MS Dhoni: ನಮ್ಮ ಸಿಎಸ್‌ಕೆಗಿಂತ ಆರ್‌ಸಿಬಿಯೇ ಸ್ಟ್ರಾಂಗ್ ಟೀಮ್: ಎಂಎಸ್‌ ಧೋನಿ ಈ ಹೇಳಿಕೆಗೆ ನಟ್ಟಿಗರು ಹೇಳೋದೇನು?

MS Dhoni: ಐಪಿಎಲ್‌ ಹಾಲಿ ಚಾಂಪಿಯನ್ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಸಿಎಸ್‌ಕೆಗಿಂತ ಸ್ಟ್ರಾಂಗ್ ಎಂದು ಎಂಸ್ ಧೋನಿ ಅವರು ಹೊಗಳಿದ್ದಾರೆ. ಇದೀಗ ಇದನ್ನೇ ಇಟ್ಟುಕೊಂಡು ಆರ್‌ಸಿಬಿ ಫ್ಯಾನ್ಸ್‌ ಸಾಮಾಜಿಕ ಜಾಲತಾಣದಲ್ಲಿ ಚೆನ್ನೇ ಸೂಪರ್ ಕಿಂಗ್ಸ್‌ ಅಭಿಮಾನಿಗಳ ಕಾಲೆಳೆಯುತ್ತಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಭೂತಪೂರ್ವ ಏಳಿಗೆ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹಿನ್ನಡೆಯ ಕುರಿತು ಟೀಂ ಇಂಡಿಯಾ ಹಾಗೂ ಸಿಎಸ್‌ಕೆ ದಂತಕಥೆ ಎಂ.ಎಸ್.ಧೋನಿ ಪ್ರತಿಕ್ರಿತಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಆರೋಗ್ಯ ರಕ್ಷಣೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಧೋನಿ, ಆರ್‌ಸಿಬಿ ತಂಡದ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

MS Dhoni Praises Royal Challengers Bengaluru What He Said About Bengaluru and Chennai Super Kings

ಎಂಎಸ್‌ ಧೋನಿ ಹೇಳಿದ್ದೇನು?

ತಂಡದ ಯಶಸ್ಸಿನ ಕುರಿತು ಮಾತನಾಡಿದ ಧೋನಿ ಅವರು, 'ಕಾಗದದ ಮೇಲೆ ಅಥವಾ ದಾಖಲೆಗಳಲ್ಲಿ ನಿಮ್ಮ ತಂಡ ಎಷ್ಟು ಬಲವಾಗಿದೆ ಎಂಬುದು ಮುಖ್ಯವಲ್ಲ. ಆ ನಿರ್ದಿಷ್ಟ ದಿನದಂದು ಮೈದಾನದಲ್ಲಿ ನೀವು ಹೇಗೆ ಪ್ರದರ್ಶನ ನೀಡುತ್ತೀರಿ ಎಂಬುದು ಅತ್ಯಂತ ಪ್ರಮುಖವಾಗಿರುತ್ತದೆ. ಟಿ20ಯಂತಹ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಎರಡು ಅತ್ಯುತ್ತಮ ತಂಡಗಳ ನಡುವಿನ ವ್ಯತ್ಯಾಸ ತುಂಬಾ ಕಡಿಮೆ ಇರುತ್ತದೆ,' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ಆವೃತ್ತಿಗಳಲ್ಲಿ ತಮ್ಮ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಹಿನ್ನಡೆ ಅನುಭವಿಸಿರುವುದನ್ನು ಧೋನಿ ಒಪ್ಪಿಕೊಂಡಿದ್ದಾರೆ. 'ಕಳೆದ ಎರಡು ವರ್ಷಗಳಲ್ಲಿ ನಾವು ಕಷ್ಟಪಟ್ಟಿದ್ದೇವೆ ಎಂಬುದು ಸತ್ಯ. ಆ ಸತ್ಯದಿಂದ ಓಡಿಹೋಗುವ ಅಗತ್ಯವಿಲ್ಲ. ಅದೇ ಸಮಯದಲ್ಲಿ ಆರ್‌ಸಿಬಿ ಕಳೆದ ಎರಡು ವರ್ಷಗಳಿಂದ ಅತ್ಯುತ್ತಮವಾಗಿ ಪ್ರದರ್ಶನ ನೀಡಿ, ಸತತ ಯಶಸ್ಸು ಕಂಡಿದೆ,' ಎಂದು ಅವರು ಹೇಳಿದ್ದಾರೆ.

