Mitchell Santner: ವೈಭವ್ ಸೂರ್ಯವಂಶಿ ಕಟ್ಟಿಹಾಕಲು ನ್ಯೂಜಿಲೆಂಡ್ ಬಿಗ್ ಪ್ಲಾನ್; ಕಿವೀಸ್ ನಾಯಕನ ಹೇಳಿಕೆ ಭಾರಿ ವೈರಲ್

India Vs New Zealand T20: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಟಿ20ಐ ಸರಣಿಯು ಗುರುವಾರದಿಂದ ಅಂದರೆ ಅಕ್ಟೋಬರ್ 22ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಕಟ್ಟಿಹಾಕಲು ಕಿವೀಸ್ ಪಡೆ ಯಾವ ರೀತಿ ಸಿದ್ಧತೆ ನಡೆಸಿದೆ ಎನ್ನುವ ಮಾಹಿತಿಯನ್ನು ಮಿಚೆಲ್ ಸ್ಯಾಂಟ್ನರ್ ಬಿಚ್ಚಿಟ್ಟಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಟಿ20ಐ ಸರಣಿಯು ಗುರುವಾರದಿಂದ (ಅಕ್ಟೋಬರ್ 22) ಆರಂಭವಾಗಲಿದೆ. ಇದಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಭಾರತೀಯ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ. ಟೋಮ್ ಇಂಡಿಯಾ ಪ್ಲೇಯಿಂಗ್ 11ನಲ್ಲಿ 15 ವರ್ಷದ ಎಡಗೈ ಬ್ಯಾಟರ್ ವೈಭವ್‌ಗೆ ಅವಕಾಶ ಸಿಕ್ಕರೆ, ಅವರನ್ನು ಕಟ್ಟಿಹಾಕಲು ನಮ್ಮ ಪಡೆ ಈಗಾಗಲೇ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

Mitchell Santner Reveals New Zealand s Plan to Stop Vaibhav Sooryavanshi Ahead of T20I Series

ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಹೇಳಿದ್ದೇನು?

ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ ಮತ್ತು ನಂತರದ ಸರಣಿಗಳಲ್ಲಿ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದ್ದರಿಂದ ವೈಭವ್‌ಗೆ ಖಾಯಂ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಸರಣಿಯಲ್ಲಿ ಅಥವಾ ಮುಂದಿನ ದಿನಗಳಲ್ಲಿ ಭಾರತ ತಂಡದ ಪರ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಸ್ಯಾಂಟ್ನರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೈಭವ್ ಕಟ್ಟಿಹಾಕಲು ನ್ಯೂಜಿಲೆಂಡ್ ಸಕಲ ಸಿದ್ಧತೆ

'ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಎಷ್ಟು ಅಪಾಯಕಾರಿ ಹಾಗೂ ಅಗ್ರೆಸಿವ್ ಬ್ಯಾಟರ್ ಎಂಬುದನ್ನು ನಾವು ನೋಡಿದ್ದೇವೆ. ಅಭಿಷೇಕ್ ಶರ್ಮಾ ಕೂಡ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ವೈಭವ್‌ಗೆ ಈ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕರೆ, ಅವರನ್ನು ಕಂಟ್ರೋಲ್ ಮಾಡುವುದು ಎದುರಾಳಿಗಳಿಗೆ ಕಷ್ಟವಾಗುತ್ತದೆ. ಇಂಗ್ಲೆಂಡ್ ಪ್ರವಾಸದ ವೇಳೆ ಭಾರತೀಯ ಬ್ಯಾಟರ್‌ಗಳಿಗೆ ಬೌನ್ಸರ್ ಹಾಗೂ ಶಾರ್ಟ್ ಪಿಚ್ ಬೌಲಿಂಗ್ ಮೂಲಕ ಸವಾಲು ಒಡ್ಡಲಾಗಿತ್ತು. ನಾವು ಕೂಡ ಐಪಿಎಲ್‌ನಲ್ಲಿ ಅವರ ಆಟವನ್ನು ವಿಶ್ಲೇಷಿಸಿದ್ದು, ಇದೀಗ ಅವರ ವಿರುದ್ಧ ಬೌಲಿಂಗ್ ಮಾಡಲು ಯೋಜನೆ ರೂಪಿಸಿದ್ದೇವೆ,' ಎಂದು ಸ್ಯಾಂಟ್ನರ್ ಹೇಳಿದ್ದಾರೆ.

