RCB: ರಿಷಬ್ ಪಂತ್‌ಗೆ ₹16 ಕೋಟಿ, ವಿಲ್ ಜ್ಯಾಕ್ಸ್‌ಗೆ ₹10.5 ಕೋಟಿ; ಆರ್‌ಸಿಬಿ ಸೇರಿದ್ಯಾರು?
ಐಪಿಎಲ್ 2025ರ ಮೆಗಾ ಹರಾಜಿಗೆ ಎಲ್ಲಾ 10 ಫ್ರಾಂಚೈಸಿಗಳು ತಯಾರಿ ಮಾಡಿಕೊಳ್ಳುತ್ತಿವೆ. ನವೆಂಬರ್ 24-25 ರಂದು ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ರಿಷಬ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಹಾಲ್, ಇಶಾನ್ ಕಿಶನ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಈ ಬಾರಿ ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಮೆಗಾ ಹರಾಜಿಗೆ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅಭಿಮಾನಿಗಳಿಗಾಗಿ ಅಣಕು ಹರಾಜು ಪ್ರಕ್ರಿಯೆ ನಡಸಿದೆ. ಈಗಾಗಲೇ ಬೆಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲಿ ಅಣಕು ಹರಾಜು ಪ್ರಕ್ರಿಯೆ ನಡೆದಿದೆ. ಎಲ್ಲಾ 10 ಫ್ರಾಂಚೈಸಿಗಳ ಅಭಿಮಾನಿಗಳ ತಂಡವನ್ನು ಮಾಡಿ, ಹರಾಜು ಪ್ರಕ್ರಿಯೆ ನಡೆಸಲಾಗಿದೆ ಎಲ್ಲಾ 10 ತಂಡಗಳು ಬಲಿಷ್ಠ ತಂಡವನ್ನು ಕಟ್ಟುವ ಮೂಲಕ ಅಭಿಮಾನಿಗಳು ಹರಾಜು ಪ್ರಕ್ರಿಯೆನ್ನು ಆನಂದಿಸಿದರು.

ರಿಷಬ್ ಪಂತ್‌ಗೆ ₹16 ಕೋಟಿ
ಅಣಕು ಹರಾಜಿನಲ್ಲಿ ಆರ್ ಸಿಬಿ ಅಭಿಮಾನಿಗಳ ತಂಡವು ರಿಷಬ್ ಪಂತ್‌ರನ್ನು ಬರೋಬ್ಬರಿ 16 ಕೋಟಿ ರೂಪಾಯಿ ನೀಡುವ ಮೂಲಕ ತಂಡಕ್ಕೆ ಸೇರಿಸಿಕೊಂಡರು. ರಿಷಬ್ ಪಂತ್ ಈ ಬಾರಿ ಮೆಗಾ ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದು ಯಾವ ತಂಡಕ್ಕೆ ಸೇರಿಕೊಳ್ಳುತ್ತಾರೆ ಎನ್ನುವ ಕುತೂಹಲ ಇದೆ. ಎಬಿ ಡಿವಿಲಿಯರ್ಸ್ ಕೂಡ ರಿಷಬ್ ಪಂತ್ ಈ ಬಾರಿ ಮೆಗಾ ಹರಾಜಿನ ದುಬಾರಿ ಆಟಗಾರನಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.