ಆರ್‌ಸಿಬಿಯ ಸತತ ಯಶಸ್ಸು, ಸಿಎಸ್‌ಕೆ ಹಿನ್ನಡೆಗಳ ವಿವರ

* ಐಪಿಎಲ್‌ನಲ್ಲಿ ಆರ್‌ಸಿಬಿ ಸತತವಾಗಿ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದರೆ, ಸಿಎಸ್‌ಕೆ ಸತತವಾಗಿ ವೈಫಲ್ಯ ಕಂಡಿದೆ.

* ಕಳೆದ ಎರಡು ಆವೃತ್ತಿಗಳಲ್ಲಿ ಸತತವಾಗಿ ಐಪಿಎಲ್ ಪ್ರಶಸ್ತಿ ಗೆಲ್ಲುವ ಮೂಲಕ ಆರ್‌ಸಿಬಿ ಲೀಗ್‌ನಲ್ಲಿ ಬಲವಾದ ಹಿಡಿತ ಸಾಧಿಸಿದೆ.

* 2023ರಲ್ಲಿ ಚಾಂಪಿಯನ್ ಆಗಿದ್ದ ಸಿಎಸ್‌ಕೆ, ನಂತರದ ಆವೃತ್ತಿಗಳಲ್ಲಿ ಮುಖಭಂಗ ಅನುಭವಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೆಳಗಿನ ಸ್ಥಾನಗಳಿಗೆ ತಳ್ಳಲ್ಪಟ್ಟಿತ್ತು.

ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಬರುವುದು ಸಹಜ ಎಂದು ಹೇಳಿದ ಎಂಎಸ್‌ ಧೋನಿ ಅವರು, ಹಿನ್ನಡೆಯಿಂದ ಹೊರಬಂದು ತಂಡವಾಗಿ ಯಾವ ವಿಷಯಗಳ ಮೇಲೆ ಕೆಲಸ ಮಾಡಬೇಕು ಎಂಬುದನ್ನು ಅರಿತುಕೊಳ್ಳುವುದು ಮುಖ್ಯ ಎಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ಸಿಎಸ್‌ಕೆಗೆ ಪಾಠ ಹೇಳಿದಂತಿದೆ.

ಸವಾಲುಗಳನ್ನು ಎದುರಿಸುವ ಕುರಿತು ಕಿವಿಮಾತು

ಎಂಎಸ್ ಧೋನಿ ಅವರು ಸಿಎಸ್‌ಕೆ ತಂಡವು ಮುಂದಿನ ಆವೃತ್ತಿಯಲ್ಲಿ ಬಲವಾಗಿ ಕಮ್‌ಬ್ಯಾಕ್ ಮಾಡಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. 'ಮುಂದಿನ ಋತುವಿನಲ್ಲಿ ನಮ್ಮ ಆಟಗಾರರು ಗಾಯದ ಸಮಸ್ಯೆಗಳಿಂದ ದೂರವಿದ್ದು, ಪೂರ್ಣ ಪ್ರಮಾಣದಲ್ಲಿ ಲಭ್ಯವಿರುತ್ತಾರೆ ಎಂಬ ಭರವಸೆಯಿದೆ. ಪ್ರತಿಯೊಬ್ಬ ಆಟಗಾರನೂ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ಅರ್ಥೈಸಿಕೊಂಡಾಗ ಸವಾಲುಗಳು ಸುಲಭವಾಗುತ್ತವೆ. ಮುಂದಿನ ಬಾರಿ ನಾವು ಬೆಂಗಳೂರಿಗೆ ಬಂದಾಗ ಅಭಿಮಾನಿಗಳಿಗೆ ಮತ್ತಷ್ಟು ರೋಚಕ ಪಂದ್ಯ ನೀಡಲು ಶ್ರಮಿಸುತ್ತೇವೆ,' ಎಂದು ತಿಳಿಸಿದ್ದಾರೆ.

ನೆಟ್ಟಿಗರು ಹೇಳೋದೇನು?

