CSK vs PBKS: ಮಹೀಶ್ ತೀಕ್ಷಣ ದುಬಾರಿ ಎಡವಟ್ಟಿಗೆ ತಾಳ್ಮೆ ಕಳೆದುಕೊಂಡ ಧೋನಿ, ಫ್ಲೆಮಿಂಗ್!: video
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ರೋಚಕ ಕದನ ಅಭಿಮಾನಿಗಳನ್ನು ಕೊನೆಯ ಎಸೆತದವರೆಗೂ ಉದಿರು ಬಿಗಿಹಿಡಿದು ಕೂರುವಂತೆ ಮಾಡಿರುವುದರಲ್ಲಿ ಅನುಮಾನವಿಲ್ಲ. ಹೈಸ್ಕೋರಿಂಗ್ ಪಂದ್ಯದಲ್ಲಿ ಎರಡು ತಂಡಗಳಿಗೂ ಗೆಲ್ಲುವ ಅದ್ಭುತ ಅವಕಾಶಗಳಿತ್ತು. ಇದರಲ್ಲಿ ಕೊನೆಯ ಹಂತದಲಿ ಗೆಲುವಿನ ನಗೆ ಬೀರಿದ್ದು ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ.
ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಗ್ರ ಕ್ರಮಾಂಕ ಮತ್ತೊಮ್ಮೆ ಅಬ್ಬರಿಸಿದ್ದು ಪಂಜಾಬ್ ಕಿಂಗ್ಸ್ ತಂಡಕ್ಕೆ 201 ರನ್‌ಗಳ ಬೃಹತ್ ಗುರಿ ನಿಗದಿಪಡಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ರೋಚಕ ಹೋರಾಟ ನೆಡೆಸಿದ್ದು ಕೊನೆಯ ಎಸೆತದಲಿ ಮೂರು ರನ್‌ಗಳನ್ನು ಗಳಿಸಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ ಧವನ್ ಪಡೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹಾಗೂ ಕೋಚ್ ಸ್ಟೀಫನ್ ಫ್ಲೆಮಿಂಗ್ ತಾಳ್ಮೆಕಳೆದುಕೊಂಡಂತಾ ಘಟನೆ ನಡೆಯಿತು. ಇದಕ್ಕೆ ಕಾರಣವಾಗಿದ್ದು ಫೀಲ್ಡಿಂಗ್‌ನಲ್ಲಿ ಮಹೀಶ್ ತೀಕ್ಷಣ ಮಾಡಿದ ದುಬಾರಿ ಎಡವಟ್ಟು!

ಭಾರತ ತಂಡಕ್ಕೆ ಮರಳುತ್ತೀರಾ ಎಂದು ಕೇಳಿದ್ದಕ್ಕೆ ಅಚ್ಚರಿಯ ಉತ್ತರ ನೀಡಿದ ವಿಜಯ್ ಶಂಕರ್!
ಈ ಘಟನೆ ನಡೆಸಿದ್ಉ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ. ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ನೀಡಿದ್ದ 201 ರನ್‌ಗಳ ಗುರಿ ಬೆನ್ನಟ್ಟಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲುವಿಗಾಗಿ 5 ಓವರ್‌ಗಳಲ್ಲಿ 72 ರನ್‌ಗಳ ಅಗತ್ಯವಿತ್ತು. 16ನೇ ಓವರ್‌ನಲ್ಲಿ ಸ್ಟ್ರೈಕ್ ಪಡೆದುಕೊಂಡಿದ್ದ ಲಿಯಾಮ್ ಲಿವಿಂಗ್ಸ್ಟನ್ ಅದ್ಭುತವಾಗಿ ಆರಂಭಿಸಿದ್ದರು.
