IPL 2025: ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ; ಉಳಿದಿರುವ ಪರ್ಸ್ ವಿವರ
ಬಹು ನಿರೀಕ್ಷಿತ ಐಪಿಎಲ್ ಮೆಗಾ ಹರಾಜಿಗೆ ಮುನ್ನ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಫ್ರಾಂಚೈಸಿಯ ನಿರ್ಧಾರಗಳು ಅಚ್ಚರಿ ಮೂಡಿಸಿದ್ದರೂ, ಕೆಲವು ನಿರೀಕ್ಷೆಗಳು ನಿಜವಾಗಿದೆ. ಎಂಎಸ್ ಧೋನಿ ಅನ್‌ಕ್ಯಾಪ್ಡ್ ಆಟಗಾರನಾಗಿ ಸಿಎಸ್‌ಕೆ ತಂಡದಲ್ಲಿ ಉಳಿಯಲಿದ್ದು 4 ಕೋಟಿ ರೂಪಾಯಿ ಪಡೆಯಲಿದ್ದಾರೆ. ರಿಷಬ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಫಾಫ್ ಡುಪ್ಲೆಸಿಸ್ ನಾಲ್ಕು ತಂಡಗಳ ನಾಯಕರನ್ನೇ ಬಿಡುಗಡೆ ಮಾಡಲಾಗಿದೆ.
ಕೆಕೆಆರ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮಾತ್ರ ಗರಿಷ್ಠ ಅವಕಾಶವಿದ್ದಂತೆ ಆರು ಆಟಗಾರರನ್ನು ಉಳಿಸಿಕೊಂಡಿವೆ. ಪಂಜಾಬ್ ಕಿಂಗ್ಸ್ ತಂಡ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದು ಉಳಿದ ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಿದ್ದು ಬರೋಬ್ಬರಿ 110.5 ಕೋಟಿ ರೂಪಾಯಿ ಪರ್ಸ್ ಉಳಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಮೆಗಾ ಹರಾಜಿಗಾಗಿ 41 ಕೋಟಿ ರೂಪಾಯಿ ಪರ್ಸ್ ಉಳಿಸಿಕೊಂಡಿದ್ದು, ಕಡಿಮೆ ಮೊತ್ತದೊಂದಿಗೆ ಹರಾಜಿಗೆ ಬರಲಿದೆ.

ಎಲ್ಲಾ ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ
-
ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರು
ವಿರಾಟ್ ಕೊಹ್ಲಿ (₹21 ಕೋಟಿ)
ರಜತ್ ಪಾಟಿದಾರ್ (₹11 ಕೋಟಿ)
ಯಶ್ ದಯಾಳ್ (₹5 ಕೋಟಿ)
ಉಳಿದಿರುವ ಆರ್‌ಟಿಎಂ: 3
ಉಳಿದಿರುವ ಪರ್ಸ್ ಮೊತ್ತ - ₹83 ಕೋಟಿ
-
ಮುಂಬೈ ಇಂಡಿಯನ್ಸ್
ಜಸ್ಪ್ರೀತ್ ಬುಮ್ರಾ (₹18 ಕೋಟಿ)
ಹಾರ್ದಿಕ್ ಪಾಂಡ್ಯ (₹16.35 ಕೋಟಿ)
ಸೂರ್ಯಕುಮಾರ್ ಯಾದವ್ (₹16.35 ಕೋಟಿ)
ರೋಹಿತ್ ಶರ್ಮಾ (₹16.30 ಕೋಟಿ)
ತಿಲಕ್ ವರ್ಮಾ (₹8 ಕೋಟಿ)
ಉಳಿದಿರುವ ಆರ್‌ಟಿಎಂ: 1
ಉಳಿದಿರುವ ಪರ್ಸ್ - ₹45 ಕೋಟಿ
-
ಚೆನ್ನೈ ಸೂಪರ್ ಕಿಂಗ್ಸ್
ರುತುರಾಜ್ ಗಾಯಕ್ವಾಡ್ (₹18 ಕೋಟಿ)
ರವೀಂದ್ರ ಜಡೇಜಾ (₹18 ಕೋಟಿ)
ಮಥೀಶ ಪತಿರಾನ (₹13 ಕೋಟಿ)
ಶಿವಂ ದುಬೆ (₹12 ಕೋಟಿ)
ಎಂಎಸ್ ಧೋನಿ (ಅನ್‌ಕ್ಯಾಪ್ಡ್. ₹ 4 ಕೋಟಿ)
ಉಳಿದಿರುವ ಆರ್‌ಟಿಎಂ: 1
