Mayank Yadav: ಫಿಟ್ನೆಸ್ ಹಾಗೂ ವೇಗದ ದಾಳಿಯ ಹಿಂದಿನ ಗುಟ್ಟನ್ನು ರಟ್ಟು ಮಾಡಿದ ಮಯಾಂಕ್ ಯಾದವ್
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸದ್ದು ಮಾಡುತ್ತಿರುವ ಯುವ ಆಟಗಾರ ಲಖ್ನೋ ಸೂಪರ್ ಜೈಂಟ್ಸ್ ತಂಡದ ಮಯಾಂಕ್ ಯಾದವ್. ತಾವು ಆಡುತ್ತಿರುವ ಮೊದಲ ಐಪಿಎಲ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಎಲ್ಲರ ಬಾಯಲ್ಲಿ ಇವರ ಹೆಸರು ಕೇಳಿ ಬರುತ್ತಿದೆ.
ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸುತ್ತಿರುವ ಮಯಾಂಕ್ ಯಾದವ್ ತಮ್ಮ ಮೇಲೆ ಲಖ್ನೋ ಸೂಪರ್ ಜೈಂಟ್ಸ್ ತಂಡ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ, ಗಂಟೆಗೆ 155.6 ಕಿಲೋಮೀಟರ್ ವೇಗದಲ್ಲಿ ದಾಳಿ ನಡೆಸಿ ಋತುವಿನ ಅತ್ಯಂತ ವೇಗದ ಬಾಲ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಅವರು RCB ವಿರುದ್ಧದ ಎರಡನೇ ಪಂದ್ಯದಲ್ಲಿ 156.7 ವೇಗದಲ್ಲಿ ದಾಳಿ ಮಾಡಿ ತಮ್ಮ ದಾಖಲೆ ಉತ್ತಮ ಗೊಳಿಸಿಕೊಂಡಿದ್ದಾರೆ. ತಾವು ನೀಡುತ್ತಿರುವ ಪ್ರದರ್ಶನದ ಹಿಂದಿನ ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಸೆಕೆಡಂ ಇನ್ನಿಂಗ್ಸ್ ವಿತ್ ಮಂಜೋತ್ ಕಾರ್ಯಕ್ರಮದಲ್ಲಿ ಮಯಾಂಕ್ ಈ ಬಗ್ಗೆ ಮಾತನಾಡಿದ್ದಾರೆ.