ರಿಷಬ್ ಪಂತ್ ಹೊರತುಪಡಿಸಿ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ 8 ಕೋಟಿ ರೂಪಾಯಿಗೆ ಆರ್ ಸಿಬಿ ಪಾಲಾದರು. ಕೃನಾಲ್ ಪಾಂಡ್ಯ 6.5 ಕೋಟಿ ರೂಪಾಯಿಗೆ ಹರಾಜಾದರು. ಅಚ್ಚರಿ ಎನ್ನುವಂತೆ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಗಾಗಿ ಯಾವ ತಂಡದ ಅಭಿಮಾನಿಗಳು ಹೆಚ್ಚಿನ ಪೈಪೋಟಿ ನಡೆಸಿಲ್ಲ ಅವರನ್ನು ಆರ್ ಸಿಬಿ 2.5 ಕೋಟಿ ರೂಪಾಯಿಗೆ ಖರೀದಿ ಮಾಡಿದರು. ಜೋಶ್ ಹೇಜಲ್‌ವುಡ್‌ಗೆ 3 ಕೋಟಿ ರೂಪಾಯಿ ನೀಡಿ ಆರ್ ಸಿಬಿ ಖರೀದಿ ಮಾಡಿತು. ವೇಗದ ಬೌಲರ್ ಟಿ ನಟರಾಜನ್ ಖರೀದಿ ಮಾಡಲು ಎಲ್ಲಾ ತಂಡಗಳು ಪ್ರಯತ್ನ ಪಟ್ಟಿದ್ದರಿಂದ ಅವರು 10.5 ಕೋಟಿ ರೂಪಾಯಿಗೆ ಆರ್ ಸಿಬಿ ಪಾಲಾದರು.
ಉಳಿದಂತೆ ಶಫಾನೆ ರುದರ್ ಪೋರ್ಡ್ 1 ಕೋಟಿ ರೂಪಾಯಿ, ಆಲ್‌ರೌಂಡರ್ ವಿಲ್ ಜ್ಯಾಕ್ಸ್‌ಗೆ 10.5 ಕೋಟಿ ರೂಪಾಯಿ ನೀಡಿದರು. ವನಿಂದು ಹಸರಂಗ 4 ಕೋಟಿ ರೂಪಾಯಿಗೆ ಹರಾಜಾದರು.
ಅಣಕು ಹರಾಜಿನ ಬಳಿಕ ಆರ್ ಸಿಬಿ ತಂಡ
ವಿರಾಟ್ ಕೊಹ್ಲಿ, ರಜತ್ ಪಟಿದಾರ್, ವಿಲ್ ಜ್ಯಾಕ್ಸ್, ವೆಂಕಟೇಶ್ ಅಯ್ಯರ್, ರಿಷಬ್ ಪಂತ್, ಕೃನಾಲ್ ಪಾಂಡ್ಯ, ಯಶ್ ದಯಾಳ್, ಜೋಶ್ ಹೇಜಲ್‌ವುಡ್, ಜೋಫ್ರಾ ಆರ್ಚರ್, ಟಿ ನಟರಾಜನ್, ಶರ್ಫಾನೆ ರುದರ್ ಫೋರ್ಡ್, ಶ್ರೇಯಸ್ ಗೋಪಾಲ್, ನಮನ್ ದರ್.
-
Virat Kohli: ಘನತೆಗೆ ತಕ್ಕ ಆಟ ಇಲ್ಲ; ವಿರಾಟ್ ಕೊಹ್ಲಿ ಬದಲಿಗೆ ಬೆಥೆಲ್ ಆಡಿಸುವ ಸೂಚನೆ ನೀಡಿದ್ರಾ ಭಾರತದ ಮಾಜಿ ಕ್ರಿಕೆಟಿಗ? -
ಸುಮ್ನೆ ಬಾಲ್ ಕೊಡೋ ಮಾರಾಯ.. ನಾ ಕೊಡಕಿಲ್ಲ ಏನ್ ಮಾಡ್ತೀರಾ? ಟಿಮ್ ಡೇವಿಡ್-ಅಂಪೈರ್ ಫನ್ನಿ ವಿಡಿಯೋ ಭಾರೀ ವೈರಲ್ -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್‌ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಅನುಷ್ಕಾ-ಅನನ್ಯಾ ಬಿರ್ಲಾ: ನೆಟ್ಟಿಗರ ಮನಗೆದ್ದ ಆ ಹ್ಯಾಂಡ್ಶೇಕ್ ವಿಡಿಯೋ -
ಬೆಂಗಳೂರಲ್ಲಿ RCB ಪಂದ್ಯ: ಏ.15ರಂದು ಸ್ಟೇಡಿಯಂ ಸುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು











Click it and Unblock the Notifications