Shreyanka Patil: ಆರ್‌ಸಿಬಿ ಗೆದ್ದ ಬಳಿಕ ಕಾರಿನಲ್ಲಿ ಅಡಗಿಕೊಂಡ ಶ್ರೇಯಾಂಕಾ ಪಾಟೀಲ್!
ಆರ್‌ಸಿಬಿ ತಂಡಕ್ಕೆ ಮೊದಲ ಕಪ್ ಗೆದ್ದುಕೊಟ್ಟದ್ದು ಮಹಿಳಾ ತಂಡ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂದ್ ರನ್‌ನಿಂದ ಸೋತ ಬಳಿಕ ಮುಂದಿನ ಪಂದ್ಯಗಳಲ್ಲಿ ರೋಚಕ ಹೋರಾಟ ಕೊಟ್ಟ ಸ್ಮೃತಿ ಮಂಧಾನ ಪಡೆ, ಕಪ್ ಎತ್ತಿಹಿಡಿಯಿತು. ಈ ಸರಿ ಕಪ್ ನಮ್ದೇ ಎನ್ನುವುದನ್ನು ಬದಲಿಸಿ ಈ ಸಲ ಕಪ್ ನಮ್ದು ಎಂದು ಹೇಳಿದ್ದರು.
ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಕೂಡ ಬೂದಿಯಿಂದ ಎದ್ದು ಬಂದಿದೆ. ಟೂರ್ನಿಯಿಂದಲೇ ಹೊರಹೋಗುತ್ತಾರೆ ಎನ್ನುವ ಹಂತದಿಂದ ಸತತವಾಗಿ ಆರು ಪಂದ್ಯ ಗೆದ್ದು ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯವನ್ನು ನೋಡಲು ಆರ್‌ಸಿಬಿ ತಂಡದ ಮಹಾಲಕ್ಷ್ಮಿಯರು ಹಾಜರಿದ್ದರು.

ಸ್ಮೃತಿ ಮಂಧಾನ, ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ ಫಾಫ್ ಡುಪ್ಲೆಸಿಸ್ ಪಡೆಗೆ ಬೆಂಬಲ ಕೊಡಲು ಬಂದಿದ್ದರು. ಅಭಿಮಾನಿಗಳ ನಿರೀಕ್ಷೆ ಹುಸಿಗೊಳಿಸದ ಆರ್‌ಸಿಬಿ ಸಿಎಸ್‌ಕೆ ವಿರುದ್ಧ 27 ರನ್‌ಗಳಿಂದ ಗೆದ್ದು ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿತು.
ಪಂದ್ಯದ ಬಳಿಕ ಶ್ರೇಯಾಂಕಾ ಪಾಟೀಲ್ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾರನ್ನು ಭೇಟಿ ಮಾಡಿ ಫೋಟೊ ಹಂಚಿಕೊಂಡು ಖುಷಿಪಟ್ಟರು. ಆದರೆ ಮೈದಾನದಿಂದ ಹೊರಹೋಗುವಾಗ ಅವರು ಕಾರಿನಲ್ಲಿ ಗುಬ್ಬಚ್ಚಿಯಂತೆ ಬಚ್ಚಿಕೊಂಡರು.
Shreyanka Patil ❤️😂😂😂#ನಮ್ಮRCB pic.twitter.com/StDLWKmglG
— ಹರ್ಷ (@grharsh) May 19, 2024
ಅಭಿಮಾನಿಗಳಿಗೆ ಹೆದರಿದ ಶ್ರೇಯಾಂಕಾ?
ಸಿಎಸ್‌ಕೆ ವಿರುದ್ಧ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ರಸ್ತೆಗಳಲ್ಲಿ ಜಮಾಯಿಸಿದ ಅಭಿಮಾನಿಗಳು ಜೈಕಾರ ಕೂಗುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದರು.
ಅಭಿಮಾನಿಗಳು ರಸ್ತೆಯಲ್ಲಿ ಸಂಭ್ರಮಾಚರಣೆ ಮಾಡುವುದನ್ನು ನೋಡಿದ ಶ್ರೇಯಾಂಕಾ ಪಾಟೀಲ್ ಕಾರಿನ ಹಿಂಬದಿಯ ಸೀಟಿನಲ್ಲಿ ಅಡಗಿಕೊಂಡರು. ಸ್ಮೃತಿ ಮಂಧಾನ ಕೂಡ ತಮ್ಮ ಗುರುತು ಮರೆಮಾಡಲು ಮಾಸ್ಕ್ ಧರಿಸಿದ್ದರು.
ಅವರನ್ನು ಕಾರಿನಲ್ಲಿ ಕೂತಿರುವುದನ್ನು ನೋಡಿದ್ದರೆ ಅಭಿಮಾನಿಗಳು ನೋಡಲು ಮುಗಿಬೀಳಬಹುದು ಎನ್ನುವ ಭಯದಲ್ಲಿ ಹಿಂದಿನ ಸೀಟಿನಲ್ಲಿ ಮಲಗಿಕೊಂಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಶ್ರೇಯಾಂಕಾ ಪಾಟೀಲ್ ಅಡಗಿ ಕೂತಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.












Click it and Unblock the Notifications