ISL Final: ಪ್ರತಿಷ್ಠಿತ ಪ್ರಶಸ್ತಿಗಾಗಿ ಬೆಂಗಳೂರು ಎಫ್‌ಸಿ vs ಮೋಹನ್ ಬಗಾನ್ ಕಾಳಗ
ಇಂಡಿಯನ್ ಸೂಪರ್ ಲೀಗ್ ಕೊನೆಯ ಘಟ್ಟ ತಲುಪಿದೆ. ಭಾರತದ ಫುಟ್ಬಾಲ್ ಪ್ರೇಮಿಗಳಿಗೆ ಮನರಂಜನೆ ರಸದೌತಣ ನೀಡಿರುವ ಲೀಗ್ ಇದೀಗ ಚಾಂಪಿಯನ್ ಯಾರು ಎಂದು ನಿರ್ಧರಿಸುವ ಫೈನಲ್ ಪಂದ್ಯಕ್ಕೆ ಸಜ್ಜಾಗಿದೆ. ಶನಿವಾರ ಐಎಸ್‌ಎಲ್ ಫೈನಲ್ ಪಂದ್ಯ ನಡೆಯಲಿದ್ದು ಬೆಂಗಳೂರು ಎಫ್‌ಸಿ ತಂಡವನ್ನು ಎದುರಿಸಲು ಮೋಹನ್ ಬಗಾನ್ ಸಜ್ಜಾಗಿದೆ.
ಮೋಹನ್ ಬಗಾನ್ ಸೂಪರ್ ಜೈಂಟ್ ಸತತ ಎರಡನೇ ಸೀಸನ್‌ನಲ್ಲಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಕಪ್ ಫೈನಲ್ ಪ್ರವೇಶಿಸಿದೆ. ಇದು ಬೆಂಗಳೂರು ಎಫ್‌ಸಿ ತಂಡವು ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಮೋಲಿನಾ ಮತ್ತು ಜರಗೋಜಾ ಫೈನಲ್ ಪಂದ್ಯದಲ್ಲಿ ಸೋಲು ಕಂಡಿಲ್ಲ, ಬೋಸ್ ಮತ್ತು ಸಂಧು ನಾಲ್ಕು ಬಾರಿ ಫೈನಲ್‌ನಲ್ಲಿ ಆಡಿದ್ದು ಮೂರು ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ.

ಬೆಂಗಳೂರು ಎಫ್‌ಸಿ ಫೈನಲ್‌ನಲ್ಲಿ ಹೆಚ್ಚಿನ ವಿಶ್ವಾಸದಿಂದಲೇ ಕಣಕ್ಕಿಳಿಯಲಿದೆ. ಮೋಹನ್ ಬಗಾನ್ ದಾಖಲೆಯ ಎಂಟು ಅಂಕಗಳಿಂದ ಮತ್ತು ಎರಡು ಸುತ್ತುಗಳು ಬಾಕಿ ಇರುವಾಗ ಲೀಗ್ ಶೀಲ್ಡ್ ಗೆದ್ದಿದ್ದಾರೆ. ಮೋಹನ್ ಬಗಾನ್ ಲೀಗ್‌ನಲ್ಲಿ 17 ಗೆಲುವುಗಳನ್ನು ಸಾಧಿಸಿದೆ, ಬೆಂಗಳೂರು ಎಫ್‌ಸಿಗಿಂತ ಆರು ಪಂದ್ಯಗಳನ್ನು ಹೆಚ್ಚಾಗಿ ಗೆದ್ದಿದೆ.
ಬೆಂಗಳೂರು ಎಫ್‌ಸಿ ಮೋಹನ್ ಬಗಾನ್ ಅನ್ನು ತವರಿನಲ್ಲಿ 3-0 ಅಂತರದಿಂದ ಸೋಲಿಸಿತು ಮತ್ತು ಈ ಋತುವಿನಲ್ಲಿ ಅವರನ್ನು ಸೋಲಿಸಿದ ಮೂರು ತಂಡಗಳಲ್ಲಿ ಒಂದಾಗಿದೆ. ಬೆಂಗಳೂರು ಎಫ್‌ಸಿ 2-0 ಮುನ್ನಡೆ ಸಾಧಿಸಿದ ನಂತರ ಅವರ ಡುರಾಂಡ್ ಕಪ್ ಪಂದ್ಯವು ಪೆನಾಲ್ಟಿಗಳವರೆಗೆ ವಿಸ್ತರಿಸಿತು. ಐಎಸ್‌ಎಲ್‌ನಲ್ಲಿ ಬೆಂಗಳೂರು ಎಫ್‌ಸಿ ಬಳಿ ಹಲವಾರು ಭಾರತೀಯ ಆಟಗಾರರು ಮತ್ತು ವಿದೇಶಿ ಆಟಗಾರರನ್ನು ಹೊಂದಿದ್ದಾರೆ. ಮುಖ್ಯವಾಗಿ ಭಾರತದ ಫುಟ್ಬಾಲ್ ದಂತಕಥೆ ಸುನಿಲ್ ಛೇಟ್ರಿ ಇದ್ದಾರೆ.
ಬೆಂಗಳೂರು ಎಫ್‌ಸಿ ತನ್ನ ಕೊನೆಯ ಫೈನಲ್‌ನಲ್ಲಿ ಮೋಹನ್ ಬಾಗನ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಕಂಡಿತ್ತು. ಶನಿವಾರ, ಅದೇ ಕ್ರೀಡಾಂಗಣದಲ್ಲಿ, ಎರಡೂ ತಂಡಗಳಿಗೆ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಸಿಕ್ಕಿದೆ. 'ಭಾರತದ ಅತ್ಯುತ್ತಮ ಫುಟ್‌ಬಾಲ್ ಪಂದ್ಯಗಳು' ಇಲ್ಲಿ ನಡೆಯುತ್ತವೆ ಎಂದು ಬಿಎಫ್‌ಸಿ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಹೇಳಿದ್ದಾರೆ.
ಮೋಹನ್ ಬಗಾನ್ ಈ ಐಎಸ್‌ಎಲ್‌ನಲ್ಲಿ ತವರಿನಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ ಮತ್ತು 13 ಪಂದ್ಯಗಳಲ್ಲಿ ಕೇವಲ ಆರು ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿದೆ. ಭಾರತ ತಂಡದ ಆಟಗಾರರು ಮತ್ತು ಅತ್ಯುತ್ತಮ ವಿದೇಶಿ ತಾರೆಗಳಿಂದ ತುಂಬಿರುವ ಮೋಹನ್ ಬಗಾನ್ ತಂಡವನ್ನು ತನ್ನದೇ ಆದ ಅಂಗಳದಲ್ಲಿ ಸೋಲಿಸುವುದು ಬೆಂಗಳೂರು ಎಫ್‌ಸಿಗೆ ದೊಡ್ಡ ಸವಾಲಾಗಿದೆ.












Click it and Unblock the Notifications