JioCinema Mock Auction: ಅಣಕು ಹರಾಜಿನಲ್ಲಿ ₹18.5 ಕೋಟಿ ಬೆಲೆಗೆ ಆರ್‌ಸಿಬಿ ಸೇರಿದ ಆಸ್ಟ್ರೇಲಿಯಾ ವೇಗಿ!
2024ರ ಐಪಿಎಲ್ ಹರಾಜಿಗೆ ಕ್ಷಣ ಗಣನೆ ಆರಂಭವಾಗಿದೆ. ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ ಹರಾಜು ನಡೆಯಲಿದ್ದು, ಮಧ್ಯಾಹ್ನ 2.30ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಅದಕ್ಕೂ ಮುನ್ನ ಜಿಯೋ ಸಿನಿಮಾದಲ್ಲಿ ಸೋಮವಾರ ಅಣಕು ಹರಾಜು ನಡೆಸಲಾಯಿತು.
ಆರ್ ಸಿಬಿ ಫ್ರಾಂಚೈಸಿ ಮಾಜಿ ನಿರ್ದೇಶಕ ಮೈಕ್ ಹಸ್ಸಿ ಆರ್ ಸಿಬಿ ತಂಡವನ್ನು ಪ್ರತಿನಿಧಿಸಿದರೆ, ಸುರೇಶ್ ರೈನಾ ಸಿಎಸ್‌ಕೆ, ಇಯಾನ್ ಮೋರ್ಗನ್ ಸನ್‌ರೈಸಸ್ ಹೈದರಾಬಾದ್, ಪಾರ್ಥೀವ್ ಪಟೇಲ್ ಗುಜರಾತ್ ಟೈಟನ್ಸ್, ರಾಬಿನ್ ಉತ್ತಪ್ಪ ಕೆಕೆಆರ್ ತಂಡವನ್ನು ಪ್ರತಿನಿಧಿಸಿದರು. ಆಕಾಶ್ ಚೋಪ್ರಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರತಿನಿಧಿಯಾಗಿ ಅಣಕು ಹರಾಜಿನಲ್ಲಿ ಭಾಗವಹಿಸಿದರು.

ಅನಿಲ್ ಕುಂಬ್ಳೆ ಮುಂಬೈ ಇಂಡಿಯನ್ಸ್ ತಂಡದ ಪ್ರತಿನಿಧಿಯಾಗಿ ಅಣಕು ಹರಾಜಿನಲ್ಲಿ ಭಾಗವಹಿಸಿದ್ದರು. ಅಣಕು ಹರಾಜಿನಲ್ಲಿ ಆಸ್ಟ್ರೇಲಿಯಾ ವೇಗಿ ಅತ್ಯಧಿಕ ಬೆಲೆಗೆ ಹರಾಜಾಗುವ ಮೂಲಕ ಅಚ್ಚರಿ ಮೂಡಿಸಿದರು.
ಆರ್‌ಸಿಬಿ ಸೇರಿದ ಆಸ್ಟ್ರೇಲಿಯಾ ವೇಗಿ!
ಮಿಚೆಲ್ ಸ್ಟಾರ್ಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಎಲ್ಲಾ ತಂಡಗಳು ಮುಗಿಬಿದ್ದವು, ಆದರೆ ಆರ್ ಸಿಬಿ ಮಾಜಿ ನಿರ್ದೇಶಕ ಮೈಕ್ ಹಸನ್ 18.5 ಕೋಟಿ ರೂಪಾಯಿ ಬಿಡ್ ಮಾಡುವ ಮೂಲಕ ಅವರನ್ನು ಆರ್ ಸಿಬಿ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಗೆರಾಲ್ಡ್ ಕೊಯೆಟ್ಜೆ ಅವರನ್ನು ಗುಜರಾತ್ ಟೈಟನ್ಸ್ ತಂಡದ ಪ್ರತಿನಿಧಿ ಪಾರ್ಥೀವ್ ಪಟೇಲ್ 18 ಕೋಟಿ ರೂಪಾಯಿಗೆ ಬಿಡ್ ಮಾಡುವ ಮೂಲಕ ತಂಡಕ್ಕೆ ಸೇರ್ಪಡೆಯಾದರು.
ಇನ್ನು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ 17.50 ಕೋಟಿ ರೂಪಾಯಿಗೆ ಹರಾಜಾದರು. ಆಲ್‌ರೌಂಡರ್ ಶಾರ್ದೂಲ್ ಠಾಕೂರ್ 14 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದರು. ಶ್ರೀಲಂಕಾದ ವೇಗದ ಬೌಲರ್ ದಿಲ್ಷನ್ ಮಧುಶಂಕ 10.50 ಕೋಟಿ ರೂಪಾಯಿಗೆ ಕೆಕೆಆರ್ ತಂಡಕ್ಕೆ ಸೇರಿದರು.
ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ 9.50 ಕೋಟಿ ರೂಪಾಯಿಗೆ ಗುಜರಾತ್ ಟೈಟನ್ಸ್ ತಂಡವನ್ನು ಸೇರಿದರೆ, ಶ್ರೀಲಂಕಾ ಆಲ್‌ರೌಂಡರ್ ವನಿಂದು ಹಸರಂಗ 8.50 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿದರು.
ಆಸ್ಟ್ರೇಲಿಯಾದ ಆರಂಭಿಕ ಆಟಗಾರ 7.5 ಕೋಟಿ ರೂಪಾಯಿಗೆ ಸಿಎಸ್‌ಕೆ ತಂಡಕ್ಕೆ ಸೇರ್ಪಡೆಯಾದರು. ಅಚ್ಚರಿ ಎನ್ನುವಂತೆ ಅಣಕು ಹರಾಜಿನಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಸ್ಟೀವ್ ಸ್ಮಿತ್ ಅವರನ್ನು ಖರೀದಿಸಲು ಯಾರೂ ಕೂಡ ಮುಂದೆ ಬರಲಿಲ್ಲ. ಅವರು ಹರಾಜಾಗದೆ ಉಳಿದುಕೊಂಡರು.
ಇದು ಕೇವಲ ಅಣಕು ಹರಾಜಾಗಿದ್ದು ಮಾಜಿ ಕ್ರಿಕೆಟಿಗರು ಇದರಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದ್ದಲ್ಲದೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಡಿ.19ರಂದು ಯಾವ ಆಟಗಾರರು ಹೆಚ್ಚಿನ ಬೆಲೆಗೆ ಹರಾಜಾಗಬಹುದು ಎಂದು ಅಂದಾಜಿಸಿದ್ದಾರೆ. ಎಲ್ಲಾ ಕುತೂಹಲ, ಪ್ರಶ್ನೆಗಳಿಗೆ ಡಿ.19ರಂದು ಉತ್ತರ ಸಿಗಲಿದೆ.












Click it and Unblock the Notifications