ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಮತ್ತೆ ಕ್ಯಾಪ್ಟನ್? ಹಾರ್ದಿಕ್ ಪಾಂಡ್ಯ IPL ಟೂರ್ನಿಯಿಂದಲೇ ಔಟ್?
ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. 2023ರ ವಿಶ್ವಕಪ್ ಟೂರ್ನಿ ಬಳಿಕ ಭಾರತದಲ್ಲಿ ಐಪಿಎಲ್ ಹವಾ ಜೋರಾಗಿದೆ. ಹೀಗಾಗಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಸಕಲ ಸಿದ್ಧತೆ ನಡೆಸುತ್ತಿದೆ ಬಿಸಿಸಿಐ. ಅದರಲ್ಲೂ ಈ ಬಾರಿ ಮತ್ತೊಮ್ಮೆ 'ಟ್ರೋಫಿ' ಮೇಲೆ ಕಣ್ಣಿಟ್ಟು ಕೂತಿದ್ದ ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಆಘಾತ ಎದುರಾಗಿದೆ. ಅರೆರೆ ಏನಾಯ್ತು? ಅಂದ್ರಾ, ಮುಂಬೈ ತಂಡದ ಹೊಸ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಐಪಿಎಲ್ ಆಡೋದೆ ಇಲ್ಲ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿದೆ.
ಐಪಿಎಲ್ ಅಂದ್ರೆ ಜಗತ್ತಿನಾದ್ಯಂತ ಕ್ರೇಜ್ ಇರುತ್ತದೆ. ಇಂಡಿಯಾದ ಮೂಲೆ ಮೂಲೆಯಿಂದ ಹಿಡಿದು ಆಸ್ಟ್ರೇಲಿಯಾ ತನಕ ಐಪಿಎಲ್ ಎಂಜಾಯ್ ಮಾಡ್ತಾರೆ. ಅದ್ರಲ್ಲೂ ಮುಂಬೈ ಟೀಂ ಅಂದ್ರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಇದ್ದಾರೆ. ಹೀಗಿದ್ದಾಗ ಮೊನ್ನೆ ಮೊನ್ನೆಯಷ್ಟೇ ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ ಪಟ್ಟ ಕಟ್ಟಿ ಮುಂಬೈ ತಂಡ ದೊಡ್ಡ ಸದ್ದು ಮಾಡಿತ್ತು. ಮುಂಬೈ ಟೀಂ ರೋಹಿತ್ ಶರ್ಮಾರನ್ನ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ ಪಟ್ಟ ಕಟ್ಟಿದ್ದು ಆಕ್ರೋಶಕ್ಕೆ ಗುರಿಯಾಗಿತ್ತು. ಆದ್ರೆ ಈಗ ಬೇರೆಯದ್ದೇ ಆಘಾತಕಾರಿ ಸುದ್ದಿ ಹೊರಬಿದ್ದಿದ್ದು, ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್ ಟೂರ್ನಿ ಆಡಲ್ವಂತೆ! ಹಾಗಾದರೆ ಈ ಸುದ್ದಿ ನಿಜಾನಾ?