ತುಷಾರ್ ದೇಶ್‌ಪಾಂಡೆ ಎಸೆದ ಈ ಓವರ್‌ನ ಮೊದಲ ಎರಡು ಎಸೆತಗಳನ್ನು ಲಿವಿಂಗ್ಸ್ಟನ್ ಭರ್ಜರಿ ಸಿಕ್ಸರ್‌ಗೆ ಅಟ್ಟಿದ್ದರು. ಅದಾದ ಮುಂದಿನ ಎಸೆತ ಶ್ರೀಲಂಕಾದ ಸ್ಪಿನ್ನರ್ ಮಹೀಶ್ ತೀಕ್ಷಣ ಮಾಡಿದ ಎಡವಟ್ಟಿನಿಂದಾಗಿ ಬೌಂಡರಿ ಗೆರೆ ದಾಟಿತ್ತು. ಈ ಚೆಂಡನ್ನು ತಡೆಯುವ ಉತ್ತಮ ಅವಕಾಶವನ್ನು ಹೊಂದಿದ್ದರು. ಆದರೆ ತಡೆಯುವ ಪ್ರಯತ್ನದಲ್ಲಿ ವಿಫಲವಾದ ತೀಕ್ಷಣ ಚೆಂಡು ಬೌಂಡರಿ ದಾಟಲು ಕಾರಣವಾದರು.
ಇಂಗ್ಲೀಶ್ ಬ್ಯಾಟರ್ ಲಿವಿಂಗ್ಸ್ಟನ್ ಇಲ್ಲಿ ಚೆಂಡನ್ನು ಬ್ಯಾಟ್‌ನಿಂದ ಬಾರಿಸದೆಯೇ ತಂಡಕ್ಕೆ ಅಮೂಲ್ಯ ನಾಲ್ಕು ರನ್ ಉಡುಗೊಡೆಯಾಗಿ ಪಡೆದುಕೊಂಡರು. ತುಷಾರ್ ಎಸೆದ ಚೆಂಡು ಲಿವಿಂಗ್ಸ್ಟನ್ ಅವರ ಭುಜಕ್ಕೆ ತಾಗಿ ಶಾರ್ಟ್ ಥರ್ಡ್ ಮ್ಯಾನ್ ಭಾಗದಲ್ಲಿದ್ದ ತೀಕ್ಷಣ ಅವರತ್ತ ಸಾಗಿತ್ತು. ಈ ಸಂದರ್ಭದಲ್ಲಿ ಚೆಂಡು ಬರುತ್ತಿರುವದನ್ನು ಸೂಕ್ತವಾಗಿ ಗುರುತಿಸಿಕೊಳ್ಳಲು ವಿಫಲವಾದ ತೀಕ್ಷಣ ಚೆಂಡಿಗಿಂಯ ಮುಂದೆ ಡೈವ್ ಮಾಡಿದರು. ಹೀಗಾಗಿ ಚೆಂಡು ಕೆಳ ಭಾಗದಿಂದ ಬೌಂಡರಿಯತ್ತ ಸಾಗಿತ್ತು.
— CricDekho (@Hanji_CricDekho) April 30, 2023
ಈ ಸಂದರ್ಭದಲ್ಲಿ ಡಗೌಟ್‌ನಲ್ಲಿದ್ದ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೋಪದಿಂದಲೇ ತಲೆಯಲ್ಲಿದ್ದ ಟೋಪಿಯನ್ನು ತೆಗೆದು ಬುಸುಗುಟ್ಟಿದರು. ಮತ್ತೊಂದೆಡೆ ಎಂಎಸ್ ಧೋನಿ ಕೂಡ ಮೈದಾನದಲ್ಲಿ ತೀಕ್ಷಣ ಅವರಲ್ಲಿ ಕೋಪದಿಂದ ಏನೋ ಹೇಳಿದ್ದು ಕಂಡು ಬಂದಿತು. ಈ ಪಂದ್ಯ ಅಂತಿಮ ಎಸೆತದವರೂ ಸಾಗಿದ್ದು ಕೊನೆಯ ಎಸೆತದಲ್ಲಿ ಮೂರು ರನ್‌ಗಳನ್ನು ಪಡೆಯುವ ಮೂಲಕ ಪಂಜಾಬ್ ಕಿಂಗ್ಸ್ ಈ ಪಂದ್ಯದಲ್ಲಿ 4 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿತು.












Click it and Unblock the Notifications