RCB: ದತ್ತು ಪುತ್ರ vs ಮನೆ ಮಗ... ಕೆ.ಎಲ್‌ ರಾಹುಲ್‌ - ವಿರಾಟ್‌ ಕೊಹ್ಲಿ, ವಾಗ್ವಾದ & ತಮಾಷೆ ವೈರಲ್ ವಿಡಿಯೋ ಇಲ್ಲಿದೆ!

ಆರ್‌ಸಿಬಿ ಹೊಸ ದಾಖಲೆ: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನೆನ್ನೆ ನಡೆದ ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ ಮ್ಯಾಚ್‌ನಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿ ಪಾಯಿಂಟ್‌ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಇದೇ ಸಂದರ್ಭದಲ್ಲಿ ದತ್ತು ಪುತ್ರ vs ಮನೆ ಮಗ ಅಂತನೇ ಕನ್ನಡಿಗರು ಕರೆಯುವ ಕೆ.ಎಲ್‌ ರಾಹುಲ್‌ ಹಾಗೂ ವಿರಾಟ್‌ ಕೊಹ್ಲಿ ಅವರ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ವಿರಾಟ್‌ ಕೊಹ್ಲಿ ಯಾರಾದರೂ ಏನಾದರೂ ಕೊಟ್ಟರೆ ತಿರುಗಿಸಿ ಕೊಡದೆ ಬಿಟ್ಟಿದ್ದೇ ಇಲ್ಲ... ಈ ಮ್ಯಾಚ್‌ನಲ್ಲೂ ಅವರು ಕೆ.ಎಲ್‌ ರಾಹುಲ್‌ಗೆ ಇದು ನನ್ನ ಗ್ರೌಂಡ್‌ ಅಂತ ಹೇಳಿದ್ದಾರೆ. ಆದರೆ, ಇಬ್ಬರು ನಗುತ್ತಲ್ಲೇ ಮಾತನಾಡಿಕೊಂಡಿರುವುದು ವಿಡಿಯೋದಲ್ಲಿ ಇದೆ. 8ನೇ ಓವರ್‌ನಲ್ಲಿ ಇಬ್ಬರ ನಡುವೆ ಕಿರಿಕ್‌ ಸಹ ಆಗಿದೆ. ಆ ಎರಡೂ ವಿಡಿಯೋಗಳು ವೈರಲ್ ಆಗುತ್ತಿವೆ.

ಭಾನುವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಭರ್ಜರಿ ಗೆಲುವು ದಾಖಲಿಸಿದೆ. ಈ ಮ್ಯಾಚ್‌ನ ಪ್ರಾರಂಭದಲ್ಲಿ ಆರ್‌ಸಿಬಿ ಎಡವಿತ್ತು 26 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಇನ್ನೇನು ಮ್ಯಾಚ್ ಸಂಕಷ್ಟದ ಹಾದಿಯಲ್ಲಿದೆ ಎನ್ನುವಾಗ ಹೊಸ ತಿರುವು ಪಡೆದುಕೊಂಡಿತು. ಈ ನಡುವೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಆರ್‌ಸಿಬಿ ಒತ್ತಡಕ್ಕೆ ಒಳಗಾದಾಗಲೇ ಕೆ.ಎಲ್‌ ರಾಹುಲ್‌ ಹಾಗೂ ವಿರಾಟ್‌ ಕೊಹ್ಲಿ ನಡುವೆ ಕಿರಿಕ್‌ ನಡೆದಿದೆ.

KL Rahul vs Virat Kohli Argument and Funny Video Goes Viral RCB

8ನೇ ಓವರ್‌ನಲ್ಲಿ ಕಿರಿಕ್‌... ಇನ್ನು ಆರ್‌ಸಿಬಿಯ ಇನ್ಸಿಂಗ್ಸ್‌ನಲ್ಲಿ ಇಬ್ಬರ ನಡುವೆ ವಾಕ್ಸಮರ ನಡೆದಿರುವುದು ವಿಡಿಯೋದಲ್ಲಿದೆ. 8ನೇ ಓವರ್‌ನಲ್ಲಿ ಕುಲದೀಪ್ ಯಾದವ್ ಅವರು ಬೌಲಿಂಗ್‌ ಮಾಡುತ್ತಿದ್ದರು. ಆಗ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಪರಸ್ಪರ ವಾಗ್ವಾದವಾಗಿದೆ.

ಕೆಎಲ್ ರಾಹುಲ್ ಅವರು ಫೀಲ್ಡಿಂಗ್ ಸೆಟ್ ಮಾಡುವಾಗ ಕೊಹ್ಲಿ ಗರಂ ಆಗಿದ್ದಾರೆ. ರಾಹುಲ್‌ ಬಳಿ ನೇರವಾಗಿ ಮಾತನಾಡಿದ್ದು ಇದಕ್ಕೆ ರಾಹುಲ್‌ ಸಹ ಕೋಪದಲ್ಲಿ ಉತ್ತರಿಸಿರುವುದು ವಿಡಿಯೋದಲ್ಲಿ ಇದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಆದರೆ ಯಾವ ಕಾರಣಕ್ಕೆ ಈ ವಾಗ್ವಾದ ನಡೆದಿದೆ ಎನ್ನುವುದು ಸ್ಪಷ್ಟವಾಗಿ ಕೇಳಿಸಿಲ್ಲ.

ನನ್ನ ಗ್ರೌಂಡ್ ಗುರು...

ಈಚೆಗೆ ನಡೆದಿದ್ದ ಆರ್‌ಸಿಬಿ vs ಡಿಸಿ ಮ್ಯಾಚ್‌ನಲ್ಲಿ ಕೆಎಲ್‌ ರಾಹುಲ್‌ ಅವರು, ಬೆಂಗಳೂರಿನಲ್ಲಿ ಇದು ನನ್ನ ಗ್ರೌಂಡ್ ಅಂತ ಹೇಳಿ ಸಂಭ್ರಮಾಚರಣೆ ಮಾಡಿದ್ದರು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಗೆದ್ದ ಮೇಲೆ ಇದು ನನ್ನ ಗ್ರೌಂಡ್ ಅಂತ ಬ್ಯಾಟ್‌ನಲ್ಲಿ ವೃತ್ತಾಕಾರದಂತೆ ತೋರಿಸಿ ರಾಹುಲ್‌ ಸಂಭ್ರಮಿಸಿದ್ದರು.

ಭಾನುವಾರ ಪಂದ್ಯ ಮುಕ್ತಾಯದ ಮೇಲೆ ರಾಹುಲ್‌ ಬಳಿ ಬಂದ ಕೊಹ್ಲಿ, ಖಾಲಿ ಕೈಯಿಂದಲೇ ಅವರ ಮುಂದೆಯೇ ವೃತ್ತ ಸುತ್ತಿ ಇದು ನನ್ನ ಗ್ರೌಂಡ್‌ ಅಂತ ಹೇಳಿದ್ದು ತಮಾಷೆ ಮಾಡಿದ್ದಾರೆ. ಇದಕ್ಕೆ ಕೆ.ಎಲ್‌ ರಾಹುಲ್‌ ಹಾಗೂ ಸಹ ಆಟಗಾರರು ಸಹ ನಕ್ಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+