ಉಳಿದಿರುವ ಪರ್ಸ್ - ₹55 ಕೋಟಿ
-
ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್)
ರಿಂಕು ಸಿಂಗ್ (₹13 ಕೋಟಿ)
ವರುಣ್ ಚಕ್ರವರ್ತಿ (₹12 ಕೋಟಿ)
ಸುನಿಲ್ ನರೈನ್ (₹12 ಕೋಟಿ)
ಆಂಡ್ರೆ ರಸೆಲ್ (₹12 ಕೋಟಿ)
ಹರ್ಷಿತ್ ರಾಣಾ (ಅನ್‌ಕ್ಯಾಪ್ಡ್, ₹ 4 ಕೋಟಿ)
ರಮಣದೀಪ್ ಸಿಂಗ್ (ಅನ್‌ಕ್ಯಾಪ್ಡ್, ₹ 4 ಕೋಟಿ)
ಉಳಿದಿರುವ ಆರ್‌ಟಿಎಂ: 0
ಉಳಿದಿರುವ ಪರ್ಸ್ - ₹51 ಕೋಟಿ
-
ರಾಜಸ್ಥಾನ ರಾಯಲ್ಸ್
ಸಂಜು ಸ್ಯಾಮ್ಸನ್ (₹18 ಕೋಟಿ)
ಯಶಸ್ವಿ ಜೈಸ್ವಾಲ್ (₹18 ಕೋಟಿ)
ರಿಯಾನ್ ಪರಾಗ್ (₹14 ಕೋಟಿ)
ಧ್ರುವ್ ಜುರೆಲ್ (₹14 ಕೋಟಿ)
ಶಿಮ್ರಾನ್ ಹೆಟ್ಮೆಯರ್ (₹11 ಕೋಟಿ)
ಸಂದೀಪ್ ಶರ್ಮಾ (ಅನ್‌ಕ್ಯಾಪ್ಡ್,₹ 4 ಕೋಟಿ)
ಉಳಿದಿರುವ ಆರ್‌ಟಿಎಂ: 0
ಉಳಿದಿರುವ ಪರ್ಸ್ - ₹41 ಕೋಟಿ
-
ಲಕ್ನೋ ಸೂಪರ್ ಜೈಂಟ್ಸ್
ನಿಕೋಲಸ್ ಪೂರನ್ (₹21 ಕೋಟಿ)
ಮಯಾಂಕ್ ಯಾದವ್ (₹11 ಕೋಟಿ)
ರವಿ ಬಿಷ್ಣೋಯ್ (₹11 ಕೋಟಿ)
ಮೊಹ್ಸಿನ್ ಖಾನ್ (ಅನ್‌ಕ್ಯಾಪ್ಡ್, ₹4 ಕೋಟಿ)
ಆಯುಷ್ ಬದೋನಿ (ಅನ್‌ಕ್ಯಾಪ್ಡ್, ₹4 ಕೋಟಿ)
ಉಳಿದಿರುವ ಆರ್‌ಟಿಎಂ: 1
ಉಳಿದಿರುವ ಪರ್ಸ್ - ₹69 ಕೋಟಿ
-
ಪಂಜಾಬ್ ಕಿಂಗ್ಸ್ (PBKS)
ಶಶಾಂಕ್ ಸಿಂಗ್ (₹5.5 ಕೋಟಿ)
ಪ್ರಭಾಸಿಮ್ರಾನ್ ಸಿಂಗ್ (₹4 ಕೋಟಿ)
ಉಳಿದಿರುವ ಆರ್‌ಟಿಎಂ: 4
ಉಳಿದಿರುವ ಪರ್ಸ್ - ₹110.5 ಕೋಟಿ
-
ಡೆಲ್ಲಿ ಕ್ಯಾಪಿಟಲ್ಸ್
ಅಕ್ಷರ್ ಪಟೇಲ್ (₹16.5 ಕೋಟಿ)
ಕುಲದೀಪ್ ಯಾದವ್ (₹13.25 ಕೋಟಿ)
ಟ್ರಿಸ್ಟನ್ ಸ್ಟಬ್ಸ್ (₹10 ಕೋಟಿ)
ಅಭಿಷೇಕ್ ಪೊರೆಲ್ (₹4 ಕೋಟಿ) - ಅನ್‌ಕ್ಯಾಪ್ಡ್
ಉಳಿದಿರುವ ಆರ್‌ಟಿಎಂ: 2
ಉಳಿದಿರುವ ಪರ್ಸ್ - ₹76.25 ಕೋಟಿ
-
ಸನ್‌ರೈಸರ್ಸ್ ಹೈದರಾಬಾದ್
ಪ್ಯಾಟ್ ಕಮ್ಮಿನ್ಸ್ (₹18 ಕೋಟಿ)
ಅಭಿಷೇಕ್ ಶರ್ಮಾ (₹14 ಕೋಟಿ)
ನಿತೀಶ್ ಕುಮಾರ್ ರೆಡ್ಡಿ (₹6 ಕೋಟಿ)
ಹೆನ್ರಿಕ್ ಕ್ಲಾಸೆನ್ (₹23 ಕೋಟಿ)
ಟ್ರಾವಿಸ್ ಹೆಡ್ (₹14 ಕೋಟಿ)
ಉಳಿದಿರುವ ಆರ್‌ಟಿಎಂ: 4
ಉಳಿದಿರುವ ಪರ್ಸ್ - ₹45 ಕೋಟಿ
-
ಗುಜರಾತ್ ಟೈಟಾನ್ಸ್
ರಶೀದ್ ಖಾನ್ (₹18 ಕೋಟಿ)
ಶುಭಮನ್ ಗಿಲ್ (₹16.5 ಕೋಟಿ)
ಸಾಯಿ ಸುದರ್ಶನ್ (₹8.5 ಕೋಟಿ)
ರಾಹುಲ್ ತೆವಾಟಿಯಾ (₹4 ಕೋಟಿ)
ಶಾರುಖ್ ಖಾನ್ (₹4 ಕೋಟಿ)
ಉಳಿದಿರುವ ಆರ್‌ಟಿಎಂ:1
ಉಳಿದಿರುವ ಪರ್ಸ್ - ₹69 ಕೋಟಿ












Click it and Unblock the Notifications