Paris Olympics 2024: ಐತಿಹಾಸಿಕ ಸಾಧನೆ ಮಾಡಿದ ಮನು ಬಾಕರ, ಸರಬ್ ಜೋತ್ , ಭಾರತಕ್ಕೆ ಎರಡನೇ ಕಂಚು

ಭಾರತ ಹಾಗೂ ದಕ್ಷಿಣ ಕೊರಿಯಾ ನಡುವಣ ನಡೆದ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಬಾಚಿಕೊಂಡ ಮನು ಬಾಕರ್‌, ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇಬ್ಬರೂ ಹರಿಯಾಣ ಮೂಲದ ಶೂಟರ್‌ಗಳು ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈಗಾಗಲೇ ಮಹಿಳೆಯ 10 ಮೀಟರ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಕಂಚು ಗೆದ್ದಿದ್ದ ಮನು ಬಾಕರ್‌, ಮಿಶ್ರ ತಂಡ ವಿಭಾಗದಲ್ಲೂ ಕಂಚಿಗೆ ಕೊರಳೊಡ್ಡಿದ್ದಾರೆ. ಸರಬ್ ಜೋತ್ ಸಿಂಗ್‌ ಸಹ ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಸರಬ್‌ ಜೋತ್‌ ಸಿಂಗ್ ಹಾಗೂ ಮನು ಬಾಕರ್‌ ಜೋಡಿ ಈ ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿದೆ.

Manu Bhaker Sarabjot Singh won bronze for India in the mixed team event at the 2024 Olympics

ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ

ಸ್ವಾತಂತ್ರ್ಯ ಭಾರತದ ಪೂರ್ವದಲ್ಲಿ ಬ್ರೀಟಿಷ್ ಇಂಡಿಯನ್ ಅಥ್ಲಿಟ್‌ ನೊರ್ಮನ್‌ ಪಿಚೋಡಾ 1900 ಒಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿದ್ದರು. ಇವರು 200 ಮೀಟರ್ ಓಟ ಹಾಗೂ 200 ಮೀಟರ್ ಹರ್ಡಲ್ಸ್‌ನಲ್ಲೂ ಇವರು ಬೆಳ್ಳಿ ಸಾಧನೆ ಮಾಡಿದ್ದರು. ಸ್ವಾತಂತ್ರ್ಯ ಭಾರತದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಅಥ್ಲಿಟ್‌ ಎರಡು ಪದಕ ಗೆದ್ದು ಬೀಗಿದ್ದಾರೆ.

ಮಂಗಳವಾರ ನಡೆದ 10 ಮೀಟರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಮನು ಮತ್ತು ಸರಬ್ಜೋತ್ ಜೋಡಿ 16-10ರಲ್ಲಿ ಕೊರಿಯಾವನ್ನು ಸೋಲಿಸಿತು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇದು ಎರಡನೇ ಪದಕವಾಗಿದೆ. ಮನು ಭಾಕರ್ ಕೂಡ 2 ದಿನಗಳ ಹಿಂದೆ ಮೊದಲ ಪದಕ ಗೆದ್ದಿದ್ದರು.

ಶೂಟಿಂಗ್ ನಲ್ಲಿ ಡಬಲ್ ಪದಕ

12 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಭಾರತಕ್ಕೆ ಡಬಲ್ ಪದಕ ಲಭಿಸಿದೆ. ಈ ಹಿಂದೆ ಗಗನ್ ನಾರಂಗ್ ಮತ್ತು ವಿಜಯ್ ಕುಮಾರ್ ಲಂಡನ್ ಒಲಿಂಪಿಕ್ಸ್-2012ರಲ್ಲಿ ಪದಕ ಗೆದ್ದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+