Paris Olympics 2024: ಒಲಿಂಪಿಕ್ಸ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ!

ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಯಾದರೆ ಇಡೀ ಜಗತ್ತೇ ಆ ಪಂದ್ಯವನ್ನು ಕುತೂಹಲದಿಂದ ವೀಕ್ಷಿಸುತ್ತದೆ. ರಾಜಕೀಯ ಕಾರಣಗಳಿಂದ ಎರಡೂ ದೇಶಗಳ ನಡುವೆ ಸಂಬಂಧ ಹಳಸಿದ್ದರೂ, ಐಸಿಸಿ ಪಂದ್ಯಾವಳಿಗಳಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತವೆ, ಕ್ರಿಕೆಟ್ ಮಾತ್ರವಲ್ಲದೆ ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೂಡ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು ಸಖತ್ ಕುತೂಹಲ ಕೆರಳಿಸಿದೆ.

ಹೌದು, ಭಾರತಕ್ಕೆ ಒಲಿಂಪಿಕ್‌ ಪದಕದ ಭರವಸೆ ಮೂಡಿಸಿರುವ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಏಕೈಕ ಪದಕದ ಭರವಸೆಯಾಗಿರುವ ಅರ್ಷದ್‌ ನದೀಮ್‌ ಗುರುವಾರ ನಡೆಯಲಿರುವ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

Neeraj Chopra vs Arshad Nadeem A Showdown at Paris Olympics Javelin Final

ಮಂಗಳವಾರ ನಡೆದ ಅರ್ಹತಾ ಸುತ್ತಿನಲ್ಲಿ ಕಳೆದ ಒಲಿಂಪಿಕ್‌ನ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ತಮ್ಮ ವೈಯಕ್ತಿಕ ಅತ್ಯುತ್ತಮ ಥ್ರೋ 89.34 ಮೀಟರ್‌ ಎಸೆಯುವ ಮೂಲಕ ಬಿ ಗುಂಪಿನಿಂದ ಫೈನಲ್ ಪ್ರವೇಶಿಸಿದರು. ಬಿ ಗುಂಪಿನಿಂದಲೇ ಸ್ಪರ್ಧೆ ಮಾಡಿದ್ದ ಪಾಕಿಸ್ತಾನದ ಅರ್ಷದ್ ನದೀಮ್ 86.59 ಮೀ ಎಸೆದು ಫೈನಲ್‌ಗೆ ಅರ್ಹತೆ ಪಡೆದರು.

ಕೀನ್ಯಾದ ಜೂಲಿಯಸ್ ಯೆಗೊ, ಜಾಕುಬ್ ವಡ್ಲೆಜ್, ಜೂಲಿಯನ್ ವೆಬರ್ ಫೈನಲ್‌ಗೆ ಅರ್ಹತೆ ಪಡೆದ ಪ್ರಮುಖರಾಗಿದ್ದಾರೆ. ಭಾರತದ ಮತ್ತೋರ್ವ ಜಾವೆಲಿನ್ ಎಸೆತಗಾರ ಕಿಶೋರ್ ಜೆನಾ ಅವರು 80.21 ಮೀಟರ್ ಎಸೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಒಟ್ಟು 32 ಅಥ್ಲಿಟ್‌ಗಳು ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದ್ದರು, 12 ಅಥ್ಲೀಟ್‌ಗಳು ಪುರುಷರ ಜಾವೆಲಿನ್ ಎಸೆತದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಭರವಸೆ ಭಾರತೀಯರಿಗೆ ಇದೆ. ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಇಬ್ಬರೂ ಕೂಡ ತಮ್ಮ ದೇಶಗಳಿಗೆ ಪದಕದ ಭರವಸೆ ಮೂಡಿಸಿರುವ ಅಥ್ಲಿಟ್‌ಗಳಾಗಿದ್ದಾರೆ. ಇಬ್ಬರ ನಡುವೆ ಆಟದಲ್ಲಿ ಪೈಪೋಟಿ ಇದ್ದರೂ, ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಫೈನಲ್ ಯಾವಾಗ?

ಜಾವೆಲಿನ್ ಎಸೆತದ ಫೈನಲ್ ಸ್ಪರ್ಧೆ ಆಗಸ್ಟ್ 8ರಂದು ಭಾರತೀಯ ಕಾಲಮಾನ ರಾತ್ರಿ 11.55ಕ್ಕೆ ನಡೆಯಲಿದೆ. ಜಿಯೋ ಸಿನಿಮಾದಲ್ಲಿ ಈ ಸ್ಪರ್ಧೆಯನ್ನು ನೇರಪ್ರಸಾರದಲ್ಲಿ ನೋಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+