Pakistan VS Afghanistan: ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ತಾ ಪಾಕಿಸ್ತಾನ?

ಪಾಕಿಸ್ತಾನ ಎಂಬ ಹೆಸರಲ್ಲೇ ಅನುಮಾನ ಬೆರೆತು ಹೋಗಿದೆ ಅಂತಾ ಕಾಣುತ್ತೆ. ಅದರಲ್ಲೂ ಪಾಕಿಸ್ತಾನ ಕ್ರಿಕೆಟ್ ತಂಡ ಏನೇ ಮಾಡಿದ್ರೂ ಅನುಮಾನ ಕಾಡದೇ ಇರೋದಿಲ್ಲ. ಈಗಲೂ ಅದೇ ಆಗಿದ್ದು, ಅಫ್ಘಾನಿಸ್ತಾನ ವಿರುದ್ಧ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಬಗ್ಗೆ ಆರೋಪಗಳು ಸ್ಫೋಟಗೊಂಡಿವೆ. ಹಾಗಾದರೆ ಈ ಪಂದ್ಯದಲ್ಲಿ ಆಗಿದ್ದು ಏನು?

ಕ್ರಿಕೆಟ್ ಅಂದ್ರೆ ಶಿಸ್ತು ಹಾಗೂ ಶಿಸ್ತಿಗೆ ಮತ್ತೊಂದು ಹೆಸರು ಕ್ರಿಕೆಟ್ ಅಂದರೂ ಅತಿಶಯೋಕ್ತಿ ಅನಿಸೋದಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ಪಾಕ್‌ನ ಆಟಗಾರರು ಅಶಿಸ್ತನ್ನೇ ಬಂಡವಾಳ ಮಾಡಿಕೊಂಡಂತೆ ಕಾಣುತ್ತಿದೆ. ಅದರಲ್ಲೂ ಕೈಗೆ ಸಿಕ್ಕ ಬಾಲ್‌ಗಳನ್ನ ಕೈಬಿಡೋದು, ಮತ್ತೆ ಕ್ಯಾಚ್‌ಗಳನ್ನೂ ಕೈಚೆಲ್ಲಿದ್ದು ಇದೀಗ ಹೊಸ ಅನುಮಾನಕ್ಕೆ ಕಾರಣವಾಗಿದೆ. ಪಾಕ್ ಟೀಂನ ಆಟಗಾರರು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡ ಬಗ್ಗೆ ಆರೋಪ ಕೇಳಿಬಂದಿದೆ.

Match Fixing allegation against Pakistan Cricket team in social media

ಮ್ಯಾಚ್ ಫಿಕ್ಸಿಂಗ್ ಮಾಡಿತಾ ಪಾಕಿಸ್ತಾನ?

ಅಂದಹಾಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಅದ್ರಲ್ಲೂ ಅಫ್ಘಾನಿಸ್ತಾನ ವಿರುದ್ಧ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹೀನಾಯವಾಗಿ ಫೀಲ್ಡಿಂಗ್ ಮಾಡುತ್ತಿದೆ. ಹೀಗೆ ಪಾಕಿಸ್ತಾನದ ಕ್ರೇತ್ರರಕ್ಷಣೆ ನೋಡಿದ ಕ್ರಿಕೆಟ್ ಅಭಿಮಾನಿಗಳು ಸಿಕ್ಕಾಪಟ್ಟೆ ಅನುಮಾನ ವ್ಯಕ್ತಪಡಿಸಿದ್ದು, ಪಾಕ್ ಕ್ರಿಕೆಟ್ ಟೀಂ ಈ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ಯಾ? ಎಂದು ಪ್ರಶ್ನೆ ಮಾಡ್ತಿದ್ದಾರೆ. ಅಲ್ಲದೆ, ಪಾಕಿಸ್ತಾನ ಆಟಗಾರರ ಫೀಲ್ಡಿಂಗ್ ನೋಡಿದರೆ ಅನುಮಾನ ಮೂಡುವುದು ಕೂಡ ಸಹಜ ಅಂತಿದ್ದಾರೆ.

ಸೋಷಿಯಲ್ ಮೀಡಿಯಾ ತಾಣ ಟ್ವಿಟ್ಟರ್ ಅಂದರೆ ಈಗಿನ ಎಕ್ಸ್ ಜಾಲತಾಣದಲ್ಲಿ ಫ್ಯಾನ್ಸ್ ವೆರೈಟಿ ವೆರೈಟಿ ಟ್ವೀಟ್ ಮಾಡಿ, ಪಾಕಿಸ್ತಾನದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅರೆರೆ ಅಭಿಮಾನಿಗಳು ಹೇಳ್ತಾ ಇರೋದು ಏನು ಅಂದ್ರಾ? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಇದರಿಂದ ಏನೆಲ್ಲಾ ಸಮಸ್ಯೆ ಆಗುತ್ತೆ?

ಒಟ್ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಭರ್ಜರಿ ಚರ್ಚೆಯೊಂದು ಶುರುವಾಗಿದೆ. ಅಲ್ಲದೆ ಪಾಕಿಸ್ತಾನ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೂಡ ಕೇಳಿಬಂದಿದೆ. ಆದರೆ ಈ ಆರೋಪಗಳಿಗೆ ಇನ್ನೂ ಸಾಕ್ಷ್ಯ ಸಿಕ್ಕಿಲ್ಲ, ಹೀಗಾಗಿ ಪಾಕಿಸ್ತಾನ ತಂಡ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಆದ್ರೆ ಅಕಸ್ಮಾತ್ ಈ ಆರೋಪ ನಿಜವಾಗಿ ಆಟಗಾರರು ಲಾಕ್ ಆಗಿದ್ದೇ ನಿಜವಾದರೆ, ಪಾಕಿಸ್ತಾನ ತಂಡಕ್ಕೆ ಹೊಸ ಆಘಾತ ಎದುರಾಗಿ ಸಮಸ್ಯೆ ಉಂಟಾಗುವುದು ಗ್ಯಾರಂಟಿ.

ಇತ್ತೀಚಿನ ಮಾಹಿತಿ ಪ್ರಕಾರ ಅಫ್ಘಾನಿಸ್ತಾನ ತಂಡ ಒಟ್ಟು 189 ರನ್ ಗಳಿಸಿ ಕೇವಲ ಒಂದೇ ಒಂದು ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಒಟ್ಟು 53 ಬಾಲ್‌ಗಳಲ್ಲಿ 65 ರನ್ ಗಳಿಸಿ ಔಟಾಗಿದ್ದಾರೆ. ಇದೀಗ ಮತ್ತೊಬ್ಬ ಓಪನರ್, ಇಬ್ರಾಹಿಂ ಜದ್ರಾನ್ 87 ರನ್ ಗಳಿಸಿ ಆಟವಾಡುತ್ತಿದ್ದಾರೆ. ಹಾಗೇ ಇಬ್ರಾಹಿಂ ಜದ್ರಾನ್‌ಗೆ ರಹಮತ್ ಶಾ, ಸಾಥ್ ನೀಡಿ ಆಟವಾಡುತ್ತಿದ್ದಾರೆ. ಈ ಮೂಲಕ ಪಾಕಿಸ್ತಾನ ನೀಡಿರುವ ಸವಾಲಿನ ಮೊತ್ತ ಛಿದ್ರ ಮಾಡುವ ಹುಮ್ಮಸ್ಸಿನಲ್ಲಿದೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+