ವೇಗದ ದಾಳಿಯ ಹಿಂದಿನ ಗುಟ್ಟೇನು?
ವಿದೇಶಿ ಬೌಲರ್‌ಗಳಿಗೆ ಹೋಲಿಸಿದರೆ, ಭಾರತೀಯ ವೇಗದ ಬೌಲರ್‌ಗಳಿಗೆ ವೇಗದ ದಾಳಿ ನಡೆಸುವುದ ಕಷ್ಟ. ಭಾರತೀಯ ಆಟಗಾರರ ವೇಗವು ಅತ್ಯುತ್ತಮ ತಂತ್ರದಿಂದ ಬಂದಿದೆ, ವೇಗದ ಚೆಂಡನ್ನು ಬೌಲ್ ಮಾಡಲು ನೀವು ರನ್ಅಪ್, ಮಣಿಕಟ್ಟಿನ ಫ್ಲಿಕ್ ಬಗ್ಗೆ ಸಾಕಷ್ಟು ಗಮನ ಹರಿಸಬೇಕು. ಅದೇ ಸಮಯದಲ್ಲಿ, ಆಹಾರ ಮತ್ತು ಜಿಮ್ ಹೊರತುಪಡಿಸಿ, ಫಿಟ್ನೆಸ್ನಲ್ಲಿ ಪ್ರಮುಖ ವಿಷಯವೆಂದರೆ ನಿದ್ರೆ. ಉತ್ತಮ ಫಿಟ್ನೆಸ್‌ಗೆ ನಿದ್ರೆ ಬಹು ಮುಖ್ಯ.
ಮಯಾಂಕ್ ಕ್ರಿಕೆಟ್‌ಗಾಗಿ ಶಾಲೆಯನ್ನು ಬಿಡಬೇಕಾಯಿತು. ಮೊದಲ ಬಾರಿಗೆ ಹರಾಜಿನಲ್ಲಿ ಅವರನ್ನು ಯಾವ ಫ್ರಾಂಚೈಸಿಗಳು ಖರೀದಿಸಲಿಲ್ಲ. ಮಯಾಂಕ್ ತಮ್ಮ ಛಾಪನ್ನು ಮೂಡಿಸುವಲ್ಲಿ ಅವರು ಅಂಡರ್‌೧೯ ಕೂಚ್ ಬೆಹಾರ್ ಕ್ರಿಕೆಟ್ ಟೂರ್ನಿಯನ್ನು ವೇದಿಕೆ ಮಾಡಿಕೊಂಡರು. ಈ ಟೂರ್ನಿಯಲ್ಲಿ ಅವರು ಆಡಿದ ನಾಲ್ಕು ಪಂದ್ಯಗಳಲ್ಲಿ ಒಟ್ಟು 19 ವಿಕೆಟ್ ಪಡೆದಿದ್ದಾರೆ. ಆರಂಭದಲ್ಲಿ ಮಯಾಂಕ್ ಯಾರ್ಕರ್ ಅಥವಾ ಬೌನ್ಸರ್ 2 ಎಸೆತಗಳನ್ನು ಮಾತ್ರ ಬೌಲ್ ಮಾಡುತ್ತಿದ್ದರು.
ಯಾವ ರಾಜ್ಯದ ಪರ ರಣಜಿ ಆಡುತ್ತಾರೆ ಮಯಾಂಕ್
ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಯಾರ್ಕರ್ ಹಾಗೂ ಬೌನ್ಸರ್ ಬೌಲ್ ಮಾಡಿದ್ದು, ಅಷ್ಟಾಗಿ ಯಶಸ್ಸು ಸಿಗಲಿಲ್ಲ. ಲೆಂಗ್ತ್ ಬಾಲ್ ಅನ್ನು ಹೇಗೆ ಬೌಲ್ ಮಾಡಬೇಕೆಂದು ನನಗೆ ತಿಳಿದಿರಲಿಲ್ಲ. ಈ ಬೌಲ್ ಮಾಡುವುದು ಹೇಗೆ ಎಂಬುದನ್ನು ಅರಿತು ಬೌಲ್ ಮಾಡಲು ಶುರು ಮಾಡಿದೆ. ಮತ್ತು ವಿಕೆಟ್ ಪಡೆಯುತ್ತಲೇ ಇದ್ದೆ.

ಮಯಾಂಕ್ ಕೂಚ್ ಬೆಹಾರಿನಲ್ಲಿ ನೀಡಿದ ಪ್ರದರ್ಶನದ ಫಲವಾಗಿ ಅವರಿಗೆ ರಣಜಿ ತಂಡದಿಂದ ಕರೆ ಬಂದಿತು. ರಣಜಿ ಟ್ರಯಲ್ಸ್ ಸ್ಥಿರ ಪ್ರದರ್ಶನ ನೀಡಿದ್ದೆ. ಇದೇ ವೇಳೆ ಸರ್ವಿಸ್ ತಂಡದಿಂಲೂ ಆಯ್ಕೆ ಟ್ರಯಲ್ಸ್‌ಗೆ ಕಾಲ್ ಬಂದಿತ್ತು. ಅಲ್ಲಿ ಟ್ರಯಲ್ಸ್ ನೀಡಿ ಬಂದಿದ್ದೆ. ಕೊನೆಗೆ ದೆಹಲಿ ತಂಡದಿಂದ ಹಾಗೂ ಸರ್ವಿಸಸ್ ತಂಡದಿಂದ ನನಗೆ ಅವಕಾಶ ಲಭಿಸಿತು. ನಾನು ರಾಜ್ಯ ತಂಡವನ್ನೇ ಆಯ್ಕೆ ಮಾಡಿಕೊಂಡೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನನಗೆ ದೆಹಲಿಯಿಂದ ಮೊದಲ ಅವಕಾಶ ಸಿಕ್ಕಿತು. ಇಲ್ಲಿಂದ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಿಕ್ಕ ಅವಕಾಶದಲ್ಲಿ ಎರಡು ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದೇನೆ. ಕೊನೆಗೂ ದೆಹಲಿ ಪರ ರಣಜಿ ಆಡುವ ಅವಕಾಶ ಸಿಕ್ಕಿತು ಎಂದು ತಮ್ಮ ಯಶಸ್ಸಿ ಮಂತ್ರ ಹಾಗೂ ತಾವು ನಡೆದು ಬಂದ ದಾರಿಯನ್ನು ಬಿಚ್ಚಿಟ್ಟಿದ್ದಾರೆ.












Click it and Unblock the Notifications