Virat Kohli: ಕೊಹ್ಲಿಗೆ ನಾನೇಕೆ ಅಭಿನಂದಿಸಲಿ ಎಂದಿದ್ದ ಕುಶಾಲ್ ಮೆಂಡಿಸ್‌ಗೆ ತಪ್ಪಿನ ಅರಿವಾಯ್ತ?
ಶ್ರೀಲಂಕಾ ತಂಡದ ನಾಯಕ ಕುಶಾಲ್ ಮೆಂಡಿಸ್ ಶ್ರೀಲಂಕಾ - ಬಾಂಗ್ಲಾದೇಶ ಪಂದ್ಯಕ್ಕೆ ಮುನ್ನ ವಿರಾಟ್ ಕೊಹ್ಲಿ ಬಗ್ಗೆ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ ರೀತಿ ಸಾಕಷ್ಟು ಟೀಕೆಗೆ ಕಾರಣವಾಗಿತ್ತು. ಕೊಹ್ಲಿ 49ನೇ ಶತಕ ಸಿಡಿಸಿದ್ದಾರೆ ಅಭಿನಂದಿಸುತ್ತೀರಾ ಎಂದು ಪತ್ರಕರ್ತರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಅವರು, ನಾನೇಕು ಅವರನ್ನು ಅಭಿನಂದಿಸಬೇಕು? ಎಂದು ಪ್ರಶ್ನೆ ಮಾಡಿದ್ದರು.
ಕುಶಾಲ್ ಮೆಂಡಿಸ್ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದ ರೀತಿಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು, ಕೊಹ್ಲಿಗೆ ಅಭಿನಂದನೆ ಸಲ್ಲಿಸದೇ ಇದ್ದರೂ ಪರವಾಗಿಲ್ಲ ಆದರೆ ಆ ರೀತಿ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಬಾರದಿತ್ತು ಎಂದು ಅಭಿಮಾನಿಗಳು ಹೇಳಿದ್ದರು.

ಈಗ ಮತ್ತೆ ಪ್ರತಿಕ್ರಿಯೆ ನೀಡಿರುವ ಕುಶಾಲ್ ಮೆಂಡಿಸ್ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು ಕ್ಷಮೆ ಯಾಚಿಸಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಕುಶಾಲ್ ಮೆಂಡಿಸ್ ಹೇಳಿದ್ದೇನು?
"ಆ ದಿನ ನಾನು ಪತ್ರಿಕಾಗೋಷ್ಠಿಗೆ ಹೋಗಿದ್ದೆ ಮತ್ತು ವಿರಾಟ್ ಶತಕ ಬಾರಿಸಿದ್ದು ನನಗೆ ತಿಳಿದಿರಲಿಲ್ಲ, ಇದ್ದಕ್ಕಿದ್ದಂತೆ ಆ ಪತ್ರಕರ್ತ ಆ ಪ್ರಶ್ನೆಯನ್ನು ಕೇಳಿದಾಗ, ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ, ಮತ್ತು ನನಗೆ ಪ್ರಶ್ನೆಯು ಸ್ಪಷ್ಟವಾಗಿ ಅರ್ಥವಾಗಲಿಲ್ಲ. 49 ಏಕದಿನ ಶತಕಗಳನ್ನು ಗಳಿಸುವುದು ಸುಲಭದ ಕೆಲಸವಲ್ಲ, ವಿರಾಟ್ ವಿಶ್ವದ ಅದ್ಭುತ ಕ್ರಿಕೆಟಿಗರಲ್ಲಿ ಒಬ್ಬರು, ನಂತರ ನಾನು ಹೇಳಿದ್ದು ಸಂಪೂರ್ಣವಾಗಿ ತಪ್ಪು ಎಂದು ನಾನು ಅರಿತುಕೊಂಡೆ," ಎಂದು ಹೇಳಿರುವುದಾಗಿ ಏಷ್ಯನ್ ಮಿರರ್ ವರದಿ ಮಾಡಿದೆ.
"ನಾನು ಆ ರೀತಿಯಲ್ಲಿ ನಾನು ಪ್ರತಿಕ್ರಿಯಿಸಬಾರದಿತ್ತು ಎಂದು ನಾನು ಈಗ ಭಾವಿಸುತ್ತೇನೆ" ಎಂದು ಅವರು ಕ್ಷಮೆಯಾಚಿಸಿದರು.
ಶ್ರೀಲಂಕಾ ತಂಡ ಅಮಾನತು
ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಕಳಪೆ ಪ್ರದರ್ಶನ ನೀಡಿದೆ, 9 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಶ್ರೀಲಂಕಾ ತಂಡದ ಕಳಪೆ ಪ್ರದರ್ಶನ ನಂತರ ಅಲ್ಲಿನ ಸರ್ಕಾರ ಶ್ರೀಲಂಕಾ ಮಂಡಳಿಯನ್ನು ವಿಸರ್ಜನೆ ಮಾಡಿತ್ತು.
ರಾಷ್ಟ್ರೀಯ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಗಮನಿಸಿದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ತನ್ನ ಪೂರ್ಣ ಸದಸ್ಯ ಶ್ರೀಲಂಕಾವನ್ನು ಅಮಾನತುಗೊಳಿಸಿ ಶಾಕ್ ನೀಡಿತ್ತು.
ಶ್ರೀಲಂಕಾದ ಸಂಸತ್ತು ಗುರುವಾರ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದ್ದು, ದೇಶದ ಕ್ರಿಕೆಟ್ ಆಡಳಿತ ಮಂಡಳಿಯನ್ನು ವಜಾಗೊಳಿಸುವಂತೆ ಕರೆ ನೀಡಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳು ಅದನ್ನು ಬೆಂಬಲಿಸಿದ್ದವು. ಇದೇ ಕಾರಣಕ್ಕೆ ಐಸಿಸಿ ಶ್ರೀಲಂಕಾದ ಸದಸ್ಯತ್ವವನ್ನು ರದ್ದು ಮಾಡಿದೆ.
2021 ರಲ್ಲಿ ಸರ್ಕಾರದ ಹಸ್ತಕ್ಷೇಪದಿಂದಾಗಿ ಜಿಂಬಾಬ್ವೆ ಕ್ರಿಕೆಟ್ ಅನ್ನು ಅಮಾನತುಗೊಳಿಸಿತ್ತು, ಈಗ ಮೊದಲ ಬಾರಿಗೆ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರವನ್ನು ಅಮಾನತುಗೊಳಿಸಿತು.












Click it and Unblock the Notifications