RCB vs GT: ವಿರಾಟ್ ರಾಕೆಟ್ ಥ್ರೊ, ಫ್ಲೈಯಿಂಗ್ ಕಿಸ್: ವಿಡಿಯೋ ಸಖತ್ ವೈರಲ್
ಆರ್‌ಸಿಬಿ ಶನಿವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೇಸಿಸ್ ಬ್ಯಾಟ್ ಮೂಲಕ ಆರ್ಭಟಿಸಿದರು. ಇದಕ್ಕೂ ಮೊದಲು ವಿರಾಟ್ ತಾವು ಇನ್ನು ಎಷ್ಟು ಫಿಟ್ ಆಗಿದ್ದೇನು ಎಂಬುದನ್ನು ಸಾಬೀತು ಪಡಿಸುವಂತೆ ಸಖತ್ ಥ್ರೋ ಮಾಡಿದರು. ಈ ಥ್ರೋ ನೋಡಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟ್ಸ್‌ಮನ್‌ಗಳು ಪೂರ್ಣ 20 ಓವರ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. ಗುಜರಾತ್ ಟೈಟಾನ್ಸ್ ಪರ ಶಾರುಖ್ ಖಾನ್ ಅವರು 24 ಎಸೆತಗಳಲ್ಲಿ 37 ರನ್ ಗಳಿಸಿದರು, ಆದರೆ ಈ ಇವರನ್ನು ಔಟ್ ಮಾಡಿದ ರೀತಿ ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ವಿರಾಟ್ ಕೊಹ್ಲಿ ಮಾಡಿದ ಡೈರೆಕ್ಟ್ ಥ್ರೋಗೆ ಶಾರೂಖ್ ಖಾನ್ ಪೆವೆಲಿಯನ್ ಹಾದಿ ಹಿಡಿದರು.

ಆಗಿದ್ದು ಏನು?
ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ 80 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ಶಾರುಖ್ ಖಾನ್ ಗೆ ಬೆಂಬಲವಾಗಿ ಮೈದಾನಕ್ಕೆ ಬಂದ ರಾಹುಲ್ ತೆವಾಟಿಯಾ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಲು ಯತ್ನಿಸಿದರು. ಆರ್‌ಸಿಬಿ ಪರ 13ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ವಿಜಯ್‌ಕುಮಾರ್ ವ್ಯಾಶಕ್ ಅವರ ನಾಲ್ಕನೇ ಎಸೆತದಲ್ಲಿ ತೆವಾಟಿಯಾ ಆಫ್ ಸೈಡ್ ಕಡೆಗೆ ಚೆಂಡನ್ನು ತಳ್ಳಿ ಟೈಟ್ ಸಿಂಗಲ್ ಪಡೆದು ಕೊಳ್ಳುವ ಮನಸ್ಸು ಮಾಡಿದ್ದರು. ಆದರೆ, ನಂತರ ಶಾರುಖ್ ಖಾನ್ ರನ್ ತೆಗೆದುಕೊಳ್ಳಲು ಓಡಿದರು.
ಇದೇ ಸಮಯದಲ್ಲಿ ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ, ಚಿರತೆಯಂತೆ ಓಡಿ ವಿಕೆಟ್‌ಗೆ ಭರ್ಜರಿ ಥ್ರೋ ಮಾಡಿದರು. ಒಂದು ಕೈಯಿಂದ ಚೆಂಡನ್ನು ಹಿಡಿದು ನೇರವಾಗಿ ನಾನ್ ಸ್ಟ್ರೈಕ್ ಎಂಡ್ ಕಡೆಗೆ ಎಸೆದರು. ಇಂತಹ ಪರಿಸ್ಥಿತಿಯಲ್ಲಿ ಶಾರುಖ್ ಖಾನ್ ಹಿಂದೆ ತಿರುಗಿ ಕ್ರೀಸ್ ತಲುಪುವ ವೇಳೆಗೆ ಚೆಂಡು ನೇರವಾಗಿ ಸ್ಟಂಪ್ ಗೆ ಹೋಗಿ ರನೌಟ್ ಆಗಿ ಪೆವಿಲಿಯನ್ ಗೆ ಮರಳಬೇಕಾಯಿತು. ಥರ್ಡ್ ಅಂಪೈರ್ ನಿರ್ಧಾರವು ದೊಡ್ಡ ಪರದೆಯ ಮೇಲೆ ಬಂದ ನಂತರ ವಿರಾಟ್ ಕೊಹ್ಲಿ ಶಾರುಖ್ ಖಾನ್ ಅವರ ಈ ವಿಕೆಟ್ ಅನ್ನು ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಸಂಭ್ರಮಿಸಿದರು.
Excellent stuff from Virat Kohli. A direct hit to run out dangerous Shahrukh Khan 🔥. #RCBvsGT #RCBvGTpic.twitter.com/i3zQx8AgN9
— Tejash (@TEJASH_264) May 4, 2024
ಐಪಿಎಲ್‌ನಲ್ಲಿ ವಿರಾಟ್ ಪ್ರದರ್ಶನ ಹೇಗಿದೆ?
ಈ ಋತುವಿನಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಅಬ್ಬರಿಸುತ್ತಿದ್ದಾರೆ. ವಿರಾಟ್ ಕೊಹ್ಲಿ 11 ಪಂದ್ಯಗಳಲ್ಲಿ 67.75ರ ಸರಾಸರಿಯಲ್ಲಿ 542 ರನ್ ಗಳಿಸಿದ್ದಾರೆ. ಆರೆಂಜ್ ಕ್ಯಾಪ್ ರೇಸ್ ನಲ್ಲಿ ವಿರಾಟ್ ಕೊಹ್ಲಿ ಮುಂದಿದ್ದಾರೆ. ಈ ಮೂಲಕ ಮತ್ತೊಮ್ಮೆ ಆರೆಂಜ್ ಕ್ಯಾಪ್ ತಮ್ಮ ಮುಕುಟಕ್ಕೆ ಏರಿಸಿಕೊಂಡರು. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರಿತುರಾಜ್ ಗಾಯಕ್ವಾಡ್ 10 ಪಂದ್ಯಗಳಲ್ಲಿ 63.62 ಸರಾಸರಿಯಲ್ಲಿ 509 ರನ್ ಗಳಿಸಿದ್ದಾರೆ. ಇದಲ್ಲದೆ, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಸಾಯಿ ಸುದರ್ಶನ್ (424), ರಿಯಾನ್ ಪರಾಗ್ (409) ಮತ್ತು ಕೆಎಲ್ ರಾಹುಲ್ (406) ಅವರ ಹೆಸರುಗಳನ್ನು ನೋಡಬಹುದು.












Click it and Unblock the Notifications