ಭುವನೇಶ್ವರ್ ಕಮ್‌ಬ್ಯಾಕ್‌ ಬಗ್ಗೆ ಸ್ಯಾಂಟ್ನರ್ ಹೇಳಿದ್ದೇನು?

ಸುಮಾರು 4 ವರ್ಷಗಳ ಬಳಿಕ ಭಾರತ ಟಿ20 ತಂಡಕ್ಕೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮರಳಿರುವ ಬಗ್ಗೆ ಸ್ಯಾಂಟ್ನರ್ ಪ್ರತಿಕ್ರಿಯಿಸಿದ್ದಾರೆ. 'ನ್ಯೂಜಿಲೆಂಡ್‌ನ ಪಿಚ್ ಮತ್ತು ವಾತಾವರಣದಲ್ಲಿ ಭುವನೇಶ್ವರ್ ಕುಮಾರ್ ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡಲು ಅನುಕೂಲಕರವಾಗಿದೆ. ಭಾರತದ ಫ್ಲ್ಯಾಟ್ ಪಿಚ್‌ಗಳಲ್ಲೇ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಅವರಿಗೆ, ಇಲ್ಲಿ ಇನ್ನೂ ಹೆಚ್ಚು ಸಹಾಯಕ ಆಗಲಿದೆ. ನಮಗೆ ಹೊಸ ಚೆಂಡಿನಲ್ಲಿ ಅವರ ಬೌಲಿಂಗ್ ಎದುರಿಸುವುದು ದೊಡ್ಡ ಸವಾಲು,' ಎಂದು ಹೇಳಿದರು.

ನ್ಯೂಜಿಲೆಂಡ್‌ನ ವಾತಾವರಣ ಮತ್ತು ಪಿಚ್‌ಗಳು ಬೌಲರ್‌ಗಳಿಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ವಾತಾವರಣ ಕ್ಷಣಾರ್ಧದಲ್ಲಿ ಬದಲಾಗುವುದರಿಂದ ಪರಿಸ್ಥಿತಿಗೆ ತಕ್ಕಂತೆ ಆಡಬೇಕಾಗುತ್ತದೆ. ಭಾರತೀಯ ಬ್ಯಾಟರ್‌ಗಳು ಪ್ರಪಂಚದಾದ್ಯಂತ ವೇಗದ ಮತ್ತು ಬೌನ್ಸ್ ಪಿಚ್‌ಗಳಲ್ಲಿ ಆಡಿದ ಅನುಭವ ಹೊಂದಿದ್ದು, ಈ ಸರಣಿಯು ಎರಡೂ ತಂಡಗಳಿಗೆ ಅತ್ಯಂತ ರೋಚಕ ಮತ್ತು ಕಠಿಣ ಸವಾಲಾಗಿರಲಿದೆ ಎಂದು ಕಿವೀಸ್ ನಾಯಕ ಹೇಳಿದ್ದಾರೆ. ಒಟ್ಟಿನಲ್ಲಿ ಮಿಚೆಲ್ ಸ್ಯಾಂಟ್ನರ್ ಅವರು ವೈಭವ್ ಸೂರ್ಯವಂಶಿ ಬಗ್ಗೆ ನೀಡಿದ ಹೇಳಿಕೆ ಇದೀಗ ಭಾರೀ ವೈರಲ್ ಆಗುತ್ತಿದೆ. ಒಂದು ವೇಳೆ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕರೆ ವೈಭವ್ ಅಭಿಮಾನಿಗಳ ನಿರೀಕ್ಷೆಯನ್ನು ನಿಜ ಮಾಡಲಿದ್ದಾರೆಯಾ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+