Virat Kohli: ವಾಟರ್.. ವಾಟರ್.. ಜಗತ್ತಿನ ದುಬಾರಿ ವಾಟರ್ ಬಾಯ್!
ಕ್ರಿಕೆಟ್ ಮ್ಯಾಚ್‌ಗಳಲ್ಲಿ ವಾಟರ್ ಬಾಯ್ ಪಾತ್ರ ದೊಡ್ಡದು ಬಿಡಿ, ಯಾಕಂದ್ರೆ ಮೈದಾನದ ತುಂಬಾ ಓಡಾಡುತ್ತಾ ಸುಸ್ತಾದ ತಮ್ಮದೆ ತಂಡದ ಆಟಗಾರರಿಗೆ ನೀರು ತಂದು ಕೊಡುವುದು ಹೆಮ್ಮೆ ಕೆಲಸ. ಹೀಗೆ ಬರುವ ವಾಟರ್ ಬಾಯ್‌ಗಳು ಸಾಮಾನ್ಯವಾಗಿ ಹೊಸ ಆಟಗಾರರೇ ಆಗಿರುತ್ತಾರೆ. ಆದರೆ ಕೆಲವೊಮ್ಮೆ ಸ್ಟಾರ್ ಆಟಗಾರರು ವಾಟರ್ ಬಾಯ್ ಆಗಿ ಗಮನವನ್ನು ಸೆಳೆದಿದ್ದು, ಇಂದು ಭಾರತೀಯರು ಅತ್ಯಂತ ದುಬಾರಿ ವಾಟರ್ ಬಾಯ್‌ನ ನೋಡಿದ್ದಾರೆ.
ಹೌದು, ಮೊನ್ನೆ ಮೊನ್ನೆ ತಾನೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿ ಭಾರತೀಯರ ಹೃದಯ ಗೆದ್ದ ವಿರಾಟ್ ಕೊಹ್ಲಿ ಇಂದು ಹೊಸ ಅವತಾರದಲ್ಲಿ ಮೈದಾನಕ್ಕೆ ಬಂದರು. ಭಾರತ ಮತ್ತು ಬಾಂಗ್ಲಾದೇಶ ಮಧ್ಯೆ ನಡೆಯುತ್ತಿರುವ 2023ರ ಏಷ್ಯಾ ಕಪ್ ಟೂರ್ನಿ ಸೂಪರ್-4ರ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಾಟರ್ ಬಾಯ್ ಆಗಿ ಭರ್ಜರಿ ಎಂಟ್ರಿ ಕೊಟ್ರು. ಆದರೆ ಎಲ್ಲರಂತೆ ಕೊಹ್ಲಿ ಕೂಡ ವಾಟರ್ ಬಾಯ್ ಆಗಿ ಬಂದಿದ್ದರೆ ಪರವಾಗಿಲ್ಲ ಅಂತಾ ಹೇಳಬಹುದಿತ್ತು, ಹೀಗಿದ್ದಾಗ ವಿರಾಟ್ ಕೊಹ್ಲಿ ಅವರು ಮಾಡಿದ ಕಾಮಿಡಿ ಮಾತ್ರ ಫ್ಯಾನ್ಸ್ ಮನಸ್ಸು ಗೆದ್ದಿದೆ.

ಓಡಿ.. ಓಡಿ.. ಬಂದ ವಿರಾಟ್ ಕೊಹ್ಲಿ!
ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ & ಬಾಂಗ್ಲಾದೇಶ ತಂಡಗಳು ಅಖಾಡ ಪ್ರವೇಶ ಮಾಡಿದ್ದವು. ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ದುಕೊಂಡು, ಆರಂಭದಲ್ಲೇ ಬಾಂಗ್ಲಾ ಹುಲಿಗಳಿಗೆ ಶಾಕ್ ಕೊಟ್ಟಿತ್ತು. ಈ ವೇಳೆ ಪಂದ್ಯದ 4ನೇ ಓವರ್‌ನಲ್ಲಿ ಶಾರ್ದುಲ್ ಠಾಕೂರ್ ಅವರು ತಂಝಿದ್ ಹಸನ್ ಅವರನ್ನು ಔಟ್ ಮಾಡಿದ ನಂತ್ರ ವಿರಾಟ್ ಕೊಹ್ಲಿ ಡ್ರಿಂಕ್ಸ್ ತೆಗೆದುಕೊಂಡು ಭಾರತ ತಂಡದ ಆಟಗಾರರ ಬಳಿ ಓಡಿ ಬಂದರು. ಆದರೆ ವಿರಾಟ ಓಡಿರುವ ಸ್ಟೈಲ್, ಮಾಡಿದ ಕಾಮಿಡಿ ಮಾತ್ರ ಈಗ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದೆ.