ಹಾರ್ದಿಕ್ ಪಾಂಡ್ಯಗೆ ಈಗ ಏನಾಗಿದೆ?
ಅಷ್ಟಕ್ಕೂ 2023ರ ಏಕದಿನ ವರ್ಲ್ಡ್ ಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರು. ಇದೀಗ ಮತ್ತೆ ಕ್ರಿಕೆಟ್‌ಗೆ ಕಂಬ್ಯಾಕ್ ಮಾಡಲು ಹಾರ್ದಿಕ್ ಪಾಂಡ್ಯ ತಯಾರಿ ಆರಂಭಿಸಿದ್ದಾರೆ. ಅದ್ರಲ್ಲೂ ಮುಂಬೈ ತಂಡಕ್ಕೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗ್ತಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಹಾರ್ದಿಕ್ ಪಾಂಡ್ಯ 2024ರ ಐಪಿಎಲ್ ಆಡೋದೆ ಡೌಟ್ ಎನ್ನಲಾಗುತ್ತಿದೆ. ಹಾಗಾದ್ರೆ ಈ ಸುದ್ದಿ ನಿಜಾನಾ?
ಮತ್ತೆ ಕ್ಯಾಪ್ಟನ್ ಆಗ್ತಾರಾ ರೋಹಿತ್ ಶರ್ಮಾ?
ಈಗಿನ ಅಪ್‌ಡೇಟ್ ಪ್ರಕಾರ ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕ & ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದಿಂದ ಇನ್ನೂ ಚೇತರಿಕೆ ಕಂಡಿಲ್ಲ ಎನ್ನಲಾಗಿದೆ. ಹೀಗಾಗಿ ಐಪಿಎಲ್ ಶುರುವಾಗುವ ಒಳಗೆ ಅವರು ಸುಧಾರಿಸಿಕೊಂಡು ಆಟಕ್ಕೆ ಮರಳುವುದು ಕೂಡ ಅನುಮಾನ ಆಗಿದೆ. ಹೀಗಾಗಿ ರೋಹಿತ್ ಶರ್ಮಾ ಅವರೇ ಮತ್ತೆ ಕ್ಯಾಪ್ಟನ್ ಆಗ್ತಾರಾ ಮುಂಬೈ ಇಂಡಿಯನ್ಸ್ ತಂಡಕ್ಕೆ? ಅನ್ನೋ ಅನುಮಾನ ಕೂಡ ಮೂಡಿದೆ.
ಅಭಿಮಾನಿಗಳು ಹೇಳೋದು ಏನು?
ಇನ್ನು ಜನವರಿ 11 ರಿಂದ ಅಫ್ಘಾನಿಸ್ತಾನ ವಿರುದ್ಧ ಆರಂಭ ಆಗಲಿರುವ ಟಿ-20 ಸರಣಿಗೆ ಕೂಡ, ಹಾರ್ದಿಕ್ ಪಾಂಡ್ಯರ ಗೈರು ಹಾಜರಿ ಕಾಡಲಿದೆ ಎನ್ನಲಾಗಿದೆ. ಇದರ ಜೊತೆಗೆ, ಇನ್ನೂ ಕೆಲ ತಿಂಗಳ ಸಮಯ ಅವರಿಗೆ ಅಗತ್ಯ ಇದೆ ಎನ್ನುವ ಸುದ್ದಿಗಳ ನಡುವೆ ಈ ಮಾಹಿತಿ ಎಲ್ಲೆಲ್ಲು ಸಂಚಲನ ಸೃಷ್ಟಿ ಮಾಡಿದೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೂಡ ಈ ಸ್ಟಾರ್ ಆಟಗಾರ ಎಂಟ್ರಿ ಕೊಡುವುದು ಡೌಟ್ ಎನ್ನಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಚರ್ಚೆ ಶುರುವಾಗಿದೆ.

ಒಟ್ನಲ್ಲಿ ಐಪಿಎಲ್ ಟೂರ್ನಿಯ 17ನೇ ಆವೃತ್ತಿ ಸಾಕಷ್ಟು ಗಮನ ಸೆಳೆದಿದೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿ ಹಾರ್ದಿಕ್ ಪಾಂಡ್ಯ ಅವರ ಅಭಿಮಾನಿಗಳಿಗೆ ಆಘಾತ ನೀಡುತ್ತಿದ್ದು ಪಾಂಡ್ಯ ಇದ್ದರೇನೆ ಕಳೆ ಅಂತಿದ್ದಾರೆ ಫ್ಯಾನ್ಸ್. ಹೀಗಾಗಿ ಆದಷ್ಟು ಬೇಗ ಹಾರ್ದಿಕ್ ಪಾಂಡ್ಯ ಹುಷಾರಾಗಿ ಕ್ರಿಕೆಟ್ ಅಂಗಳಕ್ಕೆ ಎಂಟ್ರಿ ಕೊಡಲಿ ಅಂತಾ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಹಾಗೇ ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಪ್ರಾರ್ಥನೆ ಕೂಡ ಇದೇ ಆಗಿದೆ.












Click it and Unblock the Notifications