RCB Vs SRH: ಎಸ್‌ಆರ್‌ಎಚ್‌ ವಿರುದ್ಧ ಆರ್‌ಸಿಬಿ ಪ್ಲೇಯಿಂಗ್‌ 11 ಹೇಗಿದೆ ಗೊತ್ತಾ?

RCB Vs SRH: ಐಪಿಎಲ್‌ 2025ರ 65ನೇ ಹೈವೋಲ್ಟೇಜ್‌ ಪಂದ್ಯ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್‌ ನಡುವೆ ಲಕ್ನೋದಲ್ಲಿ ನಡೆಯಲಿದೆ. ಈ ಹಿನ್ನೆಲೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವುದು ತುಂಬಾ ಜನರಲ್ಲಿ ಕಾಡುವ ಪ್ರಶ್ನೆಯಾಗಿದೆ. ಹಾಗಾದ್ರೆ ಅದಕ್ಕೆ ಉತ್ತರ ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆ ಐಪಿಎಲ್‌ 2025 ಟೂರ್ನಿಯನ್ನು ಅರ್ಧಕ್ಕೆ ರದ್ದುಗೊಳಿಸಿ ಒಂದು ವಾರಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಆಟಗಾರರು, ಅಭಿಮಾನಿಗಳ ಹಿತದೃಷ್ಟಿಯಿಂದ ಪ್ರಾಂಚೈಸಿಗಳ ಮನವಿ ಮೇರೆಗೆ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿತ್ತು. ಬಳಿಕ ಎರಡು ರಾಷ್ಟ್ರಗಳ ನಡುವೆ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಐಪಿಎಲ್‌ ಉಳಿದ ಪಂದ್ಯಗಳಿಗೆ ಮತ್ತೆ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಮೇ 17ರಿಂದ ಪಂದ್ಯಾವಳಿಗಳು ಆರಂಭ ಆಗಿವೆ.

Know RCB playing 11 against SRH

ಹೊಸ ವೇಳಾಪಟ್ಟಿ ಪ್ರಕಾರ, ಮೊದಲ ಪಂದ್ಯ ಕೆಕೆಆರ್ ಹಾಗೂ ಆರ್‌ಸಿಬಿ ನಡುವೆ ಎಂ.ಚಿನ್ನಸ್ವಾಮಿಯಲ್ಲಿ ನಡೆಯಬೇಕಿತ್ತು. ಬೆಂಗಳೂರಿನಲ್ಲಿ ಭಾರೀ ಮಳೆ ಮುಂದುವರೆದ ಕಾರಣ ಪಂದ್ಯ ರದ್ದು ಮಾಡಿ ಎರಡು ತಂಡಗಳಿಗೆ ತಲಾ ಒಂದು ಅಂಕಗಳನ್ನು ನೀಡಲಾಗಿತ್ತು. ಹಾಗೆಯೇ ಮೇ 23ರಂದು ಸಹ ಇದೇ ತವರು ಮೈದಾನದಲ್ಲೇ ಎಸ್‌ಆರ್‌ಎಚ್‌ ವಿರುದ್ಧ ಸೆಣಸಬೇಕಿತ್ತು. ಆದರೆ, ಮತ್ತೆ ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ಈ ಪಂದ್ಯವನ್ನು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣಕ್ಕೆ ಶಿಫ್ಟ್‌ ಮಾಡಲಾಗಿದೆ.

ಆರಂಭದಿಂದಲೂ ಬ್ಯಾಟಿಂಗ್‌, ಬೌಲಿಂಗ್‌ ವಿಭಾಗದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಈ ಮೂಲಕ ಪ್ಲೇ ಆಫ್‌ ಕೂಡ ಪ್ರವೇಶ ಮಾಡಿದ್ದು, ಉಳಿದ ಎರಡು ಲೀಗ್‌ ಪಂದ್ಯಗಳನ್ನು ಆಡಬೇಕಿದೆ. ಇವೆರಡರಲ್ಲಿ ಗೆಲುವು ಸಾಧಿಸಿದ್ರೆ, ಕ್ವಾಲಿಫೈಯರ್ ಪಂದ್ಯವನ್ನು ಆಡಬಹುದು. ಆದ್ದರಿಂದ ನಾಳೆ ನಡೆಯಲಿರುವ ಎಸ್‌ಆರ್‌ಎಚ್‌ ವಿರುದ್ಧ ಆರ್‌ಸಿಬಿ ಪಡೆ ಗೆದ್ದೇ ಗೆಲ್ಲಬೇಕೆಂಬ ಪಣ ತೊಟ್ಟಿದೆ. ಇದಕ್ಕಾಗಿ ಆರ್‌ಸಿಬಿ ಭರ್ಜರಿ ಸಿದ್ಧತೆ ನಡೆಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಪಿಲಿಪ್ ಸಾಲ್ಟ್, ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ (ನಾಯಕ ಮತ್ತು ವಿ.ಕೀ), ರೊಮಾರಿಯೋ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಯಶ್ ದಯಾಲ್, ಸುಯಶ್ ಶರ್ಮಾ.

ಎಸ್‌ಆರ್‌ಎಚ್‌ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಇಶಾನ್ ಕಿಶನ್, ಅಥರ್ವ ತೈಡೆ, ಅಭಿನವ್ ಮನೋಹರ್, ಅನಿಕೇತ್ ವರ್ಮಾ, ಸಚಿನ್ ಬೇಬಿ, ಸ್ಮರಣ್ ರವಿಚಂದ್ರನ್, ಹೆನ್ರಿಚ್ ಕ್ಲಾಸೆನ್ (ವಿ.ಕೀ.), ಟ್ರಾವಿಸ್ ಹೆಡ್, ಹರ್ಷಲ್ ಪಟೇಲ್, ಕಮಿಂದು ಮೆಂಡಿಸ್, ವಿಯಾನ್ ಮುಲ್ಡರ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಶಮಿ, ರಾಹುಲ್ ಚಾಹರ್, ಸಿಮರ್ಜೀತ್ ಸಿಂಗ್, ಜೀಶಣ್ ಅನ್ಸಾರಿ, ಜಯದೇವ್ ಉನಾದ್ಕಟ್, ಇಶಾನ್ ಮಲಿಂಗಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+