ಆರ್‌ಸಿಬಿ ಪ್ರದರ್ಶನವನ್ನು ಎಂ.ಎಸ್.ಧೋನಿ ಹೊಗಳಿದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹಾಗೂ ಆರ್‌ಸಿಬಿ ಅಭಿಮಾನಿಗಳು ಚೆನ್ನೈ ಸೂಪರ್ ಕಿಂಗ್ಸ್‌ ಅಭಿಮಾನಿಗಳನ್ನು ಕಾಲೆಳೆಯುತ್ತಿದ್ದಾರೆ. 'ಧೋನಿ ಅವರಿಗಿರುವ ಕ್ರೀಡಾ ಮನೋಭಾವ ಕೆಲ ಅಭಿಮಾನಿಗಳಿಗಿಲ್ಲ. ಆರ್‌ಸಿಬಿಯ ಶ್ರಮ ಮತ್ತು ಸತತ ಯಶಸ್ಸನ್ನು ಅವರೇ ಒಪ್ಪಿಕೊಂಡು ಮುಕ್ತವಾಗಿ ಶ್ಲಾಘಿಸಿದ್ದಾರೆ. ಆದರೆ ಸಿಎಸ್‌ಕೆಯ ಕೆಲ ಅಭಿಮಾನಿಗಳಿಗೆ ಮಾತ್ರ ಆರ್‌ಸಿಬಿ ಸಾಧನೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ,' ಎಂದು ಟಾಂಗ್ ನೀಡುತ್ತಿದ್ದಾರೆ.

ಪೇಪರ್‌ಗಿಂತ ಮೈದಾನದ ಪ್ರದರ್ಶನವೇ ಮುಖ್ಯ ಎಂಬ ಧೋನಿ ಹೇಳಿಕೆಯನ್ನು ಉಲ್ಲೇಖಿಸಿರುವ ನೆಟ್ಟಿಗರು, 'ಕೇವಲ ಹಳೆಯ ದಾಖಲೆಗಳನ್ನು ಹಿಡಿದು ಮೆರೆಯುವ ಸಿಎಸ್‌ಕೆ ಅಭಿಮಾನಿಗಳಿಗೆ ಸ್ವತಃ ಅವರ ನಾಯಕನೇ ಮೈದಾನದ ವಾಸ್ತವದ ಅರಿವು ಮೂಡಿಸಿದ್ದಾರೆ. ಇನ್ನಾದರೂ ಸಿಎಸ್‌ಕೆ ಫ್ಯಾನ್ಸ್ ಆರ್‌ಸಿಬಿಯ ತಾಕತ್ತನ್ನು ಒಪ್ಪಿಕೊಳ್ಳಲಿ,' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

'ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿಯನ್ನು ಸದಾ ಟ್ರೋಲ್ ಮಾಡುತ್ತಿದ್ದ ಸಿಎಸ್‌ಕೆ ಫ್ಯಾನ್ಸ್‌ಗೆ ಸ್ವತಃ ಧೋನಿಯವರೇ ನೇರ ಉತ್ತರ ನೀಡಿದ್ದಾರೆ. ಆರ್‌ಸಿಬಿಯ ಕಮ್‌ಬ್ಯಾಕ್‌ ಮತ್ತು ಕನ್ಸಿಸ್ಟೆನ್ಸಿಯನ್ನು ಟೀಂ ಇಂಡಿಯಾದ ಶ್ರೇಷ್ಠ ನಾಯಕನೇ ಮೆಚ್ಚಿರುವಾಗ ಇನ್ಯಾರ ಪ್ರಮಾಣಪತ್ರವೂ ಬೇಕಿಲ್ಲ,' ಎಂದು ಆರ್‌ಸಿಬಿ ಅಭಿಮಾನಿಗಳು ಹೇಳುತ್ತಿದ್ದಾರೆ.

'ಧೋನಿಯವರ ಈ ಮಾತು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ಪಾಠವಿದ್ದಂತೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಎದುರಾಳಿ ತಂಡದ ಉತ್ತಮ ಆಟವನ್ನು ಗೌರವಿಸುವುದೇ ನಿಜವಾದ ಕ್ರೀಡಾಭಿಮಾನ,' ಎಂದು ಹಲವು ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+