RCB ಫ್ಯಾನ್ಸ್ ಇಲ್ಲಿ ಗಮನಿಸಿ.. ಹರಾಜಿನಲ್ಲೂ ಸಿಎಸ್‌ಕೆ ತಂಡದಿಂದ ಕಳ್ಳಾಟ; ಮೋದಿಯಿಂದ ಸ್ಫೋಟಕ ಆರೋಪ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌. ಜಗತ್ತಿನ ಎಲ್ಲಾ ದೇಶಗಳ ಆಟಗಾರರು ಐಪಿಎಲ್‌ನಲ್ಲಿ ಆಡಲು ಉತ್ಸುಕರಾಗಿರುತ್ತಾರೆ, ಹೆಚ್ಚಾಗಿ ಪರಿಚಯವೇ ಇಲ್ಲದ ಆಟಗಾರನೊಬ್ಬ ರಾತ್ರೋ ರಾತ್ರಿ ಸ್ಟಾರ್ ಮಾಡುವ ಸಾಮರ್ಥ್ಯ ಐಪಿಎಲ್‌ಗಿದೆ. ಒಂದು ಐಪಿಎಲ್‌ ಆವೃತ್ತಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಯುತ್ತದೆ. ಇಂತಹ ಐಪಿಎಲ್‌ನಲ್ಲಿ ಕಳ್ಳಾಟ ನಡೆದಿರುವ ಆರೋಪ ಬಂದಿದ್ದು ಮಾತ್ರ ಕಪ್ಪುಚುಕ್ಕೆಯಾಗಿತ್ತು.

ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಇದೀಗ ಮತ್ತೊಮ್ಮೆ ಐಪಿಎಲ್‌ನಲ್ಲಿ ಸ್ಪಾಟ್‌ ಫಿಕ್ಸಿಂಗ್ ಬಗ್ಗೆ ಆರೋಪ ಮಾಡಿದ್ದಾರೆ. ಬಿಸಿಸಿಐ ಮಾಜಿ ಅಧ್ಯಕ್ಷ ಮತ್ತು ಸಿಎಸ್‌ಕೆ ತಂಡ ಮಾಲಿ ಎನ್‌ ಶ್ರೀನಿವಾಸನ್ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪ ಮಾಡಿದ್ದಾರೆ. ಫ್ಲಿಂಟಾಫ್‌ರನ್ನು ಖರೀದಿ ಮಾಡಲು ಶ್ರೀಲಂಕಾದ ತಿಸಾರಾ ಪೆರೇರಾ ಅವರನ್ನು ಕೈಬಿಡುವಂತೆ ಹೇಗೆ ಮನವಿ ಮಾಡಿದರು ಎನ್ನುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

Lalit modi alleges csk owner n srinivasan involvement in spot fixing ipl

ಹರಾಜಿನಲ್ಲೂ ಸ್ಪಾಟ್‌ ಫಿಕ್ಸಿಂಗ್‌!

ಐಪಿಎಲ್ ಪಂದ್ಯಗಳಲ್ಲಿ ಅಷ್ಟೇ ಅಲ್ಲದೆ ಹರಾಜಿನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿರುವ ಬಗ್ಗೆ ಲಲಿತ್ ಮೋದಿ ಆರೋಪಿಸಿದ್ದಾರೆ. ಶ್ರೀನಿವಾಸನ್‌ ಅವರ ಅನುಕೂಲಕ್ಕಾಗಿ ಹರಾಜು ಸಂದರ್ಭದಲ್ಲಿ ಹೇಗೆ ರಿಗ್ಗಿಂಗ್ ಮಾಡಲಾಯಿತು ಎಂದು ಲಲಿತ್ ಮೋದಿ ವಿವರಿಸಿದ್ದಾರೆ.

2013ರ ಹರಾಜು ಸಂದರ್ಭದಲ್ಲಿ ಫ್ಲಿಂಟಾಫ್‌ ಬೇಕೆಂದು ಶ್ರೀನಿವಾಸನ್‌ ಹಠ ಹಿಡಿದಿದ್ದರು. ಪ್ರತಿ ತಂಡಕ್ಕೂ ಅದು ತಿಳಿದಿತ್ತು. ಅವರು ಅಂದುಕೊಂಡಂತೆ ಆಗದೇ ಇದ್ದರೆ ಐಪಿಎಲ್ ನಡೆಯಲು ಬಿಡುತ್ತಿರಲಿಲ್ಲ. ಐಪಿಎಲ್ ಆಡಳಿತ ಮಂಡಳಿಗೆ ಅವರು ಕಂಟಕವಾಗಿದ್ದರು, ಪ್ಲಿಂಟಾಫ್‌ರನ್ನು ಖರೀದಿ ಮಾಡದಂತೆ ಉಳಿದ ತಂಡಗಳಿಗೆ ಮನವಿ ಮಾಡಿದ್ದೆ. ಯಾಕೆಂದರೆ ಸಿಎಸ್‌ಕೆ ಫ್ರಾಂಚೈಸಿಗೆ ಅವರು ಬೇಕಿತ್ತು ಎಂದು ಲಲಿತ್ ಮೋದಿ ಹೇಳಿರುವುದಾಗಿ ಒನ್‌ಕ್ರಿಕೆಟ್‌ ವರದಿ ಮಾಡಿದೆ.