On the field or off the field, can't get our eyes off this guy 👀#INDvBAN live now only on #DisneyPlusHotstar, free on the mobile app.#FreeMeinDekhteJaao #AsiaCup2023 #AsiaCupOnHotstar #Cricket pic.twitter.com/emqbnrl6Vp
— Disney+ Hotstar (@DisneyPlusHS) September 15, 2023
ವಿರಾಟ್ ಕೊಹ್ಲಿ ಪೆವಿಲಿಯನ್‌ನಿಂದ ವಿಭಿನ್ನವಾಗಿ ಓಡಿ ಬರುವ ಮೂಲಕ ಹಾಸ್ಯ ಪ್ರವೃತ್ತಿ ಮೆರೆದರು. ವಿಶಿಷ್ಟ ಶೈಲಿಯಲ್ಲಿ ಎಗರುತ್ತಾ.. ಓಡುತ್ತಾ.. ಬಂದ ವಿರಾಟ್ ಕೊಹ್ಲಿ ತಮ್ಮ ತಂಡದ ಯುವ ಆಟಗಾರರ ದಾಹವನ್ನ ತಣಿಸಿದರು. ಇನ್ನು ಕೊಹ್ಲಿ ಅವರ ಈ ವಿಡಿಯೋ ಟ್ವಿಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಾದರೆ ಕೊಹ್ಲಿ ದಿಢೀರ್ ವಾಟರ್ ಬಾಯ್ ಆಗಿದ್ದು ಏಕೆ? ಮುಂದೆ ಓದಿ.
ಕೊಹ್ಲಿ ವಾಟರ್ ಬಾಯ್ ಆಗಿದ್ದೇಕೆ?
ಈಗಾಗಲೇ ಸೂಪರ್ 4 ಹಂತದಲ್ಲಿ 2 ಪಂದ್ಯ ಗೆದ್ದಿರುವ ಭಾರತ ತಂಡ ಫೈನಲ್ ಪ್ರವೇಶ ಮಾಡಿದೆ. ಇನ್ನು ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಭಾರತ ಮುಖಾಮುಖಿ ಆಗಿ, ಪ್ರಶಸ್ತಿಗಾಗಿ ಸೆಣೆಸಲಿವೆ. ಹೀಗಾಗಿ ಭಾರತಕ್ಕೆ ಈ ಪಂದ್ಯ ಲೆಕ್ಕಕ್ಕೆ ಇಲ್ಲ, ಇದೇ ಕಾರಣಕ್ಕೆ ಈ ಪಂದ್ಯದಲ್ಲಿ ಭಾರತ ತಂಡದ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಮತ್ತೊಂದ್ಕಡೆ ಸೆಪ್ಟಂಬರ್ 17 ರಂದು ನಡೆಯುವ ಫೈನಲ್ ಪಂದ್ಯದ ಹಿನ್ನೆಲೆ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ & ಕುಲ್ದೀಪ್ ಯಾದವ್‌ಗೆ ವಿಶ್ರಾಂತಿ ನೀಡಲಾಗಿದ್ದು, ಕೊಹ್ಲಿ ಇಂದು ತಮ್ಮ ತಂಡದ ಆಟಗಾರರಿಗೆ ವಾಟರ್ ಬಾಯ್ ಆಗಿ ಸಹಾಯ ಮಾಡಿದ್ದಾರೆ.

ಸೋಲಿನ ಪಾಠ ಕಲಿಸುತ್ತಾ ಭಾರತ?
ಬಾಂಗ್ಲಾದೇಶ 50 ಓವರ್‌ಗಳಲ್ಲಿ 265 ಗಳಿಸಿದ್ದು, ಇದೀಗ ಭಾರತಕ್ಕೆ 266 ರನ್ ಗುರಿ ಇದೆ. ಆದರೆ ಆರಂಭದಲ್ಲೇ ಭಾರತ 2 ವಿಕೆಟ್ ಕಳೆದುಕೊಂಡು 22 ರನ್ ಗಳಿಸಿದೆ. ಹೀಗಾಗಿ ಈ ಮ್ಯಾಚ್ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದ್ದು, ಎರಡು ಕಡೆ ಗೆಲುವಿಗಾಗಿ ಭಾರಿ ಪೈಪೋಟಿ ನಡೆಯುವ ನಿರೀಕ್ಷೆ ಇದೆ. ಬಾಂಗ್ಲಾದೇಶ ತಂಡ ಈ ಪಂದ್ಯ ಗೆದ್ದರೂ, ಸೋತರೂ ಯಾವ ಬದಲಾವಣೆ ಕೂಡ ಉಂಟಾಗುವುದಿಲ್ಲ. ಏಕೆಂದರೆ ಈಗಾಗಲೇ ಏಷ್ಯಾಕಪ್ ಟೂರ್ನಿಯಿಂದ ಬಾಂಗ್ಲಾದೇಶ ತಂಡ ಹೊರಬಿದ್ದಿದೆ. ಹೀಗಾಗಿ ಭಾರತ ತಂಡದ ಹಿರಿಯ ಆಟಗಾರರಿಗೆ ರೆಸ್ಟ್ ಕೊಟ್ಟು, ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications