RCB vs MI: ಕೃನಾಲ್ ಪಾಂಡ್ಯ ಸೈಕಲಾಜಿಲ್ ಗೇಮ್: ಕಣ್ಣೀರಿಟ್ಟ ಹಾರ್ದಿಕ್ ಪಾಂಡ್ಯ
2025ರ ಐಪಿಎಲ್ ಟೂರ್ನಿಯ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ರೋಚಕ ಹಣಾಹಣಿ ನಡೆದಿದೆ. 10 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ.
ನಿನ್ನೆಯ ಪಂದ್ಯ ಕೊನೆಯ ಕ್ಷಣದವರೆಗೂ ಕುತೂಹಲಕಾರಿಯಾಗಿದ್ದು, ವೀಕ್ಷಕರು ಕಣ್ಣು ಮಿಟುಕಿಸದಂತೆ ಪಂದ್ಯ ಹಿಡಿದಿಟ್ಟುಕೊಂಡಿತ್ತು. ಆರ್ಸಿಬಿ 20 ಓವರ್ನಲ್ಲಿ ಮುಂಬೈ ಇಂಡಿಯನ್ಸ್ 222 ರನ್ಗಳ ಗುರಿ ನೀಡಿತ್ತು. ಟಾರ್ಗೆಟ್ ರನ್ ಬೆನ್ನು ಹತ್ತಿದ್ದ ಮುಂಬೈ ಇಂಡಿಯನ್ಸ್ ತಂಡ ಕೊನೆಯ ಕ್ಷಣದವರೆಗೂ ಹೋರಾಡಿದ್ದು, ಅಂತ್ಯದಲ್ಲಿ ಆರ್ಸಿಬಿ ತಂಡದ ಬೌಲರ್ಗಳ ಅಬ್ಬರಕ್ಕೆ ಸೋಲೊಪ್ಪಿಕೊಂಡಿತು.

ಆರ್ಸಿಬಿ ತಂಡದ ಕ್ಯಾಪ್ಟನ್ ರಜತ್ ಪಾಟೀದಾರ್ ಹೇಳಿದಂತೆ ನಿನ್ನೆಯ ಮ್ಯಾಚ್‌ನಲ್ಲಿ ಆರ್ಸಿಬಿಯ , ಬೌಲರ್ಗಳು ರಿಯಲ್ ಹೀರೋಗಳಾಗಿದ್ದಾರೆ. ಅದರಲ್ಲೂ ಕೃನಾಲ್ ಪಾಂಡ್ಯ ಸೈಕಲಾಜಿಲ್ ಆಟ ಆರ್‌ಸಿಬಿ ಗೆಲುವಿಗೆ ಕಾರಣವಾಯ್ತು ಎನ್ನುವ ಮಾತುಗಳು ಕೂಡ ಜೋರಾಗಿ ಕೇಳಿಬರುತ್ತಿದೆ.
ಆರ್‌ಸಿಬಿ ಕೊಟ್ಟ ರನ್ಗಳ ಗುರಿಯತ್ತ ಮುನ್ನುಗ್ಗುತ್ತಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ತಿಲಕ್ ವರ್ಮಾ ಹಾಗೂ ತಂಡದ ನಾಯಕ ಹಾರ್ದಿಕ್ ಪಾಂಡ್ಯ ವಿಕೆಟ್ ಒಪ್ಪಿಸಿದ್ದು ದೊಡ್ಡ ಹೊಡೆತವಾಯಿತು. ತಿಲಕ್ ವರ್ಮಾ 27 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್ನಿಂದ ಅರ್ಧಶತಕ ಗಳಿಸಿದರು. ಇನ್ನು ಹಾರ್ದಿಕ್ ಪಾಂಡ್ಯ ಕೇವಲ 15 ಬಾಲ್ಗೆ 4 ಸಿಕ್ಸರ್ನಿಂದ 42 ರನ್ ಬಾರಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಆರ್‌ಸಿಬಿ ಬೌಲರ್ಗಳು ತತ್ತರಿಸಿದ್ದರು. ಈ ವೇಳೆ ಮೈದಾನದಲ್ಲಿ ಸಹೋದರರ ಸವಾಲು ಆಗಿದ್ದು, ಹಾರ್ದಿಕ್ ಪಾಂಡ್ಯ ಎದುರಿಗೆ ಬೌಲರ್ ಆಗಿ ಬಂದ ಕೃನಾಲ್ ಪಾಂಡ್ಯ ಸಣ್ಣ ಸೈಕಲಾಜಿಲ್ ಆಟವಾಡಿದ್ದಾರೆ.

