜ್ಜಾಗಿದ್ದಾರೆ ಎಂದು ಆಕಾಶ್ ಚೋಪ್ರಾ ಅವರು ಹೇಳಿದ್ದಾರೆ.
ಆಕಾಶ್ ಚೋಪ್ರಾ ಹೇಳಿದ್ದೇನು?
'ಹಾರ್ದಿಕ್ ಪಾಂಡ್ಯ ಮತ್ತು ನಿತೀಶ್ ಕುಮಾರ್ ರೆಡ್ಡಿ ಇದ್ದಾರೆ. ಇದು ನನಗೆ ನಿಜಕ್ಕೂ ಇಷ್ಟವಾಯಿತು. ಸ್ಪಿನ್ ಬೌಲಿಂಗ್ ಆಲ್ ರೌಂಡರ್‌ಗಳನ್ನು ಆಡಿಸಲು ಸಾಧ್ಯವಾಗದಿರಬಹುದು. ಇದರಿಂದ ನಾನು ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವನ್ನು ಆಯ್ಕೆ ಮಾಡಲು ಇಷ್ಟ ಪಡುತ್ತೇನೆ. ಈ ಇಬ್ಬರೂ ಎಡಗೈ ಸ್ಪಿನ್ನರ್‌ಗಳು ಮತ್ತು ಅತ್ಯಂತ ಅನುಭವಿಗಳು. ಇಲ್ಲೂ ಸಹ ಒಂದೇ ಮಾದರಿಯ ಬದಲಾವಣೆಗಳು. ಸನ್ನಿ ಸುನಿಲ್ ಗವಾಸ್ಕರ್ ಆಯ್ಕೆ ಮಾಡಿದ ನಾಲ್ಕೂ ಆಲ್ ರೌಂಡರ್‌ಗಳು ಸೂಕ್ತ ಪರ್ಯಾಯ ಆಟಗಾರರಾಗಿದ್ದಾರೆ,' ಎಂದು ಆಕಾಶ್ ಚೋಪ್ರಾ ಅವರು ತಿಳಿಸಿದ್ದಾರೆ.
'ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್‌ದೀಪ್ ಯಾದವ್ ಇದ್ದಾರೆ. ಹರ್ಷಿತ್ ರಾಣಾ ಅವರು ಕೂಡ ಇದ್ದು, ಇವರು ಬ್ಯಾಟಿಂಗ್ ಸಹ ಮಾಡಬಲ್ಲ ಒಬ್ಬ ವೇಗದ ಬೌಲರ್. ಅರ್ಷದೀಪ್ ಸಿಂಗ್ ಕೂಡ ಇದ್ದಾರೆ. ಎಡಗೈ ವೇಗದ ಬೌಲರ್ ತಂಡದಲ್ಲಿರುವುದು ಒಳ್ಳೆಯದೇ. ಇದು 10ಕ್ಕೆ 8.5 ಅಥವಾ 9 ಅಂಕ ನೀಡಬಹುದಾದ ತಂಡವಾಗಿದೆ. ಅಂತಿಮವಾಗಿ ಆಯ್ಕೆಯಾಗಬಹುದಾದ ತಂಡಕ್ಕೆ ಇದು ಅತ್ಯಂತ ಹತ್ತಿರದಲ್ಲಿದೆ ಎಂದು ನಾನು ಭಾವಿಸುತ್ತೇನೆ,' ಅಂತಾ ಹೇಳಿದ್ದಾರೆ.
ಇತ್ತೀಚೆಗಷ್ಟೇ ರವಿಚಂದ್ರನ್ ಅಶ್ವಿನ್ ಅವರು ವಿಶ್ವಕಪ್ ತಂಡಕ್ಕೆ ಭುವನೇಶ್ವರ್ ಕುಮಾರ್ ಅವರನ್ನು ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಆದರೆ ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಅವರಂತಹ ಆಟಗಾರರ ವಿಚಾರಕ್ಕೆ ಬಂದರೆ, ಅವರ ಆಯ್ಕೆಯ ನಿರ್ಧಾರವು ಯಾವ ಕಡೆಗೆ ಬೇಕಾದರೂ ಹೋಗಬಹುದು (ಆಯ್ಕೆಯಾಗಬಹುದು ಅಥವಾ ಇಲ್ಲದಿರಬಹುದು) ಎಂದು ಅಶ್ವಿನ್ ಹೇಳಿದ್ದರು.
ಭುವನೇಶ್ವರ್ ಕುಮಾರ್ ಸೇರಿಸಿಕೊಳ್ಳುವಂತೆ ಅಶ್ವಿನ್ ಮನವಿ
ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆರ್.ಅಶ್ವಿನ್, 'ಭುವನೇಶ್ವರ್ ಕುಮಾರ್ ನನ್ನ ಆಯ್ಕೆ. ನಾನು ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಅವರು ಪ್ರಥಮ ದರ್ಜೆ ಕ್ರಿಕೆಟ್, ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ಎಲ್ಲಾ ಸರಣಿಗಳನ್ನು ಆಡುವಂತೆ ನೋಡಿಕೊಳ್ಳುತ್ತೇನೆ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಜ್ಜುಗೊಳಿಸುತ್ತೇನೆ. ಅಲ್ಲಿ ಅವರ ಅಗತ್ಯ ನಮಗಿದೆ ಎಂದು ನಾನು ಭಾವಿಸುತ್ತೇನೆ,' ಎಂದು ಹೇಳಿದ್ದಾರೆ.
ಸಂಭಾವ್ಯ ಆಯ್ಕೆಗಳು ಹೀಗಿವೆ
ಪಕ್ಕಾ ಆಯ್ಕೆಯಾಗುವ ಆಟಗಾರರು: ಶುಬ್‌ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಭುವನೇಶ್ವರ್ ಕುಮಾರ್.
ಆಯ್ಕೆಯಾಗಬಹುದು/ಇಲ್ಲದಿರಬಹುದು: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ವರುಣ್ ಚಕ್ರವರ್ತಿ, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.
ಆಯ್ಕೆ ಆಗದವರು ಯಾರು?: ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ರವಿ ಬಿಷ್ಣೋಯ್, ಶಿವಂ ದುಬೆ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್. ಹೀಗೆ ಮೂರು ವರ್ಗಗಳಾಗಿ ವಿಂಗಡಣೆ ಮಾಡಲಾಗಿದೆ.


Click it and Unblock the Notifications