ಎರಡು ವರ್ಷ ಬ್ಯಾನ್ ಆಗಿದ್ದ ಸಿಎಸ್‌ಕೆ

2013ರ ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಅದರ ಮಾಲೀಕ ಎನ್. ಶ್ರೀನಿವಾಸನ್ ಭಾಗಿಯಾಗಿರುವ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಜುಲೈ 2015 ರಿಂದ ಎರಡು ವರ್ಷಗಳ ಕಾಲ ಐಪಿಎಲ್‌ನಿಂದ ಬ್ಯಾನ್ ಮಾಡಲಾಗಿದೆ. ಸಿಎಸ್‌ಕೆ ಮಾತ್ರವಲ್ಲದೆ ರಾಜಸ್ಥಾನ ರಾಯಲ್ಸ್ ತಂಡವನ್ನು ಕೂಡ ಈ ಅವಧಿಯಲ್ಲಿ ಬ್ಯಾನ್ ಮಾಡಲಾಗಿತ್ತು. 2018ರಲ್ಲಿ ಮತ್ತೆ ಎರಡೂ ತಂಡಗಳಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡಲಾಯಿತು.

ಐಪಿಎಲ್ ಯಶಸ್ವಿಯಾಗಿದ್ದರೂ ಶ್ರೀನಿವಾಸನ್ ಆರಂಭದಲ್ಲಿ ಅದನ್ನು ವಿರೋಧಿಸಿದ್ದರು ಎಂದು ಮೋದಿ ಆರೋಪಿಸಿದ್ದಾರೆ. ಆದರೆ ಬಳಿಕ ಅವರು ತಮ್ಮ ಮನಸ್ಸು ಬದಲಾಯಿಸಿಕೊಂಡಿದ್ದರು.

"ಶ್ರೀನಿವಾಸನ್‌ ಅವರಿಗೆ ಐಪಿಎಲ್ ಇಷ್ಟವಿರಲಿಲ್ಲ ಅದು ಯಶಸ್ವಿಯಾಗುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲ. ಆದರೆ ಅದು ನಿರೀಕ್ಷೆಯನ್ನೂ ಮೀರಿ ಯಶಸ್ಸು ಪಡೆಯಿತು. ಶ್ರೀನಿವಾಸನ್ ಐಪಿಎಲ್ ಆಡಳಿತ ಮಂಡಳಿಯ ಸದಸ್ಯರಾಗಿದ್ದರು, ನನಗೆ ಅವರೇ ದೊಡ್ಡ ವಿರೋಧಿಯಾಗಿದ್ದರು" ಎಂದು ಹೇಳಿದರು.

ಅಂಪೈರ್ ನೇಮಕಾತಿಯಲ್ಲೂ ಪ್ರಭಾವ

ಇಷ್ಟು ಮಾತ್ರವಲ್ಲದೆ ಸಿಎಸ್‌ಕೆ ಫ್ರಾಂಚೈಸಿಯ ಪರವಾಗಿ ಶ್ರೀನಿವಾಸನ್ ಅಂಪೈರ್ ನೇಮಕದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಲಲಿತ್ ಮೋದಿ ಆರೋಪ ಮಾಡಿದ್ದಾರೆ. ಶ್ರೀನಿವಾಸನ್ ಅಂಪೈರ್ ಅನ್ನು ಬದಲಾಯಿಸುತ್ತಿದ್ದರು, ಮೊದಲಿಗೆ ನಾನು ಅದರ ಬಗ್ಗೆ ಹೆಚ್ಚು ಯೋಚನೆ ಮಾಡದೇ ಇದ್ದರೂ, ಚೆನ್ನೈ ಪಂದ್ಯಕ್ಕೆ ಚೆನ್ನೈನ ಅಂಪೈರ್ ಅನ್ನು ಹಾಕುತ್ತಿದ್ದಾರೆಂದು ಅರ್ಥವಾಯಿತು. ಅದನ್ನು ಪರೋಕ್ಷವಾಗಿ ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ ಎಂದು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+