ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೀಮ್ ಇಂಡಿಯಾದಲ್ಲಿ ತಂಡದಲ್ಲಿ ಒಬ್ಬರೇ ಮಹಿಳಾ ಸಿಬ್ಬಂದಿ! ಯಾರಿವಳು?

|
Google Oneindia Kannada News

ನವದೆಹಲಿ, ಅಕ್ಟೋಬರ್ 14: ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮುಂಬರುವ ಟಿ-20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾ ತಲುಪಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಒಟ್ಟು 16 ಬ್ಯಾಕ್ ರೂಂ ಸಿಬ್ಬಂದಿ ಕೂಡ ಮಿಷನ್ ಮೆಲ್ಬೋರ್ನ್‌ಗಾಗಿ ಆಸ್ಟ್ರೇಲಿಯಾ ತಲುಪಿದ್ದಾರೆ. ಇವರಲ್ಲಿ ಒಬ್ಬರೇ ಒಬ್ಬರು ಮಹಿಳಾ ಸಿಬ್ಬಂದಿ ಇದ್ದಾರೆ. ಆಕೆಯ ಹೆಸರು ರಾಜಲಕ್ಷ್ಮಿ ಅರೋರಾ.

ಮುಂಬರುವ ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಲುಪಿದೆ. 14 ಆಟಗಾರರು ಸೇರಿದಂತೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಒಟ್ಟು 16 ಬ್ಯಾಕ್ ರೂಂ ಸಿಬ್ಬಂದಿ ಕೂಡ 'ಮಿಷನ್ ಮೆಲ್ಬೋರ್ನ್'ಗಾಗಿ ಆಸ್ಟ್ರೇಲಿಯಾ ತಲುಪಿದ್ದಾರೆ. ಭಾರತದ ಮೊದಲ ಅಧಿಕೃತ ಅಭ್ಯಾಸ ಸೆಷನ್ ಶನಿವಾರ ನಡೆಯಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. ಗುರುವಾರ ಬೆಳಗ್ಗೆ ಬಿಸಿಸಿಐ ಟೀಮ್ ಇಂಡಿಯಾ ಮತ್ತು ಎಲ್ಲಾ ಬ್ಯಾಕ್‌ರೂಮ್ ಸಿಬ್ಬಂದಿಯ ಗ್ರೂಪ್‌ ಫೋಟೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಳ್ಳಲಾಗಿದೆ.

Meet Raj Laxmi Arora: Team India has only one female staff in the team

ರಾಜಲಕ್ಷ್ಮಿ ಅರೋರಾ ಯಾರು?
ಈ ಬ್ಯಾಕ್ ರೂಂ ಸಿಬ್ಬಂದಿಯಲ್ಲಿ ಒಬ್ಬರೇ ಮಹಿಳಾ ಸದಸ್ಯರು ಇದ್ದಾರೆ. ಆಕೆಯ ಹೆಸರು ರಾಜಲಕ್ಷ್ಮಿ ಅರೋರಾ. ಭಾರತೀಯ ಆಟಗಾರರು ಮತ್ತು ಅವರ ಅಭಿಮಾನಿಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವಲ್ಲಿ ರಾಜಲಕ್ಷ್ಮಿ ಪ್ರಮುಖ ಪಾತ್ರ ವಹಿಸುತ್ತಾರೆ. ರಾಜಲಕ್ಷ್ಮಿ ಅರೋರಾ ಅವರ ಇನ್ನೊಂದು ಕೆಲಸ ಬಹಳ ಮುಖ್ಯ. ಯಾವುದೇ ಸರಣಿಗೂ ಮುನ್ನ ಟೀಂ ಇಂಡಿಯಾ ಆಟಗಾರರು ಮತ್ತು ಮಾಧ್ಯಮಗಳ ನಡುವಿನ ಸಂವಾದಕ್ಕೆ ಸಂಬಂಧಿಸಿದ ಕೆಲಸವನ್ನು ರಾಜಕಾಲಕ್ಷ್ಮಿ ನಿರ್ವಹಿಸುತ್ತಾರೆ. 2019ರಲ್ಲಿ ರಾಜಲಕ್ಷ್ಮಿ ಅರೋರಾ ಅವರನ್ನು ಬಿಸಿಸಿಐನ ಆಂತರಿಕ ದೂರುಗಳ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಇದು ಆಟಗಾರರ ಅನುಚಿತ ವರ್ತನೆಯಂತಹ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಿತು.

Meet Raj Laxmi Arora: Team India has only one female staff in the team

ಟೀಂ ಇಂಡಿಯಾ ಅಕ್ಟೋಬರ್ 17 ರಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಮತ್ತು ಅಕ್ಟೋಬರ್ 19ರಂದು ನ್ಯೂಜಿಲೆಂಡ್ ವಿರುದ್ಧ ಎರಡನೇ ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ವಿಶ್ವಕಪ್ ತಂಡದಲ್ಲಿ 6-7 ಆಟಗಾರರು ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುತ್ತಿದ್ದಾರೆ, ಆದ್ದರಿಂದ ಅವರು ಹೆಚ್ಚು ಹೆಚ್ಚು ಸಮಯ ಕಳೆಯಲು ಮತ್ತು ಅಲ್ಲಿನ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಬಯಸುತ್ತಾರೆ ಎಂದು ಕೋಚ್ ದ್ರಾವಿಡ್ ಮತ್ತು ನಾಯಕ ರೋಹಿತ್ ಕೂಡ ಈ ಬಗ್ಗೆ ಹೇಳಿದ್ದರು.

English summary
Meet Raj Laxmi Arora: Team India has only one female staff in the team! Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X