Flying Pandey: ಅದ್ಭುತ ಫೀಲ್ಡಿಂಗ್ ಮೂಲಕ ಹುಬ್ಬಳ್ಳಿ ತಂಡವನ್ನು ಚಾಂಪಿಯನ್ ಮಾಡಿದ ಮನೀಷ್ ಪಾಂಡೆ!

ಮನೀಷ್ ಪಾಂಡೆ ಮತ್ತೊಮ್ಮೆ ತಾವೊಬ್ಬ ಅದ್ಭುತ ಫಿಲ್ಡರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಅಷ್ಟೇ ಅಲ್ಲ ಫೀಲ್ಡಿಂಗ್ ಮೂಲಕವೂ ಪಂದ್ಯವನ್ನು ಗೆಲ್ಲಿಸಬಹುದು ಎನ್ನುವುದನ್ನು ಮನೀಶ್ ಪಾಂಡೆ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಅವರ ಫೀಲ್ಡಿಂಗ್ ಕೌಶಲ್ಯಕ್ಕೆ ಕ್ರಿಕೆಟ್ ಜಗತ್ತು ದಂಗಾಗಿದೆ. ಫ್ಲೈಯಿಂಗ್ ಟೈಗರ್, ಫ್ಲೈಯಿಂಗ್ ಪಾಂಡೆ ಎನ್ನುವ ಬಿರುದು ಕೂಡ ಸಿಕ್ಕಿದೆ.

ಮಹಾರಾಜ ಟ್ರೋಫಿ ಟಿ20 ಫೈನಲ್ ಪಂದ್ಯದಲ್ಲಿ ಮನೀಷ್ ಪಾಂಡೆ ಅದ್ಭುತ ಫೀಲ್ಡಿಂಗ್ ಪ್ರದರ್ಶನ ನೀಡಿದರು. ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಮತ್ತು ಮೈಸೂರು ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿದ್ದವು.

Manish Pandeys SIX Secures Victory for Hubballi Tigers in Maharaja Trophy KSCA T20 Final

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಮೈಸೂರು ವಾರಿಸರ್ಯ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 203 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಮೊಹಮ್ಮದ್ ತಾಹಾ 40 ಎಸೆತಗಳಲ್ಲಿ 7 ಬೌಂಡರಿ 4 ಸಿಕ್ಸರ್ ಸಹಿತ 72 ರನ್ ಗಳಿಸಿದರೆ, ನಾಯಕನ ಆಟವಾಡಿದ ಮನೀಷ್ ಪಾಂಡೆ 23 ಎಸೆತಗಳಲ್ಲಿ 3 ಬೌಂಡರಿ 4 ಭರ್ಜರಿ ಸಿಕ್ಸರ್ ಸಹಿತ 50 ರನ್ ಗಳಿಸಿ ಮಿಂಚಿದರು.

ಗೆಲುವಿನ ಸನಿಹ ಬಂದು ಸೋತ ಮೈಸೂರು

ಈ ಸವಾಲಿನ ಮೊತ್ತ ಬೆನ್ನತ್ತಿದೆ ಮೈಸೂರು ವಾರಿಯರ್ಸ್ ಉತ್ತಮ ಆರಂಭ ಪಡೆದುಕೊಂಡಿತು. ಎಸ್‌ಯು ಕಾರ್ತಿಕ್ 18 ಎಸೆತಗಳಲ್ಲಿ 28 ರನ್ ಗಳಿಸಿದರೆ, ರವಿಕುಮಾರ್ ಸಮರ್ಥ್ 35 ಎಸೆತಗಳಲ್ಲಿ 63 ರನ್ ಗಳಿಸಿದರು, ನಾಯಕ ಕರುಣ್ ನಾಯರ್ 20 ಎಸೆತಗಳಲ್ಲಿ 37 ರನ್ ಗಳಿಸಿದರು.

ಕೊನೆ ಓವರ್ ನಲ್ಲಿ ಮೈಸೂರು ವಾರಿಯರ್ಸ್ ಗೆಲುವಿಗೆ ಕೇವಲ 12 ರನ್‌ಗಳ ಅಗತ್ಯವಿತ್ತು. ಮನ್ವತ್ ಕುಮಾರ್ ಕೊನೆಯ ಓವರ್ ನ ಮೊದಲ ಎಸೆತದಲ್ಲೇ ಶಿವಕುಮಾರ್ ರಕ್ಷಿತ್ ಅವರ ವಿಕೆಟ್ ಪಡೆದರು. ಎರಡನೇ ಎಸೆತದಲ್ಲಿ ಮೋನಿಷ್ ರೆಡ್ಡಿ ಒಂದು ರನ್ ಗಳಿಸಿದರು, ಮೂರನೇ ಎಸೆತದಲ್ಲಿ ಜಗದೀಶ್ ಸುಚಿತ್ ಬಾರಿಸಿದ ಚಂಡು ಬೌಂಡರಿ ಗೆರೆ ದಾಟಿ ಆಚೆ ಹೋಗುವದರಲ್ಲಿತ್ತು, ಈ ಸಂದರ್ಭದಲ್ಲೇ ಮಿಂಚಿನಂತೆ ಎಗರಿದ ಮನೀಷ್ ಪಾಂಡೆ ಚೆಂಡನ್ನು ಹಿಡಿದು ಮೈದಾನಕ್ಕೆ ಎಸೆದು ತಾವು ಬೌಂಡರಿ ಗೆರೆಯಾಚೆ ಬಿದ್ದರು.

ಒಂದು ವೇಳೆ ಆ ಚಂಡನ್ನು ಮನೀಶ್ ಪಾಂಡೆ ತಡೆಯದೇ ಇದ್ದರೆ ಮೈಸೂರು ವಾರಿಯರ್ಸ್ ಸುಲಭವಾಗಿ ಪಂದ್ಯವನ್ನು ಗೆಲ್ಲುವ ಅವಕಾಶ ಇತ್ತು. ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿದ ಮೈಸೂರು ವಾರಿಯರ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕ ಮನೀಶ್ ಪಾಂಡೆ ಪಂದ್ಯದ ಉತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡರು.

ಪಾಂಡೆ ಫೀಲ್ಡಿಂಗ್ ನೋಡಿದ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ಕೂಡ ಪಾಂಡೆ ಫೀಲ್ಡಿಂಗ್ ಬಗ್ಗೆ ಕೊಂಡಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+