ತಮ್ಮ ಬೌಲಿಂಗ್‌ಗಳಿಗಳೂ ಸಿಕ್ಸ್, ಫೋರ್ ಹೊಡೆಯುತ್ತಾ ಬ್ಯಾಟಿಂಗ್ ಅಬ್ಬರದಲ್ಲಿದ್ದ ಹಾರ್ದಿಕ್ ಪಾಂಡ್ಯ ವೇಗಕ್ಕೆ ಕೊಂಚ ಬ್ರೇಕ್ ಹಾಕಲು ಒಂದೆರಡು ನಿಮಿಷಗಳ ಸಮಯ ವ್ಯರ್ಥ ಮಾಡಿದರು. ಅದಾದ ಮೇಲೆ ರನ್ ರೇಟ್ ಕಂಟ್ರೋಲ್ ಮಾಡಿ ಓವರ್ ಪೂರ್ಣಗೊಳಿಸಿದರು. ಇಲ್ಲಿ ವೈಡ್ ಬಾಲ್‌ಗಳು ಕೂಡ ಗೇಮ್ ಕಂಟ್ರೋಲ್ ಟ್ರಿಕ್ಸ್ ಆಗಿತ್ತು. ಅದಾದ ಮೇಲೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಅಬ್ಬರ ಕೊಂಚ ಕಡಿಮೆಯಾಗಿದ್ದು, ಕೊನೆಗೆ ಬೌಂಡರಿ ಲೈನ್ ಬಳಿ ಕ್ಯಾಚ್ ಕೊಟ್ಟು ಔಟ್ ಆದರು. ಆರ್‌ಸಿಬಿ ತಂಡದ ಮೊದಲು ಗೆಲುವಿನ ಮೆಟ್ಟಿಲು ಇದಾಗಿದ್ದು, ಕೊನೆಯ ಓವರ್ ಬೌಲ್ ಮಾಡಿದ ಕೃನಾಲ್ ಪಾಂಡ್ಯ ಮೂರು ವಿಕೆಟ್ ಪಡೆದು ಮೈದಾನದಲ್ಲಿ ಅಬ್ಬರಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲುಣಿಸಿದರು.
20ನೇ ಓವರ್ನ ಮೊದಲ ಎಸೆತದಲ್ಲೇ ಕೃನಾಲ್ ಪಾಂಡ್ಯ ಸ್ಯಾಂಟ್ನರ್ ವಿಕೆಟ್ ಪಡೆದರು. ಎರಡನೇ ಎಸೆತದಲ್ಲಿ ದೀಪಕ್ ಚಹಾರ್ ವಿಕೆಟ್ ಉರುಳಿಸಿದರು, ಮಧ್ಯೆ ಎರಡು ಬಾಲ್ಗಳಲ್ಲಿ ಒಂದು ಫೋರ್ ಹಾಗೂ ಒಂದು ವೈಡ್ ಕೊಟ್ಟ ಕೃನಾಲ್ ಪಾಂಡ್ಯ ಐದನೇ ಬಾಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಭರವಸೆಯಾಗಿದ್ದ ನಮನ್ ವಿಕೆಟ್ ಪಡೆದರು. ಅಲ್ಲಿಗೆ ಆರ್‌ಸಿಬಿ ಗೆಲುವು ಖಚಿತವಾಗಿದ್ದು, ಕೊನೆಯ ಒಂದು ಬಾಲ್‌ನಲ್ಲಿ ಯಾವುದೇ ರನ್ ಪಡೆಯಲು ಅವಕಾಶ ನೀಡಲಿಲ್ಲ. ಒಟ್ಟಾರೆಯಾಗಿ ನಿನ್ನೆಯ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಸೇರಿದಂತೆ ಆರ್‌ಸಿಬಿ ತಂಡದ ಬೌಲರ್‌ಗಳು ಹೀರೋ ಆದರು. ಇನ್ನು ಮುಂಬೈ ಇಂಡಿಯನ್ಸ್ ತಂಡ ಸೋಲು ಕಾಣುತ್ತಿದ್ದಂತೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕಣ್ಣೀರಿಟ್ಟ ದೃಶ್ಯ ಕೂಡ ಕಂಡುಬಂದಿತು.












Click it and Unblock